ದುಬಾರಿ ಬೆಲೆಯ ಶ್ವಾನಗಳನ್ನು ಸಾಕುವವರು ಜಾಗ್ರತೆ ವಹಿಸುವುದು ಅಗತ್ಯ, ಕಾರಣ ಇಲ್ಲಿದೆ

ನಿಮ್ಮ ಮನೆಯಿಂದಲೇ ಶ್ವಾನವನ್ನು ಕದ್ದು, ಮಾರಾಟ ಮಾಡಬಹುದು. ಆದ್ದರಿಂದ ನೀವು ದುಬಾರಿ ಬೆಲೆಯ ಶ್ವಾನಗಳನ್ನು ಸಾಕುವಾಗ ಜಾಗ್ರತೆಯಿಂದಿರುವುದು ಅಗತ್ಯ.

ದುಬಾರಿ ಬೆಲೆಯ ಶ್ವಾನಗಳನ್ನು ಸಾಕುವವರು ಜಾಗ್ರತೆ ವಹಿಸುವುದು ಅಗತ್ಯ, ಕಾರಣ ಇಲ್ಲಿದೆ
5 ತಿಂಗಳ ಹಸ್ಕಿ ತಳಿಯ ಶ್ವಾನ ಶೌರ್ಯ

Updated on: Feb 14, 2023 | 5:27 PM

ಬೆಂಗಳೂರು: ರಾಜಾಜಿನಗರದ ನಿವಾಸಿ ಚೈತ್ರಾ ಮುದ್ದಾಗಿ ಸಾಕಿದ್ದ 5 ತಿಂಗಳ ಹಸ್ಕಿ ತಳಿಯ ಶ್ವಾನವನ್ನು ಕಳ್ಳತನ ಮಾಡಿ, ಮಾರಾಟ ಮಾಡಲು ಮುಂದಾಗಿದ್ದರೆ, ಆದರೆ ಚೈತ್ರಾಳ ಸಮಯ ಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದ ತನ್ನ ಶ್ವಾನವನ್ನು ಮರಳಿ ಮನೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾಳೆ. ಚೈತ್ರಾ ತಾನು ಸಾಕಿದ್ದ ಶ್ವಾನಕ್ಕೆ ಶೌರ್ಯ ಎಂದು ಹೆಸರಿಟ್ಟಿದ್ದರು. ಮೂರು ದಿನಗಳಿಂದ ಶೌರ್ಯ ಕಾಣೆಯಾಗಿದ್ದರಿಂದ ಹುಡುಕಾಟದಲ್ಲಿ ತೊಡಗಿದ್ದಾರೆ.

ನಾಯಿ ಮಾಲೀಕರು, ಪ್ರಾಣಿ ಕಾರ್ಯಕರ್ತರು ಮತ್ತು ಸಾಕುಪ್ರಾಣಿ ಅಂಗಡಿಗಳ ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ತನ್ನ ಶ್ವಾನ ಕಾಣೆಯಾಗಿರುವುದನ್ನು ತಿಳಿಸಿದ್ದಾಳೆ. ಇದರಿಂದಾಗಿ ಈ ವಾಟ್ಸಾಪ್ ಗ್ರೂಪ್​​ಗಳ ಮೂಲಕ ಆಕೆಯ ನಾಯಿಯನ್ನು ಮಾರಾಟಕ್ಕೆ ಇಡಲಾಗಿದೆ ಎಂದು ತಿಳಿದುಬಂದಿದೆ. ನಂತರ ತಮ್ಮ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಕೆಯ ಅದೃಷ್ಟಕ್ಕೆ ಶೌರ್ಯ ಕದಿಯಲು ಬಳಸಿದ್ದ ಬೈಕ್ ನ ನೋಂದಣಿ ಸಂಖ್ಯೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಗಳು ಸಿಕ್ಕಿಬೀಳಬಹುದೆಂಬ ಭಯದಿಂದ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ಕೆಂಪು ಗುಲಾಬಿಗೆ ಭಾರೀ ಬೇಡಿಕೆ; ದರವೂ ಹೆಚ್ಚಳ

ಶೌರ್ಯವನ್ನು 3000 ರೂಪಾಯಿಗೆ ಶೌರ್ಯನಂತೆ ಕಾಣುವ ಹಸ್ಕಿ ನಾಯಿಯನ್ನು ಮಾರಾಟಕ್ಕೆ ಇಡಲಾಗಿದೆ ಮತ್ತು ಮಾರಾಟಗಾರನು ತನ್ನ ಸಂಪರ್ಕ ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ. ಇದು ತಿಳಿದ ಕೂಡಲೇ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಹೇಮಂತ್​​ ಎಂಬ ವಿದ್ಯಾರ್ಥಿ ಆಕೆಯ ನಾಯಿಯನ್ನು ಕದ್ದು ಕೊಂಡು ಹೋಗಿರುವುದು ತಿಳಿದು ಬಂದಿದೆ. ಇದಲ್ಲದೇ ಹೇಮಂತ್​​​ ಹಸ್ಕಿ ನಾಯಿಗಳನ್ನು ಖರೀದಿಸಲು ಆಸಕ್ತಿಯಿರುವವರಿಗೆ ತನ್ನ ನಂಬರ್​​ ಹಂಚಿಕೊಂಡಿದ್ದಾನೆ. ವಿಷಯ ತಿಳಿದು ಚೈತ್ರಾ ತನ್ನ ಸ್ನೇಹಿತರೊಂದಿಗೆ ಹೇಮಂತ್ ಮನೆಗೆ ಹೋಗಿ ನೋಡಿದಾಗ ಅದು ಈಗಾಗಲೇ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ನಂತರ ಅವರು ಖರೀದಿದಾರರನ್ನು ಭೇಟಿಯಾಗಲು ಆರೋಪಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಖರೀದಿದಾರರಿಂದ ತನ್ನ ನಾಯಿಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 5:26 pm, Tue, 14 February 23