Karnataka Budget Session: ರಾಜ್ಯಪಾಲರನ್ನು ಬೀಳ್ಕೊಡಲು ಹೊರಬಂದ ಸಿಎಂ ಸಿದ್ದರಾಮಯ್ಯ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಎಡವಿದರು!

|

Updated on: Feb 12, 2024 | 1:56 PM

Karnataka Budget Session: ಭಾಷಣದ ಬಳಿಕ ಅವರು ರಾಜಭವನಕ್ಕೆ ವಾಪಸ್ಸು ಹೋಗುವಾಗ ಬೀಳ್ಕೊಡಲು ಸ್ಪೀಕರ್ ಯು.ಟಿ ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮೊದಲಾದವರು ಅವರೊಂದಿಗೆ ಹೊರಬಂದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜಕಾರಣದಲ್ಲಿ ಎಡವಿದವರಲ್ಲ ಅಂತ ಅವರ ಕಟ್ಟಾ ಅಭಿಮಾನಿಗಳು ಹೇಳುತ್ತಾರೆ. ಆದರೆ ಇವತ್ತು ಅವರು ಅಕ್ಷರಶಃ ಎಡವಿದರು ಮಾರಾಯ್ರೇ! ರಾಜಕೀಯದಲ್ಲಲ್ಲ, ಪ್ರಜಾಪ್ರಭುತ್ವದ ದೇಗುಲವೆಂದು ಕರೆಸಿಕೊಳ್ಳುವ ವಿಧಾನಸೌಧ ಮೆಟ್ಟಿಲುಗಳನ್ನು ಇಳಿಯುವಾಗ. ಇವತ್ತು ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಶುರುವಾಗಿದೆ ಮತ್ತು ಸಂಪ್ರದಾಯದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಭಾಷಣದೊಂದಿಗೆ ಅಧಿವೇಶನ ಶುರುವಾಯಿತು. ಭಾಷಣದ ಬಳಿಕ ಅವರು ರಾಜಭವನಕ್ಕೆ ವಾಪಸ್ಸು ಹೋಗುವಾಗ ಬೀಳ್ಕೊಡಲು ಸ್ಪೀಕರ್ ಯು.ಟಿ ಖಾದರ್ (Speaker UT Khader), ಸಭಾಪತಿ ಬಸವರಾಜ ಹೊರಟ್ಟಿ, ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಮೊದಲಾದವರು ಅವರೊಂದಿಗೆ ಹೊರಬಂದರು. ಎಲ್ಲರ ಜೊತೆ ಮೆಟ್ಟಲಿಳಿದು ರಾಜ್ಯಪಾಲರ ಕಾರಿನ ಬಳಿ ಬರುತ್ತಿದ್ದ ಸಿದ್ದರಾಮಯ್ಯ ಎಡವಿದರು. ಅವರ ಹಿಂದಿದ್ದ ಭದ್ರತಾ ದಳದ ಸಿಬ್ಬಂದಿ ಮತ್ತು ಹೆಚ್ ಕೆ ಪಾಟೀಲ್ ಅವರ ನೆರವಿಗೆ ಧಾವಿಸಿದರು. ಎಡವಿದ ಮುಖ್ಯಮಂತ್ರಿ ಕೆಳಗೇನೂ ಬೀಳಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ