ಬೆಂಗಳೂರು, ಜೂನ್ 12: ಮೇ 23 ರಿಂದ ಜೂನ್ 9ರವರೆಗು ಬೆಂಗಳೂರಿನ (Bengaluru) ಲಾಲ್ಬಾಗ್ನಲ್ಲಿ (Lalbagh) ಮಾವು (Mango) ಮತ್ತು ಹಲಸಿನ (Jackfruit) ಮೇಳ ನಡೆಯಿತು. 17 ದಿನಗಳ ಕಾಲ ನಡೆದ ಮಾವು ಮೇಳದಲ್ಲಿ ಬರೊಬ್ಬರಿ 500 ಟನ್ ಮಾವುಗಳು ಮಾರಾಟವಾಗಿದೆ. ರಾಜ್ಯದ 100ಕ್ಕೂ ಹೆಚ್ಚು ರೈತರು 50ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಿದ್ದರು ಎಂದು ಮೇಳದ ಆಯೋಜಕರಾದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (KSMDMCL) ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ತಿಳಿಸಿದರು.
ಕಳೆದ ವರ್ಷಕ್ಕಿಂತ ಈ ಬಾರಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರಾಂತ್ಯದಲ್ಲಿ ಹೆಚ್ಚು ಮಾರಾಟವಾಗಿದೆ. ಈ ಬಾರಿ 13 ರಿಂದ 14 ತಳಿಯ ಮಾವು ಮಾರಾಟವಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಕೂಡ ಮೇಳದಲ್ಲಿ ಇತ್ತು ಎಂದು ಹೇಳಿದರು.
ಕರಿ ಇಶಾದ್ ಮಾವಿನ ತಳಿ ಕೂಡ ಈ ವರ್ಷ ಮೇಳದಲ್ಲಿ ಲಭ್ಯವಿತ್ತು. ಕರಿ ಇಶಾದ್ ಮಾವನ್ನು ಜನರು ಹೆಚ್ಚಾಗಿ ಕೊಂಡುಕೊಂಡರು. ಕರಿ ಇಶಾದ್ ತಳಿ ಹೆಚ್ಚು ಮಾರಾಟವಾಗಿದ್ದರಿಂದ ರೈತರು ಹೆಚ್ಚು ಸಂತಸ ಪಟ್ಟರು. ಈ ಹಿಂದೆ ಈ ತಳಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಆದರೆ ಈ ಬಾರಿ ಕರಿ ಇಶಾದ್ ತಳಿಗೆ ಹೆಚ್ಚು ಬೇಡಿಕೆ ಬಂದಿದೆ. ಮೇಳದ ವೇಳೆ ರೈತರು ಮೂರು ಮೂರು ಬಾರಿ ತಮ್ಮ ದಾಸ್ತಾನು ತರಸಿದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾರ್ಕ್‌ಗಳ ಸಮಯ ವಿಸ್ತರಣೆ, ಇಲ್ಲಿದೆ ಹೊಸ ಟೈಮಿಂಗ್ಸ್
ಆನ್‌ಲೈನ್ ಮಾರಾಟ ವೇದಿಕೆ ಕರ್ಸಿರಿ ಎಲ್ಲೂ ಅಧಿಕ ಪ್ರಮಾಣದಲ್ಲಿ ಮಾವು ಮಾರಾಟವಾಗಿದೆ. ಕರ್ಸಿರೊ ಮೂಲಕ ಗ್ರಾಹಕರು ಉತ್ತಮ ಗುಣಮಟ್ಟದ ಮಾವುಗಳನ್ನು ಖರೀದಿಸಿದರು. ಇಂಡಿಯಾ ಪೋಸ್ಟ್ ಮೂಲಕ ಮಾವುಗಳು ರೈತರಿಂದ ನೇರವಾಗಿ ಗ್ರಾಹಕರ ಕೈ ಸೇರಿದವು. ಆನ್‌ಲೈನ್ ವೇದಿಕೆ ಮುಖಾಂತರ ಕನಿಷ್ಠ 27 ರೈತರು ಕರಿ ಇಶಾದ್ ಸೇರಿದಂತೆ 13 ತಳಿಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ ಎಂದರು.
ಆನ್‌ಲೈನ್ ಪೋರ್ಟಲ್‌ನಲ್ಲಿ 4,514 ಬಾಕ್ಸ್‌ಗಳ (13.5 ಟನ್) ಮಾವಿನಹಣ್ಣುಗಳನ್ನು ಮಾರಾಟ ಮಾಡಿದ್ದೇವೆ ಮತ್ತು ಕಾರಿ ಇಶಾದ್‌ಗಾಗಿ ನಾವು 60 – 70 ಆರ್ಡರ್‌ಗಳನ್ನು ಸ್ವೀಕರಿಸಿದ್ದೇವೆ. ನಮ್ಮ ಪ್ಲಾಟ್‌ಫಾರ್ಮ್‌ಗಳ ಹೊರತಾಗಿ, ರೈತರು ವಿವಿಧ 14 ಪೋರ್ಟಲ್‌ಗಳ ಮೂಲಕವೂ ಮಾವು ಮಾರಾಟ ಮಾಡಿದ್ದಾರೆ. ಈ ಪೋರ್ಟಲ್‌ಗಳ ಮೂಲಕ ರೈತರು ನೇರವಾಗಿ ಇಂಡಿಯಾ ಪೋಸ್ಟ್ ಮೂಲಕ ಗ್ರಾಹಕರಿಗೆ ಮಾವಿನಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ