Hawala Racket: 2 ಸಾವಿರ ನೋಟು ಬದಲಾವಣೆ ಬೆನ್ನಲ್ಲೇ ಹವಾಲಾ ದಂಧೆ ಹಾವಳಿ, ಪೊಲೀಸ್ ಅಲರ್ಟ್

|

Updated on: May 24, 2023 | 9:38 AM

ನೋಟ್ ಬದಲಾವಣೆ ವೇಳೆ ವಂಚನೆ ನಡೆಯುವ ಸಾಧ್ಯತೆ ಹೆಚ್ಚಿದ್ದು ಹವಾಲಾ ಬದಲಾವಣೆಯೂ ಜಾಸ್ತಿ ಆಗುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು, ಇಡಿ ಅಧಿಕಾರಿಗಳು ಹವಾಲಾ ದಂಧೆ ಮೇಲೆ ಕಣ್ಣೀಟ್ಟಿದ್ದಾರೆ.

Hawala Racket: 2 ಸಾವಿರ ನೋಟು ಬದಲಾವಣೆ ಬೆನ್ನಲ್ಲೇ ಹವಾಲಾ ದಂಧೆ ಹಾವಳಿ, ಪೊಲೀಸ್ ಅಲರ್ಟ್
ಹಣ
Follow us on

ಬೆಂಗಳೂರು: 2000 ಮುಖಬೆಲೆ ನೋಟ್ ಬದಲಾವಣೆಗೆ RBI ಆದೇಶ ಹಿನ್ನೆಲೆ ನಿನ್ನೆಯಿಂದ ಬ್ಯಾಂಕ್​ಗಳಲ್ಲಿ ನೋಟ್ ಬದಲಾವಣೆಗೆ ಅವಕಾಶ ನೀಡಲಾಗಿದೆ(2000 Note Exchange). ಈ ಹಿನ್ನೆಲೆ ಬೆಂಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ನೋಟ್ ಬದಲಾವಣೆ ವೇಳೆ ವಂಚನೆ ನಡೆಯುವ ಸಾಧ್ಯತೆ ಹೆಚ್ಚಿದ್ದು ಹವಾಲಾ ಬದಲಾವಣೆಯೂ ಜಾಸ್ತಿ ಆಗುವ ಸಾಧ್ಯತೆ ಇದೆ(Hawala Scam). ಹೀಗಾಗಿ ಪೊಲೀಸರು, ಇಡಿ ಅಧಿಕಾರಿಗಳು ಹವಾಲಾ ದಂಧೆ ಮೇಲೆ ಕಣ್ಣೀಟ್ಟಿದ್ದಾರೆ.

2000 ಮುಖಬೆಲೆಯ ನೋಟುಗಳ ವಿತರಣೆಯನ್ನ ಆರ್‌ಬಿಐ ಬಂದ್‌ ಮಾಡಿದೆ. ಅದ್ರ ಬೆನ್ನಲ್ಲೇ ಸೆಪ್ಟೆಂಬರ್ 30ರ ಒಳಗೆ ನೋಟುಗಳನ್ನು ಬ್ಯಾಂಕುಗಳಿಗೆ ವಾಪಾಸ್ ನೀಡುವಂತೆ ಆರ್‌ಬಿಐ ಆದೇಶ ಹೊರಡಿಸಿದೆ. ಹೀಗಾಗಿ ಮೇ 23ರಿಂದಲೇ ಜನ ಬ್ಯಾಂಕ್​ಗಳತ್ತ ಮುಖ ಮಾಡಿದ್ದು 2 ಸಾವಿರದ ನೋಟುಗಳನ್ನು ಬದಲಾಯಿಸುತ್ತಿದ್ದಾರೆ. ಇನ್ನು ಕೆಲ ಖದೀಮರು ಈ ಸಮಯವನ್ನು ಉಪಯೋಗಿಸಿಕೊಳ್ಳಲು ಹವಾಲಾ ದಂಧೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸರು ಅಲರ್ಟ್ ಆಗಿದ್ದಾರೆ. ಕೆಲವರು ಮಧ್ಯವರ್ತಿಗಳ ಹೆಸರಿನಲ್ಲಿ ಹೆಚ್ಚಿನ ಹಣ ಬದಲಾಯಿಸಿಕೊಡುವುದಾಗಿ ಹೇಳಿ ಮೋಸ ಮಾಡುವ ಸಾಧ್ಯತೆ ಇದೆ. ಹಾಗೂ ಹೆಚ್ಚಿಕ ಕಮೀಷನ್ ಪಡೆದು ಹಣ ಬದಲಾಯಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: RBI: 2,000 ರೂ ನೋಟು ವಿನಿಮಯ: ಬ್ಯಾಂಕುಗಳಿಗೆ ಆರ್​ಬಿಐ ಮಾರ್ಗಸೂಚಿ ಬಿಡುಗಡೆ; ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಿದು

ಕೇವಲ ಬ್ಯಾಂಕುಗಳಲ್ಲಿ ಮಾತ್ರ ಹಣ ಬದಲಾವಣೆ ಮಾಡಬೇಕು. ಹೆಚ್ಚಿನ ಹಣ ಬದಲಾವಣೆಗಾಗಿ ಮಧ್ಯವರ್ತಿಗಳ ಮೊರೆ ಹೋದ್ರೆ ಸಂಕಷ್ಟ ಎದುರಾಗಲಿದೆ. ಮಧ್ಯವರ್ತಿಗಳು ವಂಚನೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತೆ. ಹೀಗಾಗಿ ಇಂತಹ ಟ್ರಾನ್ಸಾಕ್ಷನ್​ಗಳ ಮೇಲೆ ಕಣ್ಣಿಡಲು ಪೊಲೀಸರು ಅಲರ್ಟ್ ಆಗಿದ್ದಾರೆ. ಜೊತೆಗೆ ಇ.ಡಿ ಅಧಿಕಾರಿಗಳು ಕೂಡ ಹವಾಲಾ ಮೇಲೆ ಕಣ್ಣಿಟ್ಟಿದ್ದಾರೆ. ದೇಶಾದ್ಯಂತ ಇರುವ ಎರಡು ಸಾವಿರ ರೂಪಾಯಿ ಮುಖ ಬೆಲೆ ಕಪ್ಪು ಹಣ ಹವಾಲ ಆಗುವ ಸಾಧ್ಯತೆ ಇದೆ. ಹವಾಲಕ್ಕೆ ಬಳಸುತಿದ್ದ ಹಣ ಈಗ ಹೊರಗೆ ಬರುತ್ತೆ. ಈ ಹಣಕ್ಕೆ ಯಾವುದೇ ದಾಖಲಾತಿಗಳು ಇರೋದಿಲ್ಲ. ಅಂತಹ ಹಣ ಜಪ್ತಿಯಾಗಬೇಕು. ಅದನ್ನು ಸಣ್ಣ ಪ್ರಮಾಣದಲ್ಲಿ ಬೇರ್ಪಡಿಸಿ ಐದುನೂರು ನೋಟಾಗಿ ಬದಲಾವಣೆ ಮಾಡಿಸುವ ಸಾಧ್ಯತೆ ಹೆಚ್ಚಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:32 am, Wed, 24 May 23