78 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ: ನ್ಯೂ ಇಯರ್ಗೆ 4 ಸಾವಿರ ಕ್ಯಾಮೆರಾ ಕಣ್ಗಾವಲು: ಆರಗ ಜ್ಞಾನೇಂದ್ರ
2022ರ ಆರಂಭದಿಂದ ಇದುವರೆಗೆ 78 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 68 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದಾರೆ. 2022ರ ಆರಂಭದಿಂದ ಇದುವರೆಗೆ 78 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 68 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು (ಡಿ.16) ಹಿರಿಯ ಪೊಲೀಸರ ಜೊತೆ ಗೃಹ ಸಚಿವರು ಸಭೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಚರ್ಚಿಸಿದ್ದೇವೆ. ಹೊಸದಾಗಿ 4 ಸಂಚಾರಿ ಉಪ ವಿಭಾಗಗಳ ರಚನೆ ಮಾಡಲಾಗಿದೆ. ಎರಡು ಕಾನೂನು ಸುವ್ಯವಸ್ಥೆ ಉಪ ವಿಭಾಗಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಸೇಫ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ 4 ಸಾವಿರ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಕರೆಸಿ ಉದ್ಘಾಟಿಸುತ್ತೇವೆ. ಮೊಬೈಲ್ ಫೊರೆನ್ಸಿಕ್ ಲ್ಯಾಬ್ ಮಾಡಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯವನ್ನು ಡಿಜಿಟಲ್ ಮಾಡಲಿದ್ದೇವೆ. 50 ಜಂಕ್ಷನ್ಗಳಲ್ಲಿ ಐಟಿಎಂಎಸ್ ಹಾಕಲಾಗಿದೆ ಎಂದು ತಿಳಿಸಿದರು.
ಹೊಸ ವರ್ಷದ ಆಚರಣೆಗೆ ನಾಲ್ಕು ಸಾವಿರ ಕ್ಯಾಮರಾ ಕಣ್ಗಾವಲು
ಎರಡು ವರ್ಷ ಕೊರೊನಾ ಇದ್ದ ಕಾರಣ ಹೊಸ ವರ್ಷಾಚರಣೆ ಮಾಡುಲು ಸಾಧ್ಯವಾಗಲಿಲ್ಲ. ಈ ವಾರ್ಷ ಜೋರಾಗಿ ಮಾಡುವ ಸಾದ್ಯತೆ ಇದೆ. ಪೊಲೀಸರು ಭದ್ರತೆ ಇರತ್ತದೆ. ಕಣ್ಗಾವಲಿಗೆ ನಾಲ್ಕು ಸಾವಿರ ಕ್ಯಾಮರಾ ಇದೆ. ಎಂಜಾಯ್ ಮಾಡ್ಲಿ. ಅದರೆ ಮಾದಕ ವಸ್ತುಗಳನ್ನು ಸೇವನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನುಮತಿ ಪಡೆಯದೆ ಕ್ಲಬ್, ಪಬ್ ಮತ್ತು ಕ್ಯಾಬರೆಗಳನ್ನು ತೆಗೆದಿದ್ದರೇ ಮುಚ್ಚಲೇ ಬೇಕು ಎಂದು ಎಚ್ಚರಿಕೆ ನೀಡಿದರು.
ವ್ಯವಸ್ತಿತ ಸಂಚಾರ ನಿರ್ವಹಣೆಗೆ (Signal Synchronize) 58ಕೋಟಿ ರೂ ವೆಚ್ಚ ಮಾಡಲಾಗಿದೆ. ದೇಶ ವಿದೇಶದಿಂದ ನಗರಕ್ಕೆ ಬರುತ್ತಾರೆ. ಉದ್ಯಮಿಗಳು ಬರುತ್ತಾರೆ, ಲಕ್ಷಾಂತರ ಕೋಟಿ ಹಣ ಹೂಡಿಕೆ ಆಗುತ್ತಿದೆ. ಇಲ್ಲಿ ನೆಮ್ಮದಿಯಿಂದ ಉದ್ಯಮ ನಡೆಸಬಹುದು ಅನ್ನೊ ಕಾರಣಕ್ಕೆ ಬರುತ್ತಾರೆ. ಪೊಲೀಸರಲ್ಲಿ ಸಹ ಸಣ್ಣಪುಟ್ಟ ಲೋಪ ಇದೆ. ತಪ್ಪು ಮಾಡಿದ ಪೊಲೀಸರ ಮೇಲು ಸಹ ಕ್ರಮ ತೆಗೆದುಕೊಳ್ಳುತ್ತೆವೆ. ನಮ್ಮ ಬೆಂಗಳೂರು ಪೊಲೀಸರು ಉತ್ತಮವಾಗಿದ್ದಾರೆ. ಬೇರೆ ನಗರದಲ್ಲೂ ಉತ್ತಮವಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪಿಎಸ್ಐ ನೇಮಕಾತಿ ಹಗರಣ ಹಾಗು ಚಿಲುಮೆ ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ನಾವು ತಿಪ್ಪೆ ಸಾರಿಸುವ ಕೆಲಸ ಮಾಡಿಲ್ಲ. ಇದುವರೆಗೆ ಪಿಎಸ್ಐ ಕೇಸ್ನಲ್ಲಿ 107 ಜನರನ್ನು ಬಂಧಿಸಲಾಗಿದೆ. ಇನ್ನೂ ತನಿಖೆ ನಡೆಯುತ್ತಿದೆ. ಚಿಲುಮೆ ಸಂಸ್ಥೆ ಮಾಡಿದ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣ ತನಿಖೆ ನಡೆಯುತ್ತಿದೆ. ಯಾವುದೇ ಕಾರಣಕ್ಕು ತಿಪ್ಪೆ ಸಾರಿಸುವ ಕೆಲಸ ಅಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಅಮ್ರಿತ್ ಪಾಲ್ ಮಗಳ ಪತ್ರ ವಿಚಾರವಾಗಿ ಮಾತನಾಡಿದ ಅವರು ಅಮ್ರಿತ್ ಪಾಲ್ ನಮಗೆ ದಾಯಾದಿ ಮಗ ಅಲ್ಲ. ನಮಗೆ ಯಾವುದೇ ಪ್ರಿಜುಡಿಸ್ ಇಲ್ಲ. ಸಾಕ್ಷಿ ಇಲ್ಲದವರನ್ನು ಅರೆಸ್ಟ್ ಮಾಡಿಲ್ಲ. ಸಾಕ್ಷಿ ಇದ್ದವರನ್ನು ಅರೆಸ್ಟ್ ಮಾಡಿದ್ದೇವೆ. ಅವರು ಸಹಜವಾಗಿ ಹೇಳಿದ್ದಾರೆ. ತನಿಖೆಯಲ್ಲಿ ನ್ಯೂನತೆ ಇದ್ದರೆ ಪರಿಶೀಲನೆ ಮಾಡುತ್ತೆವೆ ಎಂದು ಮಾತನಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Fri, 16 December 22