7 ವರ್ಷ ಜೈಲಿನಲ್ಲಿದ್ದರೂ ಬುದ್ದಿಕಲಿಯದ ಆರೋಪಿ; ಹೊರ ಬಂದ ಕೆಲ ದಿನಗಳಲ್ಲೇ ಮತ್ತೇರಡು ಕೇಸ್​ ದಾಖಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 14, 2023 | 11:55 AM

ಏಳು ವರ್ಷ ಜೈಲಿನಲ್ಲಿದ್ದು ಹೊರಬಂದರೂ ಬುದ್ಧಿಕಲಿಯದ ಆರೋಪಿ ಮೊಹಮ್ಮದ್ ದಸ್ತಗಿರ್ ಅಲಿಯಾಸ್ ಶೂಟೌಟ್ ದಸ್ತಗಿರ್​ನನ್ನ ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.

7 ವರ್ಷ ಜೈಲಿನಲ್ಲಿದ್ದರೂ ಬುದ್ದಿಕಲಿಯದ ಆರೋಪಿ; ಹೊರ ಬಂದ ಕೆಲ ದಿನಗಳಲ್ಲೇ ಮತ್ತೇರಡು ಕೇಸ್​ ದಾಖಲು
ಆರೋಪಿ ಮೊಹಮ್ಮದ್ ದಸ್ತಗಿರ್ ಅಲಿಯಾಸ್ ಶೂಟೌಟ್ ದಸ್ತಗಿರ್
Follow us on

ಬೆಂಗಳೂರು, ಜು.14: 7 ವರ್ಷ ಜೈಲಿನಲ್ಲಿದ್ದು ಹೊರಬಂದರೂ ಬುದ್ಧಿಕಲಿಯದ ಆರೋಪಿ ಮೊಹಮ್ಮದ್ ದಸ್ತಗಿರ್ ಅಲಿಯಾಸ್ ಶೂಟೌಟ್ ದಸ್ತಗಿರ್​ನನ್ನ ಜೆಪಿ ನಗರ ಪೊಲೀಸರು(JP Nagar Police) ಬಂಧಿಸಿದ್ದಾರೆ. ಇತ ಕೆಲ ದಿನಗಳ ಹಿಂದೆ ಮಹಿಳೆಯರಿಬ್ಬರು ವಾಸಿಸುತ್ತಿದ್ದ ಮನೆಗೆ ನುಗ್ಗಿ, ಚಾಕು ತೋರಿಸಿ ಚಿನ್ನದ ಸರ, ಉಂಗುರುಗಳನ್ನು ದೋಚಿದ್ದ. ಇದಾದ ಮರುದಿನವೇ ಜಯನಗರದಲ್ಲಿ ಓರ್ವ ಮಹಿಳೆ ಸರಗಳ್ಳತನ ಮಾಡಿದ್ದ. ಇಂತಹ ಹಲವು ಪ್ರಕರಣಗಳಲ್ಲಿ ಇತನ ಕುರುತು ವಿವಿಧ ಠಾಣೆಗಳಲ್ಲಿ ಕೇಸ್​ ದಾಖಲಾಗಿದ್ದವು. ಹೌದು ಅರೋಪಿ ಮೊಹಮ್ಮದ್ ದಸ್ತಗಿರ್ ವಿರುದ್ಧ 10 ಕೇಸ್ ದಾಖಲಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೊಲೆಯತ್ನ, 1 ದರೋಡೆ ಪ್ರಕರಣ, ಕುಮಾರಸ್ವಾಮಿ ಲೇಔಟ್​ನಲ್ಲಿ 2 ಕೊಲೆ ಯತ್ನ, 5 ದರೋಡೆ ಕೇಸ್, ಜಯನಗರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಕೇಸ್ ದಾಖಲಾಗಿತ್ತು.

ಇತಿಹಾಸದ ಕುಖ್ಯಾತ ಅರೋಪಿ ಅರೆಸ್ಟ್

ಏಳು ವರ್ಷಗಳ ಕಾಲ ಜೈಲಿನಲ್ಲಿ ಇದ್ದು ಬಂದು, ಮತ್ತೆ ತನ್ನ ಹಿಸ್ಟರಿಯನ್ನ ರಿಪೀಟ್ ಮಾಡಿದ್ದಾನೆ. ಈ ಆರೋಪಿ ಈ ಹಿಂದೆ ಮಾಡಿದ ರೀತಿಯಲ್ಲಿಯೇ ಕೃತ್ಯ ಎಸಗಿ ಲಾಕ್ ಆಗಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಇತ ತನ್ನ ಕೈ ಚಳಕ ತೋರಿಸಿದ್ದ. ಈ ಹಿನ್ನಲೆ ಮಹಿಳೆ ಮನೆಯಲ್ಲಿ ಮಾಹಿತಿ ಪಡೆದಾಗ ಪೊಲೀಸರಿಗೆ ಅನುಮಾನ ಮೂಡಿದೆ. ಈ ಕುರಿತು ಹುಡುಕಿದಾಗ ಕೃತ್ಯ ಎಸಗಿದ್ದವ ದಸ್ತಗಿರ್ ಎಂಬುದು ಪತ್ತೆಯಾಗಿದೆ.

ಇದನ್ನೂ ಓದಿ:ಪೊಲೀಸರೆಂದು ಹೇಳಿ ಮನೆಗೆ ನುಗ್ಗಿದ ಖದೀಮರು; ಚಾಕು ತೋರಿಸಿ ಕೈಯಲ್ಲಿದ್ದ ಉಂಗುರ, ಇತರೆ ವಸ್ತುಗಳನ್ನು ದೋಚಿದ ಕಳ್ಳರು

ಹಿಂದೆ ಆರೋಪಿ ದಸ್ತಗಿರಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದ ಕುಮಾರಸ್ವಾಮಿ ಪೊಲೀಸರು

ಈ ಹಿಂದೆ 2012 ರಲ್ಲಿ ದಸ್ತಗಿರಿಗೆ ಕುಮಾರಸ್ವಾಮಿ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು. ಬಳಿಕ ರಾಬರಿ ಕೇಸ್​ನಲ್ಲಿ 7 ವರ್ಷ ಶಿಕ್ಷೆ ಆಗಿತ್ತು. ಏಳು ವರ್ಷ ಶಿಕ್ಷೆ ಅನುಭವಿಸಿದ ಬಳಿಕ ಈ ಬ್ರಕಿದ್​ಗೆ ಎರಡು ದಿನ ಇರುವಾಗ ಬೆಳಗಾವಿ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ. ಹೊರಬಂದು ಕೆಲ ದಿನಗಳಲ್ಲಿಯೇ ಮತ್ತೆ ಎರಡು ಕೇಸ್ ಮಾಡಿದ್ದ. ಸದ್ಯ ಇದೀಗ ಆತನನ್ನ ಜೆಪಿ ನಗರ ಪೊಲೀಸರು ಅರೆಸ್ಟ್ ಮಾಡಿ, ಜೈಲಿಗೆ ಕಳಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ