Textbook Controversy: ಶಾಲಾರಂಭಕ್ಕೂ ಮುನ್ನವೇ ಮತ್ತೆ ಶುರುವಾಯ್ತು ಪಠ್ಯ ಪರಿಷ್ಕರಣೆ ದಂಗಲ್, ಹೆಡ್ಗೆವಾರ್ ಪಾಠಕ್ಕೆ ಬೀಳುತ್ತಾ ಬ್ರೇಕ್?

ಹೊಸ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ಪಠ್ಯ ಪರಿಷ್ಕರಣೆಯ ದಂಗಲ್ ಮುನ್ನಲೆಗೆ ಬಂದಿದೆ. ಪಠ್ಯಪುಸ್ತಕದಿಂದ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣಕ್ಕೆ ಕತ್ತರಿ ಹಾಕುವಂತೆ ಹಾಗೂ ಚಕ್ರವರ್ತಿ ಸೂಲಿಬೆಲೆ ಪಾಠವನ್ನ ತಗೆದು ಹಾಕುವಂತೆ ಒತ್ತಾಯ ಕೇಳಿಬರುತ್ತಿದೆಯಂತೆ.

Textbook Controversy: ಶಾಲಾರಂಭಕ್ಕೂ ಮುನ್ನವೇ ಮತ್ತೆ ಶುರುವಾಯ್ತು ಪಠ್ಯ ಪರಿಷ್ಕರಣೆ ದಂಗಲ್, ಹೆಡ್ಗೆವಾರ್ ಪಾಠಕ್ಕೆ ಬೀಳುತ್ತಾ ಬ್ರೇಕ್?
ಸಾಂದರ್ಭಿಕ ಚಿತ್ರImage Credit source: Zee News
Follow us
| Updated By: Digi Tech Desk

Updated on:May 24, 2023 | 3:09 PM

ಬೆಂಗಳೂರು: ಶಾಲೆ ಆರಂಭಕ್ಕೂ ಮುನ್ನವೇ ಪಠ್ಯ ಪರಿಷ್ಕರಣೆಯ(Text Book Revision)  ದಂಗಲ್ ಮತ್ತೆ ಶುರುವಾಗಿದೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ, ರೋಹಿತ್‌ ಚಕ್ರತೀರ್ಥ(Rohit Chakrathirtha) ನೇತೃತ್ವದಲ್ಲಿ ಪಠ್ಯ ಪರಿಶೀಲನೆಗೆ ರಚಿಸಿದ್ದ ಸಮಿತಿ ಮೂಲಕ ಪಠ್ಯವನ್ನು ಪುನರ್‌ ಪರಿಷ್ಕರಿಸಿತು. ಆಗ ಟಿಪ್ಪು ಸುಲ್ತಾನ್ ಸೇರಿದಂತೆ ಕೆಲವರ ಬಗೆಗಿನ ಪಾಠ ಕೈಬಿಡಲಾಗಿದೆ ಎಂಬ ಆರೋಪಗಳು, ಬಿಸಿ ಬಿಸಿ ಚರ್ಚೆಗಳು ನಡೆದಿದ್ದವು. ಸದ್ಯ ಈಗ ಮತ್ತೆ ಪಠ್ಯ ಪರಿಷ್ಕರಣೆ ಮಾಡಲಾಗುತ್ತೆ ಎಂಬ ಚರ್ಚೆಗಳು ನಡೆಯುತ್ತಿವೆ.

ಹೊಸ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ಪಠ್ಯ ಪರಿಷ್ಕರಣೆಯ ದಂಗಲ್ ಮುನ್ನಲೆಗೆ ಬಂದಿದೆ. ಪಠ್ಯಪುಸ್ತಕದಿಂದ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣಕ್ಕೆ ಕತ್ತರಿ ಹಾಕುವಂತೆ ಹಾಗೂ ಚಕ್ರವರ್ತಿ ಸೂಲಿಬೆಲೆ ಪಾಠವನ್ನ ತಗೆದು ಹಾಕುವಂತೆ ಒತ್ತಾಯ ಕೇಳಿಬರುತ್ತಿದೆಯಂತೆ. 10ನೇ ತರಗತಿಯ ಕನ್ನಡ ವಿಷಯದಲ್ಲಿ ಆದರ್ಶ ಪುರಷ ಯಾರಗಬೇಕು ಎನ್ನೋ ಶಿರ್ಷಿಕೆಯಡಿ ಕೆ.ಬಿ. ಹೆಡ್ಗೆವಾರ್ ಪಾಠವನ್ನು ಈ ಹಿಂದೆ ರೋಹಿತ್ ಚಕ್ರತೀರ್ಥ ಸಮಿತಿಯಡಿ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಸೇರ್ಪಡೆ ಮಾಡಿದ್ದರು. ಅದ್ರೆ ಈಗ ಇದನ್ನು ತೆಗೆದುಹಾಕಲು ಒತ್ತಡ ಹಾಕಲಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಿಯು ಪಠ್ಯ ಪರಿಷ್ಕರಣೆ ವಿವಾದ: ಸರ್ಕಾರಕ್ಕೆ ಮತ್ತೆ ಟಾಂಗ್ ಕೊಟ್ಟ ರೋಹಿತ್ ಚಕ್ರತೀರ್ಥ

ಬಿಜೆಪಿ ಸರ್ಕಾರದಲ್ಲಿ ಸೇರಿಸಲಾದ ಕೆಲವು ಪಾಠಗಳನ್ನು ತೆಗೆಯುವಂತೆ ಶಿಕ್ಷಣ ತಜ್ಞರ ಸಲಹೆ

10 ನೇ ತರಗತಿ ಪಠ್ಯದಲ್ಲಿ ಇರುವ ಚಕ್ರವರ್ತಿ ಸೂಲಿಬೆಲೆಯ ತಾಯಿ ಭಾರತಿಯರು ಅಮರಪುತ್ರರು ಎಂಬ ಪಠ್ಯಕ್ಕೂ ಕತ್ತರಿ ಹಾಕಲು ಶಿಕ್ಷಣ ತಜ್ಞರು ಸೇರಿದಂತೆ ಕೆಲವು ಹಿರಿಯ ಸಾಹಿತಿಗಳಿಂದ ಒತ್ತಾಯ ಕೇಳಿಬರುತ್ತಿದೆಯಂತೆ. ಶಿಕ್ಷಣ ತಜ್ಞ ನಿರಂಜನ್ ಆರಾಧ್ಯಾ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ RSS ಸಂಸ್ಥಾಪಕರ ಹಾಗೂ ಚಕ್ರವರ್ತಿ ಸೂಲಿಬೆಲೆಯವರ ಪಾಠಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. ಕೇಸರಿ ಪಠ್ಯ ಮಕ್ಕಳ ಕಲಿಕೆಗೆ ಬೇಡಾ. ಕಳೆದ ಬಿಜೆಪಿ ಸರ್ಕಾರ ಮಕ್ಕಳ ಪಠ್ಯವನ್ನ ಕೇಸರಿ ಕರಣ ಮಾಡಿದೆ. ರೋಹಿತ್ ಚಕ್ರತೀರ್ಥ ಸಮಿತಿ ಬಸವಣ್ಣ, ಕುವೆಂಪು, ಬಿ.ಆರ್. ಅಂಬೇಡ್ಕರ್, ಟಿಪ್ಪು ಸುಲ್ತಾನ್ ಅವರನ್ನು ಅವಮಾನ ಮಾಡಿದೆ. ಹೀಗಾಗಿ ಈ ಕೂಡಲೇ ರೋಹಿತ್ ಚಕ್ರತೀರ್ಥ ಪರಿಷ್ಕರಣೆಯ ಪಠ್ಯವನ್ನ ತಗೆದು ಹಾಕಬೇಕು. ಈಗಾಗಲೇ ಪಠ್ಯ ಮುದ್ರಣವಾಗಿದೆ ಹೀಗಾಗಿ ಈ ವರ್ಷ ಹೆಡ್ಗೆವಾರ್ ಹಾಗೂ ಸೂಲಿಬೆಲೆ ಸೇರಿದಂತೆ ಕೆಲವು ಪಾಠ ಮಾತ್ರ ತಗೆದು ಹಾಕಿ. ಹಳೆಯ ಅಂದ್ರೆ 2019 ರ ಬರಗೂರು ರಾಮಚಂದ್ರಪ್ಪನವರ ಪರಿಷ್ಕರಣೆಯಂತೆ ಪಠ್ಯವನ್ನೇ ಮುಂದುವರೆಸುವಂತೆ ಶಿಕ್ಷಣ ತಜ್ಞ ನಿರಂಜನ್ ಆರಾಧ್ಯಾ ಒತ್ತಾಯಿಸಿದ್ದಾರೆ. ಮುಂದಿನ ವರ್ಷ ಅವಶ್ಯವಾದ್ರೆ ಸಂಪೂರ್ಣ ಪಠ್ಯ ಪರಿಷ್ಕರಣೆ ಬದಲಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:04 am, Wed, 24 May 23

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ