AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಸಾಲ ಮನ್ನಾ ಮಾಡದವರು ಉದ್ಯಮಿಗಳ ಸಾಲ ಮನ್ನಾ ಮಾಡಿರುವುದು ಸರಿಯೇ?: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಪ್ರಶ್ನೆ

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದರು. ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ ಅಂತಾ ಹೇಳುತ್ತಾರೆ. ಉದ್ಯಮಿಗಳ ಸಾಲ ಮನ್ನಾ ಸರಿಯೇ? ಎಂದು ಪ್ರಶ್ನಿಸಿದರು.

ರೈತರ ಸಾಲ ಮನ್ನಾ ಮಾಡದವರು ಉದ್ಯಮಿಗಳ ಸಾಲ ಮನ್ನಾ ಮಾಡಿರುವುದು ಸರಿಯೇ?: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಪ್ರಶ್ನೆ
ಸಿದ್ದರಾಮಯ್ಯ
TV9 Web
| Updated By: Rakesh Nayak Manchi|

Updated on:Feb 14, 2023 | 3:18 PM

Share

ವಿಧಾನಸಭೆ: ರೈತರ ಸಾಲಮನ್ನಾ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ ಅಂತಾ ಹೇಳುತ್ತಾರೆ. ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೀರಲ್ಲ ಇದು ಸರಿಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಪ್ರಶ್ನಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡುವ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿಕೆ ಪ್ರಸ್ತಾಪಿಸಿದ ಅವರು, ೧೨ ಲಕ್ಷಕ್ಕೂ ಹೆಚ್ಚು ಕೋಟಿ‌ ಸಾಲ ಮನ್ನಾ ಮಾಡಿದ್ದೀರಿ. ಯಾವ ಕಾರಣಕ್ಕೆ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದೀರಾ ಹೇಳಿ? ಇದು ಬಿಜೆಪಿಯವರ ಮೈಂಡ್​ ಸೆಟ್​​​​ ಎಂದು ಖಾರವಾಗಿ ನುಡಿದರು. ನೀವು ನರೇಗಾ ಯೋಜನೆಯ ಹಣವನ್ನು ಕಡಿತ ಮಾಡಿದ್ದೀರಿ, ರಸಗೊಬ್ಬರದ ಸಬ್ಸಿಡಿಯನ್ನು ಕೂಡ ತೆಗೆದು ಹಾಕಿದ್ದೀರಿ. ಇನ್ನೆಲ್ಲಿ ರೈತರ ಆದಾಯ ದುಪ್ಪಟ್ಟಾಗುತ್ತದೆ ಎಂದು ಹೇಳಿದರು.

ಮೊದಲು ಗೋ ಹತ್ಯೆ ನಿಷೇಧ ಕಾನೂನು ವಾಪಸ್ ಪಡೆಯಿರಿ

ಗೋವಿನ ರಕ್ಷಣೆ ಆಗಿದೆ ಎಂದು ಹೇಳುತ್ತಾರೆ. ಆದರೆ ರಾಜ್ಯದಲ್ಲಿ ಗೋ ಶಾಲೆಗಳು ಜಾಸ್ತಿ ಇಲ್ಲ. ರೈತರಿಗೆ ಮಾರಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದಾಗ ಪಾಟೀಲರನ್ನು ಗದರಿಸಿದ ಸಿದ್ದರಾಮಯ್ಯ, ನೀವು ರೈತರಿದ್ದೀರಿ, ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಿ ಎಂದರು. ಗೋ ಹತ್ಯೆ ನಿಷೇಧ ಕಾಯಿದೆ ಹಿಂಪಡೆಯಿರಿ. ಮೊದಲಿನಂತೆಯೇ ಕಾಯಿದೆ ಇರಲಿ. ಅನುಪಯುಕ್ತ ರಾಸುಗಳನ್ನ ಮಾರಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.

ಕೋಮುವಾದಿ ಅಜೆಂಡಾ ತರಲು ಗೋ ಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಲಾಗಿದೆ. ಒಂದು ಹಸುವಿಗೆ‌ 60 ರೂಪಾಯಿ‌ ಕೊಡುತ್ತೀರಿ, ಇದು ಸಾಕಾಗುತ್ತಾ? ಈ ಮೊದಲು ನಿರುಪಯುಕ್ತ ಗೋವುಗಳನ್ನು ರೈತರು‌ ಮಾರಾಟ ಮಾರಿಕೊಳ್ಳುತ್ತಿದ್ದರು. ಆದರೆ ಈಗ ಮಾರಾಟ‌ ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಹೇಳುವಾಗ ಮಧ್ಯಪ್ರವೇಶಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ಮಾರಾಟ ಮಾಡಬಹುದು ಎಂದರು.

ಇದನ್ನೂ ಓದಿ: ಕೋಲಾರ: ಸಿದ್ದರಾಮಯ್ಯ ವಿರುದ್ಧ ಕೃಷ್ಣಾರೆಡ್ಡಿಗೆ ಬಿಜೆಪಿಯಿಂದ ಟಿಕೆಟ್ ಆಫರ್: ಹೊಸ ಬಾಂಬ್ ಸಿಡಿಸಿದ ಶಾಸಕ ಶ್ರೀನಿವಾಸಗೌಡ

ಕಾಯಿದೆ ಜಾರಿ ನಂತರ ಮಾರಾಟ ಮಾಡಲು ಅವಕಾಶ ಇಲ್ಲ ಕಣ್ರೀ‌ ಎಂದು ಸಿದ್ದರಾಮಯ್ಯ ಅವರು ಗೃಹಸಚಿವರಿಗೆ ತಿರುಗೇಟು ನೀಡಿದರಲ್ಲದೆ, ಹೇ ಮಾಧುಸ್ವಾಮಿ, ಇವರಿಗೆ ಸ್ವಲ್ಪ ನೀವೇ ಹೇಳಿ ಕೊಡ್ರೀ ಎಂದರು. ಈ ವೇಳೆ, ಹಾಗಾದರೆ‌ ಏನು ಮಾಡಬೇಕು ನೀವೇ ಹೇಳಿ‌ ಸಿದ್ದರಾಮಯ್ಯ ‌ನವರೇ ಎಂದು ಗೃಹಸಚಿವರು ಕೇಳಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಗೋ ಹತ್ಯೆ ನಿಷೇಧ ಕಾನೂನು ವಾಪಸ್ ಪಡೆಯಿರಿ, ಈ‌ ಮೊದಲು‌ ಇದ್ದಂತೆ‌ಯೇ ಇರಲಿ. ಮೊದಲು ಕಾನೂನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಬ್ಯಾಡ್ ಕೇಸ್​​ ಗುಡ್​ ಲಾಯರ್​​

ರಾಜ್ಯಪಾಲರ ಭಾಷಣಕ್ಕೆ ಬನ್ನಿ ಎಂದು ಮಾಧುಸ್ವಾಮಿ ಹೇಳಿದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬಗ್ಗೆ ನನಗೆ ಗೌರವವಿದೆ. ಅವರು ಬ್ಯಾಡ್ ಕೇಸ್​​ ಗುಡ್​ ಲಾಯರ್. ನಾನು ವಕೀಲನಾಗಿದ್ದಾಗ ಓರ್ವ ಹಿರಿಯ ವಕೀಲರಿದ್ದರು. ಯಾವುದೇ ಬ್ಯಾಡ್ ಕೇಸ್ ಬಂದರೂ ಅವರ ಬಳಿ ಕಳಿಸುತ್ತಿದ್ದರು. 25 ಮಧ್ಯಂತರ ಅರ್ಜಿಗಳನ್ನು ಹಾಕುತ್ತಿದ್ದರು. ಜಡ್ಜ್​​ ಈ ಎಲ್ಲಾ ವಾದಗಳನ್ನು ಕೇಳಿ ತೀರ್ಪು ಕೊಡಬೇಕಿತ್ತು. ಇದು ಮುಗಿಯಲು 15ರಿಂದ 20 ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು. ಅರ್ಜಿ ಹಾಕಿದವನು, ಮಕ್ಕಳು ಸತ್ತು, ಮೊಮ್ಮಕ್ಕಳ ಕಾಲಕ್ಕೆ ತೀರ್ಪು ಬರುತ್ತಿತ್ತು. ಹಾಗಾಗಿ ಗೆದ್ದವನು ಸೋತ-ಸೋತವನು ಸತ್ತ ಎಂದು ಹೇಳುತ್ತಿದ್ದೆವು ಎಂದರು.

ಹತ್ತಿ ರಫ್ತು ನಿಷೇಧ ಮಾಡಲಾಗಿದೆ, ರೈತರು ಏನು ಮಾಡಬೇಕು?

ಹತ್ತಿ ರಫ್ತು ನಿಷೇಧ ಮಾಡಲಾಗಿದೆ, ರೈತರು ಏನು ಮಾಡಬೇಕು ಎಂದು ಸದನದಲ್ಲಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ರಾಜ್ಯಪಾಲರ ಭಾಷಣದ ವೇಳೆ ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿಲ್ಲ, ಅಡಕೆಗೆ ಬಂದಿರುವ ರೋಗ ನಿಯಂತ್ರಣಕ್ಕೆ ಕ್ರಮಕೈಗೊಂಡಿಲ್ಲ, ಭೂತಾನ್​ನಿಂದ ಅಡಕೆ ಆಮದು ಮಾಡಿಕೊಳ್ಳುತ್ತಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಆರಗ ಜ್ಞಾನೇಂದ್ರ, ಭೂತಾನ್ ದೇಶದಿಂದ ಯಾವುದೇ ಅಡಕೆ ಆಮದು ಮಾಡಿಕೊಂಡಿಲ್ಲ ಎಂದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮೊದಲು ಅಡಕೆ ಬೆಲೆ ಎಷ್ಟು ಇತ್ತು? ಈಗ ಎಷ್ಟಿದೆ?, ಈಗ ಯಾಕೆ ಅಡಕೆ ಬೆಲೆ ಕಡಿಮೆ ಆಯ್ತು ಹೇಳಿ?ಅಡಕೆ ಬೆಳೆಗಾರರು ಯಾಕೆ ಆತ್ಮಹತ್ಯೆ ಮಾಡಿಕೊಂಡರು ಹೇಳಿ? ಅಡಕೆ ಬೆಲೆ ಕಡಿಮೆ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂದರು.

ಇದನ್ನೂ ಓದಿ: Assembly Polls: ಬಾದಾಮಿ ಜನರ ಪ್ರೀತಿ ಕಂಡು ಕರಗಿದ ಸಿದ್ದರಾಮಯ್ಯನವರ ಬಾಯಿಂದ ಮಾತು ಹೊರಡಲಿಲ್ಲ!

ಅಡಕೆ ಎಲೆ ಚುಕ್ಕಿ ರೋಗದ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ತಕ್ಷಣಕ್ಕೆ ಎಲೆ ಚುಕ್ಕಿರೋಗದ ಹೆಸರು ನೆನಪಾಗದೇ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಜೊತೆ ಕೇಳಿದರು. ಎಂತದಯ್ಯಾ ಅದು ನಿಮ್ಮ ಕಡೆಯೇ ಬಂದಿರೋದು ಎಂದು ಕೇಳಿದರು. ಇದಕ್ಕೆ ಖಾದರ್, ಕೊಳೆ ರೋಗ ಎಂದರು. ಇದೇ ವೇಳೆ ವಿಪಕ್ಷ ಸದಸ್ಯರು ಬೆಂಕಿ ರೋಗ, ಚುಕ್ಕಿ ರೋಗ ಎಂದರು. ಇದಕ್ಕೆ ಸಿದ್ದರಾಮಯ್ಯ, ನೋಡು ಚುಕ್ಕಿ ರೋಗ ಅವರಿಗೆ ಗೊತ್ತು, ನಿನಗೇ ಗೊತ್ತಿಲ್ಲ ಎಂದು ಖಾದರ್ ಅವರನ್ನು ಕಿಚಾಯಿಸಿದರು.

ಒನಕೆಯಿಂದ ತೌಡು ಕುಟ್ಟಿದರೆ ಎಣ್ಣೆ ಬರುತ್ತೇನ್ರೀ?

ಚರ್ಚೆ ಮುಂದುವರಿಸಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೂಲಕ ತೌಡು ಕುಟ್ಟಿಸಿದ್ದಾರೆ ಎಂದು ಆರೋಪಿಸಿದರು. ಈ ಹೇಳಿಕೆಗೆ ಆಕ್ಷೇಪಿಸಿದ ಸಚಿವ ಮಾಧುಸ್ವಾಮಿ, ತೌಡು ಕುಟ್ಟಿದರೆ ತಪ್ಪೇನು? ತೌಡು ಕುಟ್ಟಿದರೆ ಎಣ್ಣೆ ಬರುತ್ತದೆ, ತೌಡಿನಿಂದ ಆಯಿಲ್ ಸಂಸ್ಕರಣೆ ಮಾಡುತ್ತೇವೆ ಎಂದರು. ಈ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ತೌಡು ಕುಟ್ಟಿದರೆ ಎಣ್ಣೆ ಬರಲ್ಲ, ಒನಕೆಯಿಂದ ತೌಡು ಕುಟ್ಟಿದರೆ ಎಣ್ಣೆ ಬರುತ್ತೇನ್ರೀ? ತೌಡು ಕುಟ್ಟೋದು ಅನ್ನೋದು ಒಂದು ನಾಣ್ಣುಡಿ, ಒನಕೆಯಲ್ಲಿ ತೌಡು ಕುಟ್ಟಿದರೆ ಆಯಿಲ್ ಬರಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Tue, 14 February 23

ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್