
ಬೆಂಗಳೂರು, ಅಕ್ಟೋಬರ್ 25: ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕಾರಣದಲ್ಲೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಕೇಸ್‌ನ ತನಿಖೆ ಕೂಡ ಚುರುಕು ಪಡೆದುಕೊಂಡಿದೆ. ಈ ಮಧ್ಯೆ ‘ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬವನ್ನು ಮುಗಿಸಲು 600 ಕೋಟಿ ರೂ ಡೀಲ್ ಆಗಿದೆ. ಡೀಲ್ ಆಗಿರುವುದರಲ್ಲಿ ಯಾವುದೇ ಸಂಶಯ ಇಲ್ಲ’ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
‘ಒಂದು ಕುಟುಂಬವನ್ನು ಮುಗಿಸಲು 600 ಕೋಟಿ ರೂ ಡೀಲ್ ಆಗಿದೆ’ ಆಗಿದೆ ಎಂದು ಜಾಲತಾಣದಲ್ಲಿ ವಿಡಿಯೋ ವೈರಲ್ ವಿಚಾರವಾಗಿ ಮಾಧ್ಯಮದರೊಂದಿಗೆ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ‘ಹೆಚ್.ಡಿ.ದೇವೇಗೌಡರ ಕುಟುಂಬ ಮುಗಿಸಿ ಅಂತಾ ಹೇಳಿರುವುದರಲ್ಲಿ ಏನು ಸಂಶಯವಿಲ್ಲ, ಆ ಹಿರಿಯ ನಾಯಕ ಬೇರೆ ಯಾರು ಅಲ್ಲಾ, ಈಗಿನ ಮಹಾನ್ ಸಿಎಂ. ಇದೆಲ್ಲಾ ದೊಡ್ಡಮಟ್ಟದಲ್ಲಿ ತನಿಖೆ ಆಗಬೇಕು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಪ್ರಕರಣ: ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ಕೊಟ್ಟ ವಿಡಿಯೋದಲ್ಲಿರುವ ಮಹಿಳೆ
‘ಪಾಪದ ಕೊಡ ತುಂಬಿದೆ, ಸತ್ಯ ಹೊರಗೆ ಬರಲೇಬೇಕು. ಭಗವಂತ ಎಲ್ಲಾ ಹೊರಗಡೆ ತರುತ್ತಿದ್ದಾನೆ, ನಾವು ತರ್ತಿಲ್ಲ. ಪೊಲೀಸ್ ಅಧಿಕಾರಿಗಳ ಮೂಲಕ ಮುಚ್ಚಿಸೋಕೆ ಹೊರಟಿದ್ದರಲ್ಲ, ಇದೆಲ್ಲಾ ಪ್ರಾಮಾಣಿಕ ಸತ್ಯ ಹೊರಗೆ ಬರಲಿ’ ಎಂದಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತಾಗಿ ಮಾತನಾಡಿದ ಅವರು, ‘ನಮ್ಮವರನ್ನು ಗುರಿಯಾಗಿಸಿಕೊಂಡು ತನಿಖೆ ಮಾಡ್ತಿದ್ದಾರೆ. ಐದು ದಿನ ಸಮಯ ಕೊಡುತ್ತೇನೆ. ನಾನೇ ಹೇಳ್ತೇನೆ, ಯಾರೂ ಅಂಜಬೇಕಿಲ್ಲ, ಹೆದರಬೇಕಿಲ್ಲ. ಎಲ್ಲರೂ ಹೋಗಿ ವಿಚಾರಣೆಗೆ ಹಾಜರಾಗಿ ಎಂದು ಹೇಳಿದ್ದೇನೆ. ಸಾಮಾಜಿಕ ಜಾಲತಾಣದ ಚಂದನ್ ವಿಚಾರಣೆಗೆ ಹೋಗ್ತಾನೆ’ ಎಂದು ಹೇಳಿದರು.
‘ತನಿಖೆ ಬಗ್ಗೆ ಸಿದ್ದರಾಮಯ್ಯ, ಯತೀಂದ್ರಗೂ ಅನುಮಾನ ಇದೆ. ಮಾಜಿ ಸಿಎಂ ಅಧಿಕಾರದಲ್ಲಿ ಇದ್ದಾಗ ಯಾವ ರೀತಿ ನಡೀತು. ಘಟನೆಯಿಂದ ಮಾಜಿ ಮುಖ್ಯಮಂತ್ರಿಗೆ ನೋವಾಗಿದೆ. ಇದು ಹಳೆಯ ಕೇಸ್ ಎಂದು ಈಗ ಗೃಹ ಸಚಿವರು ಹೇಳ್ತಿದ್ದಾರೆ. ಅವರ ಕಚೇರಿಯಲ್ಲಿ ಲಿಫ್ಟ್ ಹೇಗೆ ಓಪನ್ ಆಯ್ತು? ಕೆಲ ಅಧಿಕಾರಿಗಳು ಭಾಗಿಯಾಗಿದ್ದಾರೆ. ತನಿಖೆ ಸರಿಯಾಗಿ ಪ್ರಾರಂಭ ಆಗಬೇಕು, ಎಷ್ಟು ಕೊಲೆಯಾಗಿದೆ. ಕೋಲಾರದ ಬಳಿ ಅವನ ಚಾಲಕನ ಕೊಲೆ ಹೇಗಾಯ್ತು, ನಿನ್ನೆ 1 ವಿಡಿಯೋ ವೈರಲ್ ಆಗಿದೆ, ವಿಚಾರಣೆಗೆ ಕರೆಸಬೇಕಲ್ವಾ? ತನಿಖೆ ಮಾಡಲು ಸಾಕ್ಷಿ ಇದ್ರೆ ಕೊಡಿ ಅಂತಾರೆ ಗೃಹ ಸಚಿವರು, ಹಲವರು ಪೊಲೀಸರು, ನ್ಯಾಯಾಧೀಶರ ವಿಡಿಯೋ ಇಟ್ಟುಕೊಂಡಿದ್ದಾರೆ. ನಮ್ಮ ಹುಡುಗರ ತಪ್ಪಿದ್ರೆ ಕ್ರಮ ಕೈಗೊಳ್ಳಿ. ನಾನು ಹೆದರಿಸುವುದಕ್ಕೆ ಹೇಳ್ತಿಲ್ಲ, ಪ್ರಾಮಾಣಿಕವಾಗಿ ತನಿಖೆ ಮಾಡಿ’ ಎಂದಿದ್ದಾರೆ.
ಸಿದ್ದರಾಮಯ್ಯರನ್ನು ಭೇಟಿಯಾಗ್ತೀರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ‘ಅವರ ಪಕ್ಷದವರೇ ಈ ಕೃತ್ಯ ಮಾಡಿದ್ದಾರೆ, ಹೊರಗೆ ಬರಬೇಕಲ್ವಾ? ನಮ್ಮ ಕಾರ್ಯಕರ್ತರ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ವಿಚಾರಣೆಗೆ ಹಾಜರಾಗಲು ನಮ್ಮ ಜಾಲತಾಣದವರಿಗೆ ಹೇಳಿದ್ದೇನೆ. ಅವರ ಬ್ಯಾಂಕ್ ಅಕೌಂಟ್ ಡೀಟೆಲ್ಸ್ ಯಾಕೆ ಬೇಕು. ಭಗತ್ ಸಿಂಗ್ ಅಂತಾ ಹೆಸರು ಇಟ್ಟುಕೊಂಡಿದ್ದಾರೆ. ಈ ರಾಜ್ಯದ ಗೃಹ ಸಚಿವ ಏನು ಮಾಡ್ತಿದ್ದಾರೆ’ ಎಂದು ಪ್ರಶ್ನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Sun, 25 October 26