BMTC ಬಸ್​​ನಲ್ಲಿ ಮಹಿಳಾ ಸೀಟ್​ನಲ್ಲಿ ಕೂತ್ತಿದ್ದ ಪುರುಷರಿಂದ ಕಲೆಕ್ಟ್ ಆಯ್ತು ಬರೊಬ್ಬರಿ 34 ಸಾವಿರ ರೂ. ದಂಡ​!

| Updated By: ವಿವೇಕ ಬಿರಾದಾರ

Updated on: Jan 17, 2024 | 3:02 PM

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನಿಖಾ ತಂಡಗಳು ಡಿಸೆಂಬರ್-2023 ರಲ್ಲಿ 16785 ಟ್ರಿಪ್​ಗಳನ್ನು ತಪಾಸಿಸಿದ್ದಾರೆ. ಈ ವೇಳೆ ಟಿಕೆಟ್​ ರಹಿತ ಪ್ರಯಾಣಿಸುತ್ತಿದ್ದ 3502 ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 7,02,340 ರೂ. ದಂಡ ವಸೂಲಿ ಮಾಡಿದ್ದಾರೆ.

BMTC ಬಸ್​​ನಲ್ಲಿ ಮಹಿಳಾ ಸೀಟ್​ನಲ್ಲಿ ಕೂತ್ತಿದ್ದ ಪುರುಷರಿಂದ ಕಲೆಕ್ಟ್ ಆಯ್ತು ಬರೊಬ್ಬರಿ 34 ಸಾವಿರ ರೂ. ದಂಡ​!
ಬಿಎಂಟಿಸಿ
Follow us on

ಬೆಂಗಳೂರು, ಜನವರಿ 17: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್​​ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಕಡ್ಡಾಯವಾಗಿ ಟಿಕೆಟ್​ ಪಡೆದು ಪ್ರಯಾಣಿಸಬೇಕು. ಮಹಿಳಾ ಪ್ರಯಾಣಿಕರು ಆಧಾರ ಅಥವಾ ಇನ್ನಿತರೆ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಟಿಕೆಟ್ ಪಡೆಯಬೇಕು. ಇನ್ನೂಳಿದ ಪ್ರಯಾಣಿಕರು ಹಣ ನೀಡಿ ಟಿಕೆಟ್​ ಪಡೆಯಬೇಕು. ಆದರೆ ಇಲ್ಲಿ ಟಿಕೆಟ್​ ಪಡೆಯದೇ ಪ್ರಯಾಣಿಸಿದ ಪ್ರಯಾಣಿಕರು ಬಿಎಂಟಿಸಿ (BMTC) ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರು ಭಾರಿ ದಂಡವನ್ನು ತೆತ್ತಿದ್ದಾರೆ. ಇಷ್ಟೇ ಅಲ್ಲದೇ ಮಹಿಳಾ ಪ್ರಯಾಣಿಕರ ಸೀಟಿನಲ್ಲಿ ಕೂತ ಪುರುಷರು ಕೂಡ ದಂಡ ಕಟ್ಟಿದ್ದಾರೆ. ಅದೆಷ್ಟು ದಂಡ ಕಟ್ಟಿದ್ದಾರೆ? ಬಿಎಂಟಿಸಿ ಬೊಕ್ಕಸಕ್ಕೆ ಬಂದ ಹಣವೆಷ್ಟು? ಇಲ್ಲಿದೆ ಮಾಹಿತಿ..

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನಿಖಾ ತಂಡಗಳು ಡಿಸೆಂಬರ್-2023 ರಲ್ಲಿ 16785 ಟ್ರಿಪ್​ಗಳನ್ನು ತಪಾಸಿಸಿದ್ದಾರೆ. ಈ ವೇಳೆ ಟಿಕೆಟ್​ ರಹಿತ ಪ್ರಯಾಣಿಸುತ್ತಿದ್ದ 3502 ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು 7,02,340 ರೂ. ದಂಡ ವಸೂಲಿ ಮಾಡಿದ್ದಾರೆ. ಇನ್ನು ಸಂಸ್ಥೆಯ ನಿರ್ವಾಹಕರ ವಿರುದ್ಧ 1085 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಟಿಕೆಟ್​ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್​​ನ ಕೈ, ಮುಖಕ್ಕೆ ಪರಿಚಿದ ಮಹಿಳೆ, ವಿಡಿಯೋ ವೈರಲ್​

ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 347 ಪುರುಷ ಪ್ರಯಾಣಿಕರಿಂದ ಒಟ್ಟು 34,700 ರೂ. ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆಯಾಗಿ ಡಿಸೆಂಬರ್-2023 ರ ತಿಂಗಳಲ್ಲಿ 3849 ಪ್ರಯಾಣಿಕರಿಂದ ಒಟ್ಟು 7,37,040 ರೂ. ದಂಡ ವಸೂಲಿ ಮಾಡಲಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ