Belagavi: ಆತ ಸರ್ಕಾರಿ ನೌಕರಿಯಲ್ಲಿದ್ದ ಬಾಡಿ ಬಿಲ್ಡರ್, ಪತ್ನಿ ಕೆಎಎಸ್ ಅಧಿಕಾರಿ: ಆದರೂ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಪತಿ-ಪತ್ನಿ ಚೆನ್ನಾಗಿಯೇ ಇದ್ದರೂ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪ ಆಗಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಅಥವಾ ಬೇರೆ ಯಾವುದಾದ್ರೂ ಕಾರಣಕ್ಕೆ ಜಾಫರ್ ಆತ್ಮಹತ್ಯೆಯತ್ತ ಮುಖ ಮಾಡಿದ್ರಾ?

Belagavi: ಆತ ಸರ್ಕಾರಿ ನೌಕರಿಯಲ್ಲಿದ್ದ ಬಾಡಿ ಬಿಲ್ಡರ್, ಪತ್ನಿ ಕೆಎಎಸ್ ಅಧಿಕಾರಿ: ಆದರೂ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಪತ್ನಿ ಕೆಎಎಸ್ ಅಧಿಕಾರಿ: ಆದರೂ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 14, 2023 | 12:36 PM

ಹೆಂಡತಿ ಉನ್ನತ ಹುದ್ದೆಯಲ್ಲಿದ್ದರೆ, ಗಂಡ (Husband) ಸಹ ಸರ್ಕಾರಿ ನೌಕರಿಯಲ್ಲಿದ್ದ. ಮದುವೆಯಾಗಿ ಎರಡು ಮಕ್ಕಳಿದ್ದು, ಕೆಲಸದ ಜತೆಗೆ ಆತ ಬಾಡಿ ಬಿಲ್ಡ್ (Body Builder) ಕೂಡ ಮಾಡಿ ಹೆಸರು ಮಾಡಿಕೊಂಡಿದ್ದ. ಹೀಗಿದ್ದವ ಇಂದು ಏಕಾಏಕಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ (Suicide). ಅಷ್ಟಕ್ಕೂ ಯಾರು ಆತ? ಅದ್ಯಾವ ಕಾರಣಕ್ಕೆ ಆತ್ಮಹತ್ಯೆ ದಾರಿ ಹಿಡಿದ? ಉನ್ನತ ಹುದ್ದೆಯಲ್ಲಿದ್ದರೂ ದಂಪತಿ ನಡುವೆ ಆಗಿದ್ದೇನು, ಅಂತೀರಾ? ಈ ಸ್ಟೋರಿ ನೋಡಿ. ಮೇಲಿನ ಪೋಟೋದಲ್ಲಿರುವ ವ್ಯಕ್ತಿಯ ಹೆಸರು ಜಾಫರ್ ಫಿರ್ಜಾದೆ ಅಂತಾ. ಇನ್ನೂ 39 ವರ್ಷ ವಯಸ್ಸು. ನೋಡಿದರೆ ಗೊತ್ತಾಗುತ್ತೆ ಈತ ಒಬ್ಬ ಬಾಡಿ ಬಿಲ್ಡರ್ ಅಂತಾ. ಕಟ್ಟು ಮಸ್ತ್ ಆದ ದೇಹ, ಒಳ್ಳೆಯ ಕೆಲಸದಲ್ಲಿರುವ ಈತ ಮನನೊಂದು ಮನೆಯಲ್ಲಿ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿಯ (Belagavi) ಅಜಂ ನಗರದ ನಿವಾಸಿಯಾಗಿರುವ ಜಾಫರ್ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಆಗಿ ಸರ್ಕಾರಿ ನೌಕರಿಯಲ್ಲಿದ್ದ. ಇನ್ನು ಜಾಫರ್ ಫಿರ್ಜಾದೆ ಅವರ ಪತ್ನಿ ರೇಷ್ಮಾ ತಾಳಿಕೋಟೆ ಕೂಡ ಸರ್ಕಾರಿ ನೌಕರಿಯಲ್ಲಿದ್ದಾರೆ. ಕೆಎಎಸ್ ಮುಗಿಸಿರುವ (KAS officer) ಅವರು ಇದೀಗ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂ ವಿಷೇಶ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಬ್ಬರು ಮಕ್ಕಳು ಕೂಡ ಈ ದಂಪತಿಗಿದ್ದು ಇಬ್ಬರು ಬಹಳ ಅನ್ಯೋನ್ಯವಾಗಿದ್ದರು. ಎರಡು ದಿನಗಳ ಹಿಂದೆ ಕರ್ತವ್ಯದ ನಿಮಿತ್ತ ರೇಷ್ಮಾ ತಾಳಿಕೋಟೆ ಬೆಂಗಳೂರಿಗೆ ಹೋಗಿದ್ದರು. ಇತ್ತ ಮನೆಯಲ್ಲಿ ಯಾರೂ ಇಲ್ಲದ್ದನ್ನ ನೋಡಿ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪತಿ ಜಾಫರ್. ಇನ್ನು ಕುಟುಂಬಸ್ಥರು ಸಂಜೆ ವೇಳೆಗೆ ಕೊಠಡಿ ಬಾಗಿಲು ಬಡಿದಿದ್ದಾರೆ.

ಈ ವೇಳೆ ಬಾಗಿಲು ತೆಗೆಯದಿದ್ದಾಗ ಅಕ್ಕಪಕ್ಕದ ಜನರು ಬಂದು ನೋಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಎಪಿಎಂಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ವೇಳೆ ಬಂದು ಬಾಗಿಲು ತೆರೆದು ನೋಡಿದಾಗ ಜಾಫರ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಶವವನ್ನ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನೆ ಮಾಡಿದ್ದಾರೆ.

ಇನ್ನು ಪತ್ನಿ ರೇಷ್ಮಾ ತಾಳಿಕೋಟೆಗೆ ಗಂಡ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಸಲಾಗಿ, ಅವರು ಬೆಂಗಳೂರಿನಿಂದ ವಾಪಸ್​ ಬೆಳಗಾವಿಗೆ ಹೊರಟಿದ್ದಾರೆ. ಅವರು ಬಂದ ಬಳಿಕ ಕೇಸ್ ದಾಖಲಿಸಿಕೊಂಡು ಎಪಿಎಂಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರು ಸಹ ಆಗಮಿಸಿದ್ದಾರೆ.

ಸದ್ಯ ಪತಿ-ಪತ್ನಿ ಚೆನ್ನಾಗಿಯೇ ಇದ್ದರೂ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪ ಆಗಿದ್ದು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರಾ ಅಥವಾ ಬೇರೆ ಯಾವುದಾದ್ರೂ ಕಾರಣಕ್ಕೆ ಜಾಫರ್ ಆತ್ಮಹತ್ಯೆಯತ್ತ ಮುಖ ಮಾಡಿದ್ರಾ? ಅನ್ನೋ ನಿಟ್ಟಿನಲ್ಲಿ ಪೊಲೀಸರಿಂದ ಕುಟುಂಬಸ್ಥರ ವಿಚಾರಣೆ ಬಳಿಕ ಆತ್ಮಹತ್ಯೆಗೆ ಕಾರಣ ಎನು ಅನ್ನೋದು ಗೊತ್ತಾಗಲಿದೆ.

ಸರ್ಕಾರಿ ನೌಕರಿ, ಕಟ್ಟುಮಸ್ತಾದ ಆರೋಗ್ಯ ಇದ್ದರೂ ಜಾಫರ್ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಸ್ಥರಿಗೂ, ಸ್ನೇಹಿತರಿಗೂ ಶಾಕ್ ಆಗಿದೆ. ಅದ್ಯಾವ ಕಾರಣಕ್ಕೆ ಜಾಫರ್ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ. ಅದೇನೆ ಇದ್ದರೂ ಕುಳಿತು ಬಗೆ ಹರಿಸಿಕೊಳ್ಳಬಹುದಿತ್ತು. ಈ ರೀತಿ ದುಡುಕಿನ ನಿರ್ಧಾರದಿಂದ ಚಿಕ್ಕ ವಯಸ್ಸಿನ ಮಕ್ಕಳು ತಂದೆಯನ್ನ ಕಳೆದುಕೊಂಡು ಅನಾಥವಾಗಿದ್ದಾರೆ.

ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ