ಬೆಂಗಳೂರು: ಟೈಲ್ಸ್ ಕೆಲಸಕ್ಕೆ ಬಂದು ಜೈನ್ ಮಂದಿರದಲ್ಲಿ ಕಳ್ಳತನ ಮಾಡಿದ್ದ ಆರೊಪಿಗಳು ಅರೆಸ್ಟ್
ಜೈನ್ ಮಂದಿರದಲ್ಲಿ ಟೈಲ್ಸ್ ಕೆಲಸ ಮಾಡಲು ಬಂದಿದ್ದ ವ್ಯಕ್ತಿಯೇ ಕಳ್ಳತನಕ್ಕೆ ಹೊಂಚು ಹಾಕಿದ್ದು ಟೈಲ್ಸ್ ಕೆಲಸ ಮುಗಿದ ಎರಡು ತಿಂಗಳು ನಂತರ ಸ್ನೇಹಿತರೊಂದಿಗೆ ಕಳ್ಳತನ ಮಾಡಿದ್ದಾರೆ. 14 ಕೆಜಿ ದೇವರ ಬೆಳ್ಳಿಯ ಆಭರಣ, ದೇವಾಲಯದ ವಸ್ತುಗಳ ಕಳ್ಳತನವಾಗಿತ್ತು.
ಬೆಂಗಳೂರು, ಅ.10: ಬೆಂಗಳೂರಿನ ಅಶೋಕ್ನಗರದ ಜೈನ್ ಮಂದಿರದಲ್ಲಿ ನಡೆದಿದ್ದ ಕಳ್ಳತನ (Theft) ಪ್ರಕರಣದ ಆರೋಪಿಗಳನ್ನು ಪೊಲೀಸರು (Ashok Nagar Police) ಬಂಧಿಸಿದ್ದಾರೆ. ಜೈನ್ ಮಂದಿರದಲ್ಲಿ ಟೈಲ್ಸ್ ಕೆಲಸ ಮಾಡಲು ಬಂದಿದ್ದ ವ್ಯಕ್ತಿಯೇ ಕಳ್ಳತನಕ್ಕೆ ಹೊಂಚು ಹಾಕಿದ್ದು ಟೈಲ್ಸ್ ಕೆಲಸ ಮುಗಿದ ಎರಡು ತಿಂಗಳು ನಂತರ ಸ್ನೇಹಿತರೊಂದಿಗೆ ಕಳ್ಳತನ ಮಾಡಿದ್ದಾರೆ. 14 ಕೆಜಿ ದೇವರ ಬೆಳ್ಳಿಯ ಆಭರಣ, ದೇವಾಲಯದ ವಸ್ತುಗಳ ಕಳ್ಳತನವಾಗಿತ್ತು. ಸದ್ಯ 6 ಜನ ಆರೋಪಿಗಳನ್ನು ಅಶೋಕ್ನಗರದ ಪೊಲೀಸರು ಬಂಧಿಸಿದ್ದಾರೆ.
10 ರೂ ಎಸೆದು 1 ಲಕ್ಷ ದೋಚಿದ ಖದೀಮ
ರಸ್ತೆಗೆ 10 ರೂ. ನೋಟು ಬಿಸಾಡಿ 1 ಲಕ್ಷ ಹಣವನ್ನ ದುಷ್ಕರ್ಮಿ ಎಗರಿಸಿದ್ದಾನೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ಬ್ಯಾಂಕ್ನಿಂದ ಹಣ ಡ್ರಾಮಾಡಿಕೊಂಡು ಬರುತ್ತಿದ್ದ ವೇಳೆ ಖದೀಮ ಕೈಚಳಕ ತೋರಿಸಿದ್ದಾನೆ. ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಡ್ರಾ ಮಾಡಿ ಬರುತ್ತಿದ್ದರು. ಈ ವೇಳೆ ರಸ್ತೆಗೆ 10 ರೂ. ನೋಟು ಬಿಸಾಡಿ ಹಣ ಬಿದ್ದಿದ್ದೆ ಅಂತಾ ದುಷ್ಕರ್ಮಿ ಹೇಳಿದ್ದ. 1 ಲಕ್ಷ ಹಣವಿದ್ದ ಕವರ್ ಬೈಕ್ ಬಳಿ ಬಿಟ್ಟು 10 ರೂ. ಎತ್ತಿಕೊಳ್ಳಲು ರಾಘವೇಂದ್ರ ಮುಂದಾಗಿದ್ದರು. ಈ ವೇಳೆ ಕ್ಷಣಾರ್ಧದಲ್ಲಿ 1 ಲಕ್ಷ ಹಣವಿದ್ದ ಕವರ್ ಎಗರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಖತರ್ನಾಕ್ ಕಳ್ಳನ ಕೈಚಳಕ ಬ್ಯಾಂಕ್ ಮುಂದಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಡ್ರಗ್ಸ್ನಷ್ಟೇ ಮೊಬೈಲ್ ಕೂಡ ದೊಡ್ಡ ಅಡಿಕ್ಷನ್; ಮನೋವೈದ್ಯರು ಹೇಳೋದೇನು?
ಇಂಡಿಯನ್ ಮಾರ್ಷಲ್ ತಳಿಯ ದೊಡ್ಡ ಗ್ರಾತದ ಮೊಸಳೆ ಪ್ರತ್ಯಕ್ಷ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೃಹತ್ ಗ್ರಾತದ ಮೊಸಳೆ ಪ್ರತ್ಯಕ್ಷವಾಗಿದೆ. ಬಿಸಿಲು ಕಾಯಲು ಬಂಡೆ ಮೇಲೆ ಬಂದು ಮಲಗಿದ ಬೃಹತ್ ಗಾತ್ರದ ಮೊಸಳೆ ನೋಡಿ ಜನ ಅಚ್ಚರಿ ಪಟ್ಟಿದ್ದಾರೆ. ಮೊಸಳೆ ಪಕ್ಕದಲ್ಲಿ ಕೊಕ್ಕರೆಗಳ ಹಿಂಡು ಕಾಣಿಸಿಕೊಂಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ