ಕರವೇ ನಾರಾಯಣಗೌಡಗೆ ತಪ್ಪಿಲ್ಲ ಸಂಕಷ್ಟ: ಅರೆಸ್ಟ್ ಆಗಿದ್ದು 1 ಕೇಸ್ ನಲ್ಲಿ, ಬಾಕಿ ಇವೆ 8 ಪ್ರಕರಣಗಳು

| Updated By: ವಿವೇಕ ಬಿರಾದಾರ

Updated on: Jan 12, 2024 | 8:19 AM

ಕರವೇ ನಾರಯಾಣಗೌಡ ಅವರ ವಿರುದ್ಧ ಇನ್ನೂ ಎಂಟು ಕೇಸ್​ಗಳು ಬಾಕಿ ಇವೆ. ಚಿಕ್ಕಜಾಲ ಪೊಲೀಸ್​ ಠಾಣೆಯಲ್ಲಿ 6 ಪ್ರಕರಣ, ಯಲಹಂಕ ಪೊಲೀಸ್​ ಠಾಣೆಯಲ್ಲಿ 2 ಪ್ರಕರಣ ಬಾಕಿ ಇವೆ. ಈ ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು 41(A) ಅಡಿ ನೋಟಿಸ್ ನೀಡಲಿದ್ದಾರೆ.

ಕರವೇ ನಾರಾಯಣಗೌಡಗೆ ತಪ್ಪಿಲ್ಲ ಸಂಕಷ್ಟ: ಅರೆಸ್ಟ್ ಆಗಿದ್ದು 1 ಕೇಸ್ ನಲ್ಲಿ, ಬಾಕಿ ಇವೆ 8 ಪ್ರಕರಣಗಳು
ಕರವೇ ಅಧ್ಯಕ್ಷ ನಾರಾಯಣಗೌಡ
Follow us on

ಬೆಂಗಳೂರು, ಜನವರಿ 12: ಕರ್ನಾಟಕ ರಕ್ಷಣಾ ವೇದಿಕೆ (Karave) ಕಳೆದ ವರ್ಷ ಡಿಸೆಂಬರ್​ 27 ರಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಾಮಫಲಕ ಮಹಾ ಅಭಿಯಾನ ಕೈಗೊಂಡಿತ್ತು. ಅಂಗಡಿ-ಮುಗ್ಗಟ್ಟು, ಮಾಲ್​ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಇಲ್ಲದಿದ್ದಕ್ಕೆ ಹೋರಾಟ ನಡೆಸಿದ್ದರು. ಅಂದು ಕನ್ನಡ ನಾಮಫಲಕವಿಲ್ಲದ (Kannada Board) ಕೆಲವು ಮಾಲ್​ ಮತ್ತು ಅಂಗಡಿಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಿದ್ದಾರೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕರವೇ ಅಧ್ಯಕ್ಷ ನಾರಾಯಣಗೌಡ (Narayangouda) ಸೇರಿದಂತೆ 29 ಜನರನ್ನು ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಕರವೇ ನಾರಾಯಣಗೌಡ ಅವರಿಗೆ ಜಾಮೀನು ಸಿಕ್ಕಿದ್ದು, ಬಿಡುಗಡೆಯಾಗಿದ್ದರು. ಆದರೆ 2017ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರವೇ ನಾರಾಯಣಗೌಡ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದರು. ಈ ಪ್ರಕರಣದಲ್ಲೂ ಕರವೇ ನಾರಾಯಣಗೌಡ ಅವರಿಗೆ ಜಾಮೀನು ಸಿಕ್ಕಿದೆ. ಆದರೆ ನಾರಾಯಣಗೌಡ ಅವರ ವಿರುದ್ಧದ ಇನ್ನೂ ಅನೇಕ ಪ್ರಕರಣಗಳು ಬಾಕಿ ಇವೆ. ಇದರಿಂದ ಕರವೇ ನಾರಾಯಣಗೌಡ ಅವರು ಜೈಲಿಂದ ಬಿಡುಗಡೆಯಾದ್ರೂ ಸಂಕಷ್ಟ ತಪ್ಪಿಲ್ಲ.

ಇದನ್ನೂ ಓದಿ: 2017ರ ಪ್ರಕರಣದಲ್ಲೂ ಕರವೇ ಅಧ್ಯಕ್ಷ ನಾರಾಯಣಗೌಡಗೆ ಜಾಮೀನು ನೀಡಿದ ಕೋರ್ಟ್

ಕರವೇ ನಾರಯಾಣಗೌಡ ಅವರು ಬಂಧನವಾಗಿದ್ದು ಒಂದು ಪ್ರಕರಣದಲ್ಲಿ, ಆದರೆ ಇನ್ನೂ ಎಂಟು ಕೇಸ್​ಗಳು ಬಾಕಿ ಇವೆ. ಚಿಕ್ಕಜಾಲ ಪೊಲೀಸ್​ ಠಾಣೆಯಲ್ಲಿ 6 ಪ್ರಕರಣ, ಯಲಹಂಕ ಪೊಲೀಸ್​ ಠಾಣೆಯಲ್ಲಿ 2 ಪ್ರಕರಣ ಬಾಕಿ ಇವೆ. ಈ ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು 41(A) ಅಡಿ ನೋಟಿಸ್ ನೀಡಲಿದ್ದಾರೆ. ಕರವೇ ನಾರಾಯಣಗೌಡ ಅವರು ಇಷ್ಟು ದಿನ ಜೈಲಲ್ಲಿದ್ದ ಕಾರಣ ಪೊಲೀಸರು ನೋಟೀಸ್ ನೀಡಿಲ್ಲ. ಇದೀಗ ಬಿಡುಗಡೆಯಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ.

ನಾರಾಯಣಗೌಡ ವಿರುದ್ಧ ಕೇಸ್​ಗಳು

ಚಿಕ್ಕಜಾಲದಲ್ಲಿ ಒಟ್ಟು 6 ಕೇಸ್​ಗಳು ಬಾಕಿ

1. ಬಿಎಂಟಿಸಿ ಬಸ್​​ಗೆ ಕಲ್ಲು ತೂರಾಟ

2. ಪೊಲೀಸ್ ಕಾನ್ಸ್​ಟೇಬಲ್​ಗೆ ಉಗಿದ ಪ್ರಕರಣ

3. ವಿವಿಧ ಕಡೆ ಹೆದ್ದಾರಿ ತಡೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪ್ರಕರಣ ಸಂಬಂಧಿಸಿದಂತೆ 143, 145, 149, 283, 8B, 427 ಸೆಕ್ಷನ್​​ಗಳ ಅಡಿ ಎಫ್​ಐಆರ್

ಯಲಹಂಕದಲ್ಲಿ 2 ಕೇಸ್​ಗಳು

1. ಬಿಎಂಟಿಸಿ ಬಸ್​ಗೆ ಡ್ಯಾಮೇಜ್ ಕೇಸ್

2. ಇಕೋ ಪೊಲೀಸ್ ಬೋರ್ಡ್ ಡ್ಯಾಮೇಜ್ ಕೇಸ್

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ