ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿಗೆ 6 ಸಾವಿರ ಕೋಟಿ‌ ಅನುದಾನ: ಸಿಎಂ ಬೊಮ್ಮಾಯಿ

| Updated By: ವಿವೇಕ ಬಿರಾದಾರ

Updated on: Jul 17, 2022 | 3:00 PM

ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿಗೆ 6 ಸಾವಿರ ಕೋಟಿ‌ ಅನುದಾನ ಕೊಡಲಾಗಿದೆ ಎಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿಗೆ 6 ಸಾವಿರ ಕೋಟಿ‌ ಅನುದಾನ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ
Image Credit source: The Print
Follow us on

ಬೆಂಗಳೂರು: ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿಗೆ (Bengaluru) 6 ಸಾವಿರ ಕೋಟಿ‌ ಅನುದಾನ ಕೊಡಲಾಗಿದೆ ಎಂದು ರಾಜರಾಜೇಶ್ವರಿ ನಗರ (Rajarajeshwari Nagar) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದ ಮೂಲ ಸೌಕರ್ಯಗಳಿಗೆ ಅನುದಾನ ಕೊರತೆ ಇಲ್ಲ. ನಮ್ಮ ಸರ್ಕಾರ ಅನುದಾನದ ಕೊರತೆ ಮಾಡಿಲ್ಲ. ಮೆಟ್ರೋ‌ 3ನೇ ಹಂತ ಮುಂದಿನ‌ ವರ್ಷ ಶುರು ಮಾಡುತ್ತೇವೆ.  ಬೆಂಗಳೂರಿನ ಹೊರ‌ವಲಯದ ಪಟ್ಟಣಗಳಿಗೂ ಮೆಟ್ರೋ ಸಂಪರ್ಕ ಕಲ್ಪಿಸುತ್ತೇವೆ. 15 ಸಾವಿರ ಕೋಟಿ ಸಬರ್ಬನ್ ರೈಲು ಯೋಜನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ‌ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಚಾಲನೆ ಕೊಟ್ಟಿದ್ದರು. 11 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಆಗಿದ್ದು, ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆ ಜೋಡಿಸುವ ಎಲಿವೇಟೆಡ್ ಕಾರಿಡಾರ್ ಇದಾಗಿದೆ. ಈ ವಾರ್ಡ್​​ಗೆ ಪುನೀತ್ ರಾಜಕುಮಾರ ಅವರ ಹೆಸರಿಟ್ಟಿರೋದು ಸಂತೋಷ ತಂದಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೋಪಾಲಣ್ಣ‌ ಉತ್ತಮ ಕೆಲಸ ಮಾಡಿದ್ದಾರೆ. ಅವರ ದೇಹ ಎಷ್ಟು ದೊಡ್ಡದಿದೆಯೋ‌ ಅಷ್ಟೇ ಅವರ ಹೃದಯವೂ ದೊಡ್ಡದಿದೆ ಎಂದು ಹೊಗಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ಭೈರತಿ ಬಸವರಾಜ ಮತ್ತು ಗೋಪಾಲಯ್ಯ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಸಚಿವ ಮುನಿರತ್ನ ಅವರು ಮಾತನಾಡಿ ಮೂರು ಸಾವಿರ ಮಕ್ಕಳು ಓದುವ ಶಾಲಾ-ಕಾಲೇಜನ್ನು ಉದ್ಘಾಟಿಸಲು ಮುಖ್ಯಮಂತ್ರಿಗಳು ಬಂದಿದ್ದಾರೆ. ಸರಳ ಸಿಎಂ, ಯಾರನ್ನೋ ನೋಯಿಸಿದ ಸಿಎಂ ಅವರು ಅವರಿಗೆ ನಮ್ಮ ಕ್ಷೇತ್ರದ ಪರವಾಗಿ ಪ್ರೀತಿಯ ಸ್ವಾಗತ ಕೋರೋಣ. ಅದೇರೀತಿ ವೇದಿಕೆಯಲ್ಲಿರುವ ಸಚಿವರಾದ ನಾಗೇಶ್, ಬೈರತಿ ಬಸವರಾಜ್ ಹಾಗೂ ಗೋಪಾಲಯ್ಯನವರಿಗೆ ಪ್ರೀತಿಯ ಪೂರ್ವಕ ಸ್ವಾಗತಿಸುತ್ತೇನೆ. ನಾವೂ ಶಾಶ್ವತವಲ್ಲ ಆದರೆ ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಇರುತ್ತವೆ. ನಾವೂ ಹೋದ ನಂತರವೂ ಮಾತನಾಡುತ್ತರಲ್ಲ ಅದನ್ನು ನಾವು ಬಿಟ್ಟುಹೋಗಬೇಕು.

ಇವತ್ತು ನಮ್ಮ ಕ್ಷೇತ್ರದಲ್ಲಿ ಶಾಶ್ವತವಾದ ಕೆಲಸಗಳಾಗುತ್ತಿವೆ. ಆಸ್ಪತ್ರೆ, ಶಾಲೆ, ಸೇತುವೆಗಳು ಪ್ರತಿಯೊಂದು ಎಲ್ಲಾ ವಾರ್ಡ್​​ಗಳಲ್ಲೂ ಮಾಡಲಾಗುತ್ತಿದೆ. ಎಸ್​ಆರ್​ಎಸ್ ರಸ್ತೆಯಲ್ಲಿ ಯಾರು ಊಹಿಸದ ರೀತಿಯಲ್ಲಿ ಕೆಲಸಗಳು ಆಗುತ್ತಿವೆ. ಭಾನುವಾರದ ದಿನ ನಿಮ್ಮನ್ನೆಲ್ಲ ಇಲ್ಲಿ ಕೂರಿಸಿದ್ದಕ್ಕೆ ಬಹಳ ಬೇಜಾರಿದೆ, ನಿಮಗೆಲ್ಲ ಒಳ್ಳೇದಾಗಲಿ ಎಂದು ಸಚಿವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಭಿವೃದ್ಧಿ ಪರ್ವ ಶುರುವಾಗುತ್ತದೆ. ಅಂದು ಅಟಲ್ ಜೀ ಇಂದು ಮೋದಿ ಅವರು ದೇಶವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಕರ್ನಾಟಕದಲ್ಲಿನ ಸಮಸ್ಯೆ ಪರಿಹಾರಕ್ಕೆ ಯಡಿಯೂರಪ್ಪ ಹಾದಿಯಾಗಿ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮಳೆ ಪ್ರದೇಶಕ್ಕೆ ಭೇಟಿ ಕೊಟ್ಟರು‌‌. ಜನರ ಕಷ್ಟಕ್ಕೆ ಸಹಾಯ ಮಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕೆಲಸಗಳು ಇವತ್ತು ಆಗುತ್ತಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಆಗುತ್ತಿದೆ. ಮುನಿರತ್ನ ಅವರ ಪದವಿ ಕಾಲೇಜು, ಪಿಯುಸಿ ಕಾಲೇಜು ಕಟ್ಟಡ ಉದ್ಘಾಟನೆ ಆಗಿದೆ. ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕೋವಿಡ್ ನಿಂದಾಗಿ ಕಲಿಕಾ ಮಟ್ಟದ ಕಡಿಮೆ ಆಗಿದೆ. ಇದಕ್ಕಾಗಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಸಿಎಂ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ.

37 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ  ಒಪ್ಪಿಗೆ ನೀಡಿದರು. 7 ಸಾವಿರ ಸರ್ಕಾರಿ ಶಾಲಾ ಕೊಠಡಿ ನಿರ್ಮಾಣಕ್ಕೆ ಐತಿಹಾಸಿ ನಿರ್ಧಾರ ನಮ್ಮ ಸರ್ಕಾರ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರ ಮಕ್ಕಳ ಕಲಿಕೆಗಾಗಿ ಕಲಿಕಾ ಚೇತರಿಕೆ ತಂದ ಸರ್ಕಾರವಾಗಿದೆ. ಅತ್ಯುತ್ತಮ ಲ್ಯಾಬ್, ಕೊಠಡಿ ನಿರ್ಮಾಣ ಮಾಡಿದ್ದಾರೆ ಮುನಿರತ್ನ ಅವರು. ಪ್ರತಿ ವಿದ್ಯಾರ್ಥಿಯನ್ನು ಉತ್ತಮ ಪ್ರಜೆ ಮಾಡಲು ನಮ್ಮ ಸರ್ಕಾರ ಬದ್ದವಾಗಿ ಕೆಲಸ ಮಾಡುತ್ತಿದೆ ಎಂದರು.

Published On - 2:49 pm, Sun, 17 July 22