ಮಹಿಳೆಯರಲ್ಲಿ ಹೆಚ್ಚಾದ ಒಬಿಸಿಟಿ ಹಾಗೂ ಹೈಪರ್ ಟೆನ್ಷನ್; ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೇ ಕುತ್ತು

ದಿನದಿಂದ ದಿನಕ್ಕೆ ಮಹಿಳೆಯರಲ್ಲಿ ಒಬಿಸಿಟಿ ಹಾಗೂ ಹೈಪರ್ ಟೆನ್ಷನ್ ಹೆಚ್ಚಾಗುತ್ತಿದ್ದು, ಸರಿಯಾಗಿ ಚಿಕಿತ್ಸೆಯಾಗದಿದ್ರೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಲಿದೆ. ಒಬಿಸಿಟಿ ಹಾಗೂ ಹೈಪರ್ ಟೆನ್ಷನ್ ಸಮಸ್ಯೆಗಳ ಕೇಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಾಲಾಗುತ್ತಿವೆ. ಹೀಗಾಗಿ ಮಹಿಳೆಯರು ಎಚ್ಚರ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಹಿಳೆಯರಲ್ಲಿ ಹೆಚ್ಚಾದ ಒಬಿಸಿಟಿ ಹಾಗೂ ಹೈಪರ್ ಟೆನ್ಷನ್; ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೇ ಕುತ್ತು
ಸಾಂದರ್ಭಿಕ ಚಿತ್ರ
Follow us
Poornima Agali Nagaraj
| Updated By: ಆಯೇಷಾ ಬಾನು

Updated on:Jun 12, 2024 | 11:59 AM

ಬೆಂಗಳೂರು, ಜೂನ್.12: ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ.‌ ಜೊತೆಗೆ ನಮ್ಮ ಜೀವನ ಶೈಲಿ, ಊಟದ ಬಗೆ, ಬದಲಾಗುತ್ತಿರುವ ಹವ್ಯಾಸಗಳು ಜೀವಕ್ಕೆ ಕುತ್ತು ತರುವ ಮಟ್ಟಕ್ಕೆ ಬಂದು ತಲುಪಿವೆ. ಅದರಲ್ಲೂ ಮಹಿಳೆಯರಲ್ಲಿ ಅತಿಹೆಚ್ಚು ಆರೋಗ್ಯ ಸಮಸ್ಯೆ (Health Issue) ಕಂಡು ಬರುತ್ತಿದ್ದು, ಒಬಿಸಿಟಿ ಹಾಗೂ ಹೈಪರ್ ಟೆನ್ಷನ್ (Obesity, Hypertension) ಸಮಸ್ಯೆಗಳ ಕೇಸ್​ಗಳು ನಗರದ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ.

ಮಹಿಳೆಯರಲ್ಲಿ ಇತ್ತೀಚೆಗೆ ಒಬಿಸಿಟಿ ಸಮಸ್ಯೆಗಳು ಹೆಚ್ಚಾಗಿದ್ದು, ಇದರಿಂದ ಮಹಿಳೆಯರು ಹೆಚ್ಚು ಸಫರ್ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಆಹಾರ ಪದ್ದತಿ ಹಾಗೂ ಜೀವನ ಶೈಲಿಗಳಿಂದಾಗಿ ವಯಸ್ಸಿನ ಮಿತಿ ಇಲ್ಲದ ರೀತಿಯಲ್ಲಿ ಒಬಿಸಿಟಿ ಸಮಸ್ಯೆ ಕಾಡುತ್ತಿದೆ. ಒಬಿಸಿಟಿಯಾದಾಗ ಮಹಿಳೆಯರಲ್ಲಿ ಹಾರ್ಮೋನ್ಸ್ ಹೆಚ್ಚು ಉತ್ಪದನೆಯಾಗುವುದು, ಹಾರ್ಮಾನ್ಸ್ ಕಡಿಮೆಯಾಗುವಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ.‌ ಸಧ್ಯ ನಗರದ ಪ್ರತಿ ಆಸ್ಪತ್ರೆಗಳಲ್ಲಿ 3 ರಿಂದ 4 ಒಬಿಸಿಟಿ ಕೇಸ್​ಗಳು ದಾಖಲಾಗುತ್ತಿವೆ. 100 ಕೆಜಿ ದಾಟಿದ ಮಹಿಳೆಯರು ಹೆಚ್ಚಾಗಿ ಕಂಡು ಬರುವುದು ಕೂಡ ಹೆಚ್ಚಾಗಿದೆ. ಸಧ್ಯ ಈ‌ ಕೇಸ್ ಗಳು ಅನುವಂಶೀಕವಾಗಿ ಅಥವ ಥೈರಾರ್ಡ್ ಇದ್ದವರಲ್ಲಿ, ಪಿಸಿಒಡಿ‌ ಇದ್ದವರಲ್ಲಿ ಒಬಿಸಿಟಿ ಕೇಸ್ ಗಳು ಜಾಸ್ತಿಯಾಗುತ್ತಿವೆ. ಜೊತೆಗೆ ಈ‌ ಒಬಿಸಿಟಿಯಿಂದಾಗಿ ಮಾನಸಿಕ ಖಿನ್ನತೆ ಹಾಗೂ ಒತ್ತಡಗಳಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಗತಿಗಳು ಹೆಚ್ಚಾಗುತ್ತಿದೆ.

ಇದನ್ನೂ ಓದಿ: Gruha Lakshmi Scheme: ಮಂದಿನ ತಿಂಗಳಿನಿಂದ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಹಣ

ಇನ್ನು ಮತ್ತೊಂದೆಡೆ ಹೈಪರ್ ಟೆನ್ಷನ್ ಕೇಸ್​ಗಳು ಹೆಚ್ಚಾಗುತ್ತಿದ್ದು, ಇದರಿಂದ‌‌ ಕಿಡ್ನಿ ಸಮಸ್ಯೆ, ಪಾಶ್ವಾವಾಯು, ಹೃದಯಾಘಾತ ಹೆಚ್ಚಾಗುತ್ತಿದೆ.‌ ಈ ಹಿಂದೆ ಹೈಪರ್ ಟೆಕ್ಷನ್ ಕೇಸ್ ಗಳು ಪ್ರತಿದಿನ ಒಂದು ಕೇಸ್ ಬಂದ್ರೆ ಹೆಚ್ಚಿತ್ತು. ಆದ್ರೀಗಾ ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಹೈಪರ್ ಟೆನ್ಷನ್ ಕೇಸ್​ಗಳು ಹೆಚ್ಚಾಗಿವೆ. ಪ್ರತಿದಿನ 10 ರಿಂದ 20 ರಷ್ಟು ರೋಗಿಗಳು ಆಸ್ಪತ್ರೆಗೆ‌ ದಾಲಾಗುತ್ತಿದ್ದಾರೆ. ಹೈಪರ್ ಟೆನ್ಷನ್ ನಾ ಯಾವುದೇ ಲಕ್ಷಣಗಳು ಕಂಡು ಬಂದ್ರೂ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಗೈನಾಕಾಲಜಿಸ್ಟ್ ಶ್ರೀನಿವಾಸ್ ಜೋಯಿಸ್ ಸಲಹೆ ನೀಡಿದ್ದಾರೆ.‌ ಇನ್ನು ಒಂದು ಬಾರಿ ಗರ್ಭಿಣಿಯರಿಗೆ ಹೈಪರ್ ಟೆನ್ಷನ್ ಬಂದಿದ್ದೆ ಆದಲ್ಲಿ ಅವರ ಜೀವ ಹೋಗುವ ಸಾಧ್ಯತೆಗ ಇರುತ್ತದೆ. ಹೀಗಾಗಿ ನಿರ್ಲಕ್ಷ್ಯ ಬೇಡ.

ಒಟ್ನಲ್ಲಿ, ಮಹಿಳೆಯಲ್ಲಿ ಒಬಿಸಿಟಿ ಹಾಗೂ ಹೈಪರ್ ಟೆನ್ಷನ್ (ರಕ್ತದ ಒತ್ತಡ) ಹೆಚ್ಚಾಗುತ್ತಿದ್ದು, ಮಹಿಳೆಯರು ಆರೋಗ್ಯದ ಮೇಲೆ ನಿಗಾ ಇಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:26 am, Wed, 12 June 24

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ