ಬೆಂಗಳೂರಿನ ಶೇ 95 ರಷ್ಟು ಮಂದಿಗೆ ವಿಟಮಿನ್ ಡಿ ಕೊರತೆ: ತಜ್ಞರು ಹೇಳುವ ಕಾರಣ ಇಲ್ಲಿದೆ

|

Updated on: Feb 12, 2024 | 3:09 PM

Vitamin-D deficiency: ವಿಟಮಿನ್ ಡಿ ಕೊರತೆಗೆ ಬಿಸಿಲಿಗೆ ಮೈಯೊಡ್ಡುವುದೇ ಪರಿಹಾರ ಎಂದು ಹಿಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈಗ ಅದೂ ಸಮಸ್ಯೆಯಾಗಿ ಪರಿಣಮಿಸಿದೆಯಂತೆ. ಬಿಸಿಲಿನ ಅಲರ್ಜಿ ಸೇರಿದಂತೆ ಹಲವು ಸಮಸ್ಯೆಗಳನ್ನು ಜನ ಎದುರಿಸುತ್ತಿರುವುದರಿಂದ ಬಿಸಿಲಿಗೆ ಮೈಯೊಡ್ಡುವಂತೆ ಸೂಚಿಸುವುದೂ ಕಷ್ಟವಾಗಿದೆ ಎನ್ನುತ್ತಿದ್ದಾರೆ ಬೆಂಗಳೂರಿನ ತಜ್ಞ ವೈದ್ಯರು.

ಬೆಂಗಳೂರಿನ ಶೇ 95 ರಷ್ಟು ಮಂದಿಗೆ ವಿಟಮಿನ್ ಡಿ ಕೊರತೆ: ತಜ್ಞರು ಹೇಳುವ ಕಾರಣ ಇಲ್ಲಿದೆ
ಬಿಸಿಲು
Follow us on

ಬೆಂಗಳೂರು, ಫೆಬ್ರವರಿ 12: ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಸೂರ್ಯನ (Sun) ಬಿಸಿಲಿಗೆ ಮೈಯೊಡ್ಡುವುದು ಆರೋಗ್ಯಕರ ಅಭ್ಯಾಸವೆಂದು ಹಿಂದೆಲ್ಲಾ ಪರಿಗಣಿಸಲಾಗಿತ್ತು. ಹೀಗೆ ಮಾಡುವುದರಿಂದ ದೇಹದ ವಿಟಮಿನ್-ಡಿ (Vitamin D) ವೃದ್ಧಿಗೆ ಸಹಾಯವಾಗುತ್ತದೆ ಮತ್ತು ಚರ್ಮಕ್ಕೆ ಪ್ರಯೋಜನ ದೊರೆಯುತ್ತದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಹೆಚ್ಚುತ್ತಿರುವ ತಾಪಮಾನದೊಂದಿಗೆ, ವಿಟಮಿನ್-ಡಿ ಕೊರತೆ ಮತ್ತು ಸೂರ್ಯನ ಅಲರ್ಜಿಯನ್ನು ಹೊಂದಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ವೈದ್ಯರು ಗಮನಿಸುತ್ತಿದ್ದಾರೆ.

ಈ ಬೆಳವಣಿಗೆಯು ಮೂಳೆಚಿಕಿತ್ಸಕರು, ಚರ್ಮರೋಗ ತಜ್ಞರು ಮತ್ತು ಆಂಕೊಲಾಜಿಸ್ಟ್‌ಗಳು ಸೇರಿದಂತೆ ವೈದ್ಯಕೀಯ ವೃತ್ತಿಪರರಿಗೆ ಕಳವಳಕಾರಿಯಾಗಿ ಪರಿಣಮಿಸಿದೆ. ಇದರಿಂದಾಗಿ ಅವರು ಈಗ ಸೂರ್ಯನಿಗೆ ಮೈ ಒಡ್ಡಿಕೊಳ್ಳುವುದನ್ನು ಶಿಫಾರಸು ಮಾಡಲು ಹಿಂಜರಿಯುತ್ತಾರೆ. ಈ ಹಿಂದೆ ಸುಮಾರು 20 ನಿಮಿಷ ಬಿಸಿಲಿಗೆ ಮೈಯೊಡ್ಡುವಂತೆ ಶಿಫಾರಸು ಮಾಡಲಾಗುತ್ತಿತ್ತು. ಆದರೆ, ಈಗ 5-10 ನಿಮಿಷಗಳಿಗೆ ಅದನ್ನು ಇಳಿಕೆ ಮಾಡಲಾಗಿದೆ.

ಅನೇಕ ರೋಗಿಗಳು ಅಲರ್ಜಿಗಳು ಮತ್ತು ಇತರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಚರ್ಮರೋಗ ತಜ್ಞರಾದ ಡಾ. ಅನಘಾ ಸುಮಂತ್ ಹೇಳಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ.

ಸೂರ್ಯನ ಬಿಸಿಲಗೆ ಮೈಯೊಡ್ಡಲು ಸೂಕ್ತ ಸಮಯವೆಂದರೆ ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಮಧ್ಯಾಹ್ನ 3.30 ರಿಂದ ಸಂಜೆ 5 ರ ನಡುವೆ. ಆಗ ಶಾಖದ ಅಲೆಗಳು ಕಠಿಣವಾಗಿರುವುದಿಲ್ಲ. ಸುಮಾರು ಶೇ 95 ರಷ್ಟು ಬೆಂಗಳೂರಿಗರು ವಿಟಮಿನ್-ಡಿ ಕೊರತೆಯನ್ನು ಹೊಂದಿದ್ದಾರೆ ಎಂದು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಮೂಳೆ ತಜ್ಞ ಮತ್ತು ಪ್ರಾಧ್ಯಾಪಕ ಡಾ.ಅವಿನಾಶ್ ಸಿಕೆ ತಿಳಿಸಿದ್ದಾರೆ. ಈ ಮಧ್ಯೆ, ಸನ್‌ಸ್ಕ್ರೀನ್ ಬಳಸುವುದರಿಂದ ವಿಟಮಿನ್ ಡಿ ಕೊರತೆ ಆಗುವುವುದಿಲ್ಲ ಎಂದೂ ಚರ್ಮರೋಗ ತಜ್ಞರು ಒತ್ತಿ ಹೇಳಿದ್ದಾರೆ.

ದದ್ದುಗಳು, ಕಿರಿಕಿರಿ, ಪಿಗ್ಮೆಂಟೇಶನ್ ಮತ್ತು ಪಾಲಿಮಾರ್ಫಿಕ್ ಲೈಟ್ ಎರಪ್ಷನ್ ಸೇರಿದಂತೆ ಸೂರ್ಯನ ಅಲರ್ಜಿಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಸುಮಾರು ಶೇ 20ರಷ್ಟು ರೋಗಿಗಳು ಪ್ರತಿದಿನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಆದ್ದರಿಂದ, ಜನರು ಈಗ ಪ್ರತಿ ಆರು ತಿಂಗಳಿಗೊಮ್ಮೆ ನಿಯಮಿತವಾಗಿ ಚರ್ಮ ಮತ್ತು ವಿಟಮಿನ್ ಮಟ್ಟವನ್ನು ಪರೀಕ್ಷಿಸಬೇಕೆಂದು ಸಲಹೆ ನೀಡಲಾಗುತ್ತಿದೆ ಎಂದು ಮತ್ತೊಬ್ಬರು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಗಿಯಲ್ಲಿದೆ ಹಲವಾರು ಆರೋಗ್ಯ ಲಾಭಗಳು, ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದು

ಸೂರ್ಯನ ಬಿಸಿಲಿಗೆ ಮೈ ಒಡ್ಡಿಕೊಳ್ಳುವುದು ಮುಖ್ಯವಾದರೂ, ಹೆಚ್ಚುತ್ತಿರುವ ತಾಪಮಾನದೊಂದಿಗೆ ಬಿಸಿಲು ಸಂಬಂಧಿತ ಚರ್ಮದ ಹಾನಿಯ ಬಗ್ಗೆಯೂ ನಾವು ತಿಳಿದಿರಬೇಕು. ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ನೊಂದಿಗೆ ಸನ್‌ಬರ್ನ್ ತಡೆಯಲು ಮತ್ತು ದೀರ್ಘಾವಧಿಯ ಸಮಸ್ಯೆ ತಡೆಗಟ್ಟಲು ಹೊರಹೋಗುವ ಮೊದಲು ಸೂಕ್ತ ಬಟ್ಟೆಗಳನ್ನು ಧರಿಸಬೇಕು. ಬೆಳಗ್ಗೆ 10 ರಿಂದ 4 ರವರೆಗೆ ಸೂರ್ಯನ ಬಿಸಿಲಿಗೆ ನೇರ ಮೈ ಒಡ್ಡುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ ಎಂದು ತಜ್ಞ ವೈದ್ಯರೊಬ್ಬರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ