ಬೆಂಗಳೂರು, ಅ.15: ಉಡುಪಿಯಿಂದ ಬೆಂಗಳೂರಿಗೆ ಐರಾವತ ಬಸ್(Airavat Bus)ನಲ್ಲಿ ಬರುತ್ತಿದ್ದ ಪ್ರಯಾಣಿಕನ ಬಳಿ ಇದ್ದ 3 ಲಕ್ಷ ಮೌಲ್ಯದ 60 ಗ್ರಾಂ ಬಂಗಾರದ ಕಂಠಿಹಾರ ಹಾಗೂ ಎರಡು ಉಂಗುರಗಳನ್ನು ಕಳ್ಳತನ ಮಾಡಿದ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಘವೇಂದ್ರ ಎಂಬುವರಿಗೆ ಸೇರಿದ ಚಿನ್ನಾಭರಣ ಇದಾಗಿದ್ದು, ಜಾಲಹಳ್ಳಿ ಕ್ರಾಸ್ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ಬಂದರಿನಲ್ಲಿ ನಿಲ್ಲಿಸಿದ್ದ ಬೋಟ್ನಲ್ಲಿ ಆಕಸ್ಮಿಕ ಕಾಣಿಸಿಕೊಂಡಿದೆ. ನರಸಿಂಹ ಗೋವಿಂದ ಖಾರ್ವಿ ಎಂಬುವರಿಗೆ ಸೇರಿದ ಬೋಟ್ ಇದಾಗಿದ್ದು, ದುರಸ್ತಿ ಕಾರಣಕ್ಕೆ 3 ವರ್ಷದಿಂದ ನಿಲ್ಲಿಸಿಡಲಾಗಿತ್ತು. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ರಾತ್ರೋ ರಾತ್ರಿ ಮನೆ ಕಳ್ಳತನ ಮಾಡಲು ಬಂದು ಕಳ್ಳರು, ಪೇಚೆಗೆ ಸಿಲುಕಿದ ಘಟನೆ ಹಾವೇರಿ ತಾಲೂಕು ಕಬ್ಬೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಹೌದು, ಬಂದ ಮೂವರಲ್ಲಿ ಒಬ್ಬ ಕಳ್ಳ ರಾಜಾಭಕ್ಷ್ ಎಂಬಾತ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಆತನನ್ನು ಗ್ರಾಮಸ್ಥರು ಬಸವಣ್ಣನ ದೇವಸ್ಥಾನದ ಎದುರಿಗಿನ ಕಂಬಕ್ಕೆ ಕಟ್ಟಿ ಗೂಸಾ ಕೊಟ್ಟಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿ ರಾತ್ರಿ ಮನೆ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ಕಳ್ಳರು, ಮನೆ ದೋಚಿ ಪರಾರಿಯಾಗುವಾಗ ಒಬ್ಬ ಕಳ್ಳ ಗ್ರಾಮಸ್ಥರ ಕೈಗೆ ಸಿಕ್ಕಿದ್ದು, ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ.
ಸಿದ್ದಪ್ಪ ಒಡ್ಡಿಗೇರಿ ಎಂಬುವವರ ಮನೆ ಮಂದಿ ಎಲ್ಲರೂ ಅನ್ಯಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಮನೆ ಬೀಗ ಹಾಕಿದ್ದನ್ನು ನೋಡಿ ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದ ಕಳ್ಳರು, ಸ್ಕೆಚ್ ಪ್ರಕಾರ ಕಳ್ಳತನ ಮಾಡಲು ಬಂದಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಚಲನ ವಲನ ಗಮನಿಸಿದ್ದ ಗ್ರಾಮದ ಕೆಲ ರೈತರು, ಹೊಲಗಳಿಗೆ ನೀರು ಹಾಯಿಸಲು ಹೊರಟ ರೈತರು ಕಳ್ಳರ ಹುಡುಕಾಟ ನಡೆಸಿದ್ದರು, ಈ ವೇಳೆ ಒಬ್ಬ ಕಳ್ಳ ಸಿಕ್ಕಿ ಬಿದ್ದಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ