ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದಿದ್ದ 7 ಬಿಎಂಟಿಸಿ ಅಧಿಕಾರಿಗಳು ಸಸ್ಪೆಂಡ್

ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದಿದ್ದ ಬಿಎಂಟಿಸಿಯ ಏಳು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಂಡುವವರು ಯಾರು-ಯಾರು? ಯಾಕಾಗಿ ಲಂಚ ಪಡೆದಿದ್ದರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದಿದ್ದ 7 ಬಿಎಂಟಿಸಿ ಅಧಿಕಾರಿಗಳು ಸಸ್ಪೆಂಡ್
BMTC
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 14, 2024 | 5:12 PM

ಬೆಂಗಳೂರು, (ಜನವರಿ 14): ಗೂಗಲ್ ಪೇ, ಫೋನ್ ಪೇ (google Pay And Phone Pay) ಮೂಲಕ ಲಂಚ (Bribe)  ಪಡೆದಿದ್ದ ಬಿಎಂಟಿಸಿಯ (BMTC) ಏಳು ಅಧಿಕಾರಿಗಳನ್ನು ಸಸ್ಪೆಂಡ್(Suspended) ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ರುಪಾಯಿಗೂ ಹೆಚ್ಚು ವಸೂಲಿ ಮಾಡಿದ್ದು, ಬಿಎಂಟಿಸಿಯ ಏಳು ಅಧಿಕಾರಿಗಳ ಅಕೌಂಟ್ ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಬಿಎಂಟಿಸಿಯಲ್ಲಿ ಇದೆ ಮೊದಲ ಬಾರಿಗೆ ಅಧಿಕಾರಿಗಳ ಅಕೌಂಟ್ ನಲ್ಲಿ ಇಷ್ಟು ದೊಡ್ಡ ಮೊತ್ತ ಪತ್ತೆಯಾಗಿದೆ.

ಒಬ್ಬೊಬ್ಬ ಅಧಿಕಾರಿಗಳ ಅಕೌಂಟ್ ನಲ್ಲಿ ಸುಮಾರು 20 ರಿಂದ 25 ಲಕ್ಷ ರೂಪಾಯಿ ಸಿಕ್ಕಿದೆ. ಇದರೊಂದಿಗೆ ಒಟ್ಟು ಏಳು ಅಧಿಕಾರಿಗಳಿಂದ ಸುಮಾರು ಒಂದೂವರೆ ಕೋಟಿ ರುಪಾಯಿ ಅಕ್ರಮ ಹಣ ಪತ್ತೆಯಾಗಿದೆ. ಡ್ಯೂಟಿ, ವೀಕ್ಲಿ ಆಫ್ ರಜೆ ಹಾಗೂ ಕಂಡಿಷನ್ ಇರುವ ಮತ್ತು ಹೆಚ್ಚು ಕಲೆಕ್ಷನ್ ಬರುವ ಬಸ್ ಬೇಕು ಅಂದರೆ ಡಿಪೋ ಮ್ಯಾನೇಜರ್, ಮತ್ತು ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕು. ಹಣ ನೀಡಿದ್ರೆ ಎಲ್ಲಾ ವ್ಯವಸ್ಥೆ ಮಾಡುತ್ತಾರೆ ಹಣ ನೀಡಿಲ್ಲ ಅಂದರೆ ಮಾನಸಿಕವಾಗಿ ಕಿರುಕುಳ ನೀಡುವುದು ಮಾಡುತ್ತಾರೆ.

ಈ ಹಿನ್ನೆಲೆಯಲ್ಲಿ ಕಂಡಕ್ಟರ್ ಡ್ರೈವರ್ ಗಳಿಂದ ಪ್ರತಿ ವಾರ 500 ರುಪಾಯಿ ಅಂತೆ ಪ್ರತಿ ತಿಂಗಳಿಗೆ ಎರಡು ಸಾವಿರ ರುಪಾಯಿ ವಸೂಲಿ ಮಾಡಲಾಗ್ತಿತ್ತು. ಈ ಬಗ್ಗೆ ಟಿವಿ9 ಅಕ್ಟೋಬರ್-2ರಂದು ಸುದ್ದಿ ಪ್ರಸಾರ ಮಾಡಿತ್ತು. ಅಲ್ಲದೇ ಖುದ್ದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಗಮನಕ್ಕೆ ತರಲಾಗಿತ್ತು.

ಸಚಿವರು ಕೂಡಲೇ ಅಂದಿನ ಬಿಎಂಟಿಸಿ ಎಂಡಿ ಜಿ. ಸತ್ಯವತಿ ಅವರಿಗೆ ತನಿಖೆ ಮಾಡಲು ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳು, ಏಳು ಅಧಿಕಾರಿಗಳ ಎಲ್ಲಾ ಬ್ಯಾಂಕ್ ಡಿಟೇಲ್ಸ್ ತನಿಖೆ ನಡೆಸಿದಾಗ ಪ್ರತಿಯೊಬ್ಬರ ಅಕೌಂಟ್ ಗೆ ಡ್ರೈವರ್ ಕಂಡಕ್ಟರ್ ಗಳಿಂದ ಲಕ್ಷಾಂತರ ರೂಪಾಯಿ ಹಣವನ್ನು ಗೂಗಲ್ ಪೇ ಫೋನ್ ಪೇ ಮೂಲಕ ಹಾಕಿಸಿಕೊಂಡಿರೋದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಏಳು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಯಾವ ಅಧಿಕಾರಿಗಳು ಅಮಾನತ್ತು?

1. ಮಂಜುಳಾ.ಆರ್- ಸಿಬ್ಬಂದಿ ಮೇಲ್ವಿಚಾರಕಿ ಡಿಪೋ ನಂ-27 2. ಪ್ರೀತಮ್- ಕಿರಿಯ ಸಹಾಯಕ ಡಿಪೋ ನಂ-27 3. ಮನೋಜ್ ಕುಮಾರ್ ಎಲ್.ಎಸ್- ಕಿರಿಯ ಸಹಾಯಕ ಡಿಪೋ ನಂ-27 4. ಧನಂಜಯ. ವಿ- ಸಹಾಯಕ ಲೆಕ್ಕಿಗ ಡಿಪೋ ನಂ-27 5.ಸುಮ.ಎ- ಕಿರಿಯ ಸಹಾಯಕಿ ಡಿಪೋ ನಂ-27 6. ಶಾಂತವ್ವ- ಕಿರಿಯ ಸಹಾಯಕಿ ಡಿಪೋ ನಂ-27 7. ದೇವರಾಜ್.ಜಿ- ಸಹಾಯಕ ಕುಶಲಕರ್ಮಿ ಡಿಪೋ ನಂ-27

Published On - 5:05 pm, Sun, 14 January 24