Politics: ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ಸೆಕೆಂಡ್ ಇನ್ನಿಂಗ್ಸ್; ಯಾರೆಲ್ಲಾ ರಾಜಕೀಯಕ್ಕೆ ಎಂಟ್ರಿ?

Bureaucrats and Politcs: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಹಲವು ಮಾಜಿ ಸರ್ಕಾರಿ ಅಧಿಕಾರಿಗಳು ರಾಜಕೀಯ ಬಣ್ಣ ಹಚ್ಚಿದ್ದಾರೆ ಅಥವಾ ಹಚ್ಚಲಿದ್ದಾರೆ. ಕೆಲವರು ವಿವಿಧ ಪಕ್ಷಗಳ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅಂಥವರ ಪಟ್ಟಿ ಇಲ್ಲಿದೆ:

Politics: ಕರ್ನಾಟಕದಲ್ಲಿ ಸರ್ಕಾರಿ ಅಧಿಕಾರಿಗಳ ಸೆಕೆಂಡ್ ಇನ್ನಿಂಗ್ಸ್; ಯಾರೆಲ್ಲಾ ರಾಜಕೀಯಕ್ಕೆ ಎಂಟ್ರಿ?
ಭಾಸ್ಕರ್ ರಾವ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Feb 14, 2023 | 1:33 PM

ಬೆಂಗಳೂರು: ಕೆಲ ವರ್ಷಗಳ ಹಿಂದಿನವರೆಗೂ ರಾಜಕೀಯಕ್ಕೆ ಸರ್ಕಾರಿ ಅಧಿಕಾರಿಗಳು (Bureaucrats), ಸ್ವಾಮೀಜಿಗಳು ನೇರ ಪ್ರವೇಶ ಮಾಡುವುದು ಬಹಳ ಅಪರೂಪ ಎಂಬಂತಿತ್ತು. ಈಗ ಸರ್ಕಾರಿ ಅಧಿಕಾರಿಗಳು ನಿವೃತ್ತಿ ನಂತರ ಅಥವಾ ರಾಜೀನಾಮೆ ನೀಡಿ ರಾಜಕೀಯ ಹಾದಿ ಹಿಡಿಯುವ ಟ್ರೆಂಡ್ ಶುರುವಾಗಿದೆ. ಮಾಜಿ ಐಎಎಸ್ ಅಧಿಕಾರಿ ಎಸ್ ಜೈಶಂಕರ್ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೈ ಎನಿಸಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ ಅಣ್ಣಾಮಲೈ ಈಗ ತಮಿಳುನಾಡಿನಲ್ಲಿ ಬಿಜೆಪಿಯ ಸ್ಟಾರ್ ಮ್ಯಾನ್ ಆಗಿದ್ದಾರೆ. ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆಮ್ ಆದ್ಮಿ ಪಥಕ್ಕೆ ಹೊರಳಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಹಲವು ಮಾಜಿ ಸರ್ಕಾರಿ ಅಧಿಕಾರಿಗಳು ರಾಜಕೀಯ ಬಣ್ಣ ಹಚ್ಚಿದ್ದಾರೆ ಅಥವಾ ಹಚ್ಚಲಿದ್ದಾರೆ. ಕೆಲವರು ವಿವಿಧ ಪಕ್ಷಗಳ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ಸರ್ಕಾರಿ ಅಧಿಕಾರಿಗಳ ರಾಜಕೀಯ ಹಾದಿ

ಭಾಸ್ಕರ್ ರಾವ್, ಮಾಜಿ ಐಪಿಎಸ್ ಅಧಿಕಾರಿ: ಎಎಪಿ ಬೆಂಗಳೂರು

ಕೆ ಮಥಾಯ್, ಮಾಜಿ ಐಎಎಸ್ ಅಧಿಕಾರಿ: ಎಎಪಿ ಬೆಂಗಳೂರು

ಹೆಚ್​ಟಿ ಅನಿಲ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ: ಬಿಜೆಪಿ

ಎಂ ಲಕ್ಷ್ಮೀನಾರಾಯಣನ್, ನಿವೃತ್ತ ಐಎಎಸ್ ಅಧಿಕಾರಿ: ಬಿಜೆಪಿ

ಸುಧಾಮ್ ದಾಸ್, ಐಆರ್​ಎಸ್ ಅಧಿಕಾರಿ: ಕಾಂಗ್ರೆಸ್

ಸುಭಾಷ್ ಚಂದ್ರ ರಾಥೋಡ್, ಸಿವಿಲ್ ನ್ಯಾಯಾಧೀಶ: ಜೆಡಿಎಸ್

ಇದನ್ನೂ ಓದಿ: Belagavi: ಆತ ಸರ್ಕಾರಿ ನೌಕರಿಯಲ್ಲಿದ್ದ ಬಾಡಿ ಬಿಲ್ಡರ್, ಪತ್ನಿ ಕೆಎಎಸ್ ಅಧಿಕಾರಿ: ಆದರೂ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಇವರ ಪೈಕಿ ಭಾಸ್ಕರ್ ರಾವ್ ಅವರು ಬೆಂಗಳೂರಿನ ಬಿಜೆಪಿ ಭದ್ರಕೋಟೆ ಬಸವನಗುಡಿಯಲ್ಲಿ ಎಎಪಿ ಟಿಕೆಟ್​ನಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಅವರು ಸುತ್ತಾಟ ನಡೆಸಿದ್ದಾರೆ. ಕೆ ಮಥಾಯಿ ಕೂಡ ಬೆಂಗಳೂರಿನ ಒಂದು ಕ್ಷೇತ್ರದಲ್ಲಿ ಪೊರಕೆ ಗುರುತಿನಡಿ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.

ಎಚ್​ಟಿ ಅನಿಲ್ ಕುಮಾರ್ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಜಿ ಪರಮೇಶ್ವರ್ ವಿರುದ್ಧ ಸ್ಪರ್ಧಿಸಬಹುದು. ಎಂ ಲಕ್ಷ್ಮೀನಾರಾಯಣ್ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಹಿಂದೆ ರಾಜಕೀಯ ಹಾದಿ ಹಿಡಿದ ಅಧಿಕಾರಿಗಳು

ಹೆಚ್​ಟಿ ಸಾಂಗ್ಲಿಯಾನ, ಕೋದಂಡರಾಮಯ್ಯ, ಬಿ.ಸಿ. ಪಾಟೀಲ್, ಪಿ ರಾಜೀವ್ ಮೊದಲಾದವರು ರಾಜಕೀಯಕ್ಕೆ ಧುಮುಕಿ ಒಂದಷ್ಟ ಯಶಸ್ಸು ಕಂಡಿದ್ದವರು. ಬಿ.ಸಿ. ಪಾಟೀಲ್ ರಾಜಕೀಯ ಬುನಾದಿ ಹಾಕಿಕೊಂಡು ಮಂತ್ರಿಯಾಗಿ ಗಮನ ಸೆಳೆದಿದ್ದಾರೆ. ಪಿ ರಾಜೀವ್ ಅವರು ಬಿಜೆಪಿಯಲ್ಲಿ ಉಜ್ವಲ ಭವಿಷ್ಯ ಹೊಂದಿದ್ದಾರೆ.

Published On - 1:33 pm, Tue, 14 February 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?