AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯನ್ನು ಬಿಟ್ಟು ದೊಡ್ಡಮ್ಮನ ಬಳಿ ಇದ್ದ 3 ವರ್ಷದ ಮಗುವನ್ನು ಬಲಿಪಡೆದ ಬಿಎಂಟಿಸಿ ಬಸ್!

ತಾಯಿಯನ್ನು ಬಿಟ್ಟು ದೊಡ್ಡಮ್ಮನ ಬಳಿ ಇದ್ದ 3 ವರ್ಷದ ಮಗುವನ್ನು ಇದೀಗ ಬಿಎಂಟಿಸಿ ಬಸ್ ಬಲಿ ಪಡೆದುಕೊಂಡಿದೆ. ಹೌದು ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್​ ಬಳಿ ಬಿಎಂಟಿಸಿ ಬಸ್​ ಹರಿದು ಮೂರು ವರ್ಷದ ಮಗು ಮೃತಪಟ್ಟಿದೆ.

ತಾಯಿಯನ್ನು ಬಿಟ್ಟು ದೊಡ್ಡಮ್ಮನ ಬಳಿ ಇದ್ದ 3 ವರ್ಷದ ಮಗುವನ್ನು ಬಲಿಪಡೆದ ಬಿಎಂಟಿಸಿ ಬಸ್!
ಅಯಾನ್ ಮೃತ ಮಗು
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ರಮೇಶ್ ಬಿ. ಜವಳಗೇರಾ|

Updated on:Oct 09, 2023 | 11:56 AM

Share

ಬೆಂಗಳೂರು, (ಅಕ್ಟೋಬರ್ 09) ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ (BMTC Bus) ಮತ್ತೊಂದು ಬಲಿಯಾಗಿದೆ. ಗಾರೇಪಾಳ್ಯ ಜಂಕ್ಷನ್​ ಬಳಿ ಬಿಎಂಟಿಸಿ ಬಸ್​ ಹರಿದು ಮೂರು ವರ್ಷದ ಅಯಾನ್ ಮೃತಪಟ್ಟಿದ್ದಾನೆ. ನಿನ್ನೆ (ಅಕ್ಟೋಬರ್ 08) ಅಯಾನ್, ದೊಡ್ಡಮ್ಮನ ಜೊತೆ ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ​ ಬೈಕ್​ನಿಂದ ಕೆಳಗೆ ಬಿದ್ದಿದ್ದ ಅಯಾನ್ ಮೇಲೆ  ಬಸ್​ ಹರಿದಿದೆ. ಪರಿಣಾಮ ಆಯಾನ್​ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಬಸ್​ ಮೇಲೆ ಹರಿದಿದ್ದರಿಂದ ಅಯಾನ್​ ತಲೆ ಛಿದ್ರ ಛಿದ್ರವಾಗಿದೆ. ಬಗ್ಗೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದೊಡ್ಡಮ್ಮನ ಕಣ್ಣೀರಿನ ಮಾತು

ಮಗುವಿನ ದೊಡ್ಡಮ್ಮ ರುಸ್ಮಾ ಮಾತನಾಡಿ, ಮಗು ದೊಡ್ಡಮ್ಮ ದೊಡ್ಡಮ್ಮ ಅಂತಾ ನನ್ನೇ (ಮಗುವಿನ ದೊಡ್ಡಮ್ಮ ರುಸ್ಮಾ) ಹಚ್ಚಿಕೊಂಡಿತ್ತು. ಅದಕ್ಕೆ ನನ್ ತಂಗಿ ತನ್ನ ಮಗು ಅಯಾನ್​ನನ್ನು ನನ್ನ ಬಳಿ ಬಿಟ್ಟು ಹೋಗಿದ್ದಳು. ನಿನ್ನೆ ನನ್ ತಂಗಿಗೆ ಹುಷಾರಿಲ್ಲ ಎಂದು ಮಗುವನ್ನ ಕರೆದುಕೊಂಡು ಹೋಗುತ್ತಿದ್ದೆ. ಗರವೇಭಾವಿ ಪಾಳ್ಯ ಜಂಕ್ಷನ್ ಬಳಿ ನಿಂತಿದ್ವಿ. ಆಗ ಮಗು ಸ್ಲಿಪ್ ಆಗಿ ಕೆಳಗೆ ಬಿದ್ದು ಅಳ್ತಿತ್ತು. ಆಗ ಬಸ್ ನವರು ನೋಡಿ ಸ್ಟಾಪ್ ಮಾಡಲಿಲ್ಲ. ನಿಲ್ಲಿಸಿ ನಿಲ್ಲಿಸಿ ಅಂದರು ಕೂಡ ಬಸ್ ನವರು ಸ್ಟಾಪ್ ಮಾಡಲಿಲ್ಲ. ಮೂವ್ ಮಾಡಿಬಿಟ್ರು. ನನ್ನ ಮಗು ಹೋಯ್ತು. ಬಸ್ ನವರು ನಿಲ್ಲಿಸಿದ್ರೆ ಮಗು ಜೀವ ಉಳಿಯುತ್ತಿತ್ತು ಎಂದು ಕಣ್ಣಿರಿಟ್ಟರು.

ಈ ಬಿಎಂಟಿಸಿ ಬಸ್​ ಬಲಿಯಾಗುತ್ತಿರುವ ಜೀವ ಇದೇ ಮೊದಲು ಅಲ್ಲ. ಈ ದೈತ್ಯ ಬಿಎಂಟಿಸಿ ಬಸ್​ಗೆ ಹಲವು ಜೀವಗಳು ಬಲಿಯಾಗಿವೆ. ಇದರಿಂದ ಇದಕ್ಕೆ ಕಿಲ್ಲರ್​ ಬಿಎಂಟಿಸಿ ಬಸ್​ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ದೈತ್ಯ ಬಿಎಂಟಿಸಿ ಬಸ್ ಓಡಿಸುವ ಚಾಲಕರು​ ಪಕ್ಕದಲ್ಲಿ ಚಿಕ್ಕ ವಾಹನಗಳು ಸಂಚರಿಸುತ್ತವೆ ಎನ್ನುವುದನ್ನೇ ಲೆಕ್ಕಿಸಲ್ಲ.

ಬಿಎಂಟಿಸಿ ಬಸ್​ ಚಾಲಕರಿಗೆ ಯಾರ ಭಯವೂ ಇಲ್ಲ. ಚಿಕ್ಕ ವಾಹನಗಳಂತೆ ವೇಗವಾಗಿ ನುಗ್ಗಿಸಿಕೊಂಡು ಹೋಗುತ್ತಾರೆ. ಇದಕ್ಕೆ ಬಿಎಂಟಿಸಿ ಸಂಸ್ಥೆ ಕಡಿವಾಣ ಹಾಕಿದೆ. ಇಲ್ಲವಾದರಲ್ಲಿ ಸಿಕ್ಕ ಸಿಕ್ಕವರಿಗೆ ಗುದ್ದಿ ಇನ್ನಷ್ಟು ಅಮಾಯಕ ಜನರ ಪ್ರಾಣ ಬಲಿ ಪಡೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಬೆಂಗಳುರಿನ ಮತ್ತಷ್ಟು ಸುದ್ದಿಗಾಗಿ ಇ;ಲ್ಲಿ ಕ್ಲಿಕ್ ಮಾಡಿ

Published On - 11:44 am, Mon, 9 October 23