ಗೋಕಾಕ್: 6 ಬಾರಿ ಶಾಸಕ ರಮೇಶ್ ಜಾರಕಿಹೊಳಿಗೆ ಟಕ್ಕರ್​ ಕೊಡಲು ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸ್ಪರ್ಧಿಸುವಂತೆ ಪಂಚಮಸಾಲಿ ಮುಖಂಡರು ದುಂಬಾಲು

ಗೋಕಾಕ್ ವಿಧಾನಸಭಾ ಕಣ ಇದೀಗ ರಂಗೇರುತ್ತಿದ್ದು ಕಾಂಗ್ರೆಸ್‌ದಿಂದ ಪಂಚಮಸಾಲಿ ಸಮುದಾಯದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಣಕ್ಕಿಳಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾಯಿ ಹೋರಾಟದಲ್ಲಿ ರಾಜಕೀಯ ಚರ್ಚೆಯಾಗಿದೆ.

ಗೋಕಾಕ್: 6 ಬಾರಿ ಶಾಸಕ ರಮೇಶ್ ಜಾರಕಿಹೊಳಿಗೆ ಟಕ್ಕರ್​ ಕೊಡಲು ಲಕ್ಷ್ಮೀ ಹೆಬ್ಬಾಳ್ಕರ್​ಗೆ ಸ್ಪರ್ಧಿಸುವಂತೆ ಪಂಚಮಸಾಲಿ ಮುಖಂಡರು ದುಂಬಾಲು
ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್
Follow us
TV9 Web
| Updated By: ಆಯೇಷಾ ಬಾನು

Updated on: Feb 15, 2023 | 12:05 PM

ಬೆಳಗಾವಿ: ರಾಜ್ಯ ರಾಜಕಾರಣದ ಕೇಂದ್ರ ಬಿಂದು, ಬಿಜೆಪಿ ಭದ್ರಕೋಟೆ,‌ ಜಾರಕಿಹೊಳಿ ಅವರ ಸಾಮ್ರಾಜ್ಯದಂತಿರುವ ಗೋಕಾಕ್ ವಿಧಾನಸಭಾ ಕ್ಷೇತ್ರ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಬಾರಿ ತಮ್ಮ ಕೊನೆಯ ಚುನಾವಣೆ ಹೀಗಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿಕೊಳ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ನಿಂದ ಅಶೋಕ ಪೂಜಾರಿ ಸ್ಪರ್ಧೆ ಮಾಡುವುದು ಪಕ್ಕಾ ಅಂತಿದ್ದು ಈ ನಿಟ್ಟಿನಲ್ಲಿ ಪೂಜಾರಿ ವರ್ಕೌಟ್ ಕೂಡ ಮಾಡ್ತಿದ್ದಾರೆ. ಹೀಗಿರುವಾಗಲೇ ಗೋಕಾಕ್ ನಲ್ಲಿ ಇದೀಗ ಅದೊಂದು ಕೂಗು ಜೋರಾಗಿದ್ದು ಅದುವೇ ಪಂಚಮಸಾಲಿ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಅನ್ನೋ ಕೂಗು. ಹೌದು ಗೋಕಾಕ್ ನಲ್ಲಿ ಪಂಚಮಸಾಲಿ ಮತದಾರರು ಹೆಚ್ಚಿದ್ದು ಹೀಗಾಗಿ ಸಮಾಜದ ಮುಖಂಡರನ್ನೇ ಕಣಕ್ಕಿಳಿಸಬೇಕು ಜಾರಕಿಹೊಳಿ ಬ್ರದರ್ಸ್‌ಗೆ ತಿರುಗೇಟು ಕೊಡಬೇಕು ಅನ್ನೋ ಲೆಕ್ಕಾಚಾರ ಜೋರಾಗಿದೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್‌ದಿಂದ ಸ್ಪರ್ಧಿಸುವಂತೆ ಪಟ್ಟು

ಗೋಕಾಕ್ ವಿಧಾನಸಭಾ ಕಣ ಇದೀಗ ರಂಗೇರುತ್ತಿದ್ದು ಕಾಂಗ್ರೆಸ್‌ದಿಂದ ಪಂಚಮಸಾಲಿ ಸಮುದಾಯದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಣಕ್ಕಿಳಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾಯಿ ಹೋರಾಟದಲ್ಲಿ ರಾಜಕೀಯ ಚರ್ಚೆಯಾಗಿದೆ. ಕೂಡಲ ಸಂಗಮ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳನ್ನು ಭೇಟಿಯಾದ ಬೆಳಗಾವಿ ಜಿಲ್ಲೆಯ ಗೋಕಾಕ್, ಅರಬಾವಿ ಕ್ಷೇತ್ರದ ಎಲ್ಲಾ ಮುಖಂಡರು ಅದೊಂದು ಮನವಿಯನ್ನ ಮಾಡಿಕೊಂಡಿದ್ದಾರೆ. ಗೋಕಾಕ್ ನಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗೋಕಾಕ್ ಜೆಡಿಎಸ್ ಮುಖಂಡ ಚಂದ್ರನ್ನ ಗಿಡ್ಡಣ್ಣವರ್ ಭಾಷಣ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದು ಗೋಕಾಕ್ ಕ್ಷೇತ್ರದಲ್ಲಿ ಅನೇಕ ಆಕಾಂಕ್ಷಿಗಳು ಸ್ಪರ್ಧಿಸಲು ಪೈಪೋಟಿ ಇದೆ. ಲಕ್ಷ್ಮೀ ಹೆಬ್ಬಾಳ್ಕರ್ ಅಕ್ಕಳನ್ನು ಗೋಕಾಕ್ ತಂದು ನಿಲ್ಲಿಸೊಣ. ನಿಮ್ಮ ಪಾದಕ್ಕೆ ಈ ಮನವಿಯನ್ನು ಅರ್ಪಣೆ ಮಾಡುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದ್ರೆ ಎಲ್ಲರೂ ಸೇರಿ ಚುನಾವಣೆ ಮಾಡುತ್ತೇವೆ. ಈ ಪ್ರಸ್ತಾವನೆಯನ್ನು ನೀವೆ ನಿರ್ಧರಿಸಬೇಕು.

ಇದನ್ನೂ ಓದಿ: ಅಶೋಕ ಪುನಃ ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ: ಕೆಸಿ ನಾರಾಯಣಗೌಡ, ಸಚಿವರು

ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹೆಣ್ಣುಮಗಳೆ ಸೋಲಿಸಿದ ಉದಾಹಣೆ ಇದೆ. ದುಷ್ಟ ಸಾಮ್ರಾಜ್ಯಕ್ಕೆ ಬೆಳಗಾವಿಯ ಚನ್ನಮ್ಮಳೇ ಸೋಲಿಸಲು ಎನ್ನುವುದು ನಮ್ಮ ಬಯಕೆ. ಗೋಕಾಕ್, ಮೂಡಲಗಿ ಪಂಚಮಸಾಲಿ ಬಂಧುಗಳು ನಾನು ಹೇಳಿದ್ದು ಸರಿ ಇದ್ದರೆ ಈ ಕಾರ್ಯಕ್ಕೆ ಶ್ರೀಗಳು ಅಣಿಯಾಗಬೇಕು ಎಂದು ಮನವಿ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ. ಅನೇಕರು ಪಂಚಮಸಾಲಿ ರಾಜಕೀಯ ಪಕ್ಷಬೇಕು ಎನ್ನುತ್ತಿದ್ದಾರೆ. ಅದು ಆಗುತ್ತೋ ಇಲ್ಲೊ ಗೊತ್ತಿಲ್ಲ ನಮ್ಮ ಹೋರಾಟಕ್ಕೆ ಬೆಂಬಲಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದವರನ್ನು ಸೋಲಿಸುವ ಕಾರ್ಯವು ಆಗಬೇಕು. ನಮ್ಮನ್ನ ಹಗರುವಾಗಿ ಯಾರು ತೆಗೆದುಕೊಳ್ಳಬಾರದು. ಕೆಟ್ಟ ಬುದ್ದಿಗೆ ಪಾಠ ಕಲಿಸಬೇಕು ಎನ್ನುವು ನನ್ನ ವೈಯಕ್ತಿಕ ಅಭಿಪ್ರಾಯ. ಮೂಡಲಗಿ, ಗೋಕಾಕ್ ಭಾಗದವರು ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲಿದೆ. ಪರೋಕ್ಷವಾಗಿ ಜಾರಕಿಹೊಳಿ ಸಹೋದರರನ್ನ ಸೋಲಿಬೇಕೆಂದು ಗಿಡ್ಡನವರ್ ಹೇಳಿದ್ದಾರೆ.

ಗೋಕಾಕ್ ನಲ್ಲಿ ಶುರುವಾಗುತ್ತಾ ಪಂಚಮಸಾಲಿ ವರ್ಸಸ್ ಜಾರಕಿಹೊಳಿ ಬ್ರದರ್ಸ್

ಸದ್ಯ ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದು ಈಗಾಗಲೇ ಜಾತಿವಾರು ಮತದಾರರ ಓಲೈಕೆ ಮಾಡುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂತಾ ಅಶೋಕ ಪೂಜಾರಿ ಕೂಡ ಗ್ರಾಮೀಣ ಭಾಗದಲ್ಲಿ ತಮಗೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಗೋಕಾಕ್ ನಲ್ಲಿ ಪಂಚಮಸಾಲಿ ಸಮಾವೇಶ ಮಾಡಿದ್ದ ಮುಖಂಡರು ಅಂದು ಪಂಚಮಸಾಲಿ ಸಮಾಜದವರೆಲ್ಲರೂ ಒಂದಾಗಿ ಪಾಠ ಕಲಿಸಬೇಕು ಅಂತಾ ಕರೆಕೊಟ್ಟಿದ್ದರು. ಈ ಮೂಲಕ ಜಾರಕಿಹೊಳಿ ಸಹೋದರರ ವಿರುದ್ಧ ಧ್ವನಿ ಎತ್ತಿ ನಮ್ಮ ಸಮಾಜದ ಶಕ್ತಿ ತೋರಿಸಬೇಕು ಅಂತಾ ಹೇಳಿದ್ದರು. ಇದಾದ ಬಳಿಕ ಅಲರ್ಟ್ ಆದ ಜಾರಕಿಹೊಳಿ ಸಹೋದರರು ಹಿಂದುಳಿದ ವರ್ಗ ಸಮಾವೇಶ, ಕ್ಷತ್ರಿಯ ಮರಾಠ ಸಮಾವೇಶ ಮಾಡುವ ಮೂಲಕ ಪಂಚಮಸಾಲಿ ಹೊರತುಪಡಿಸಿ ಉಳಿದ ಜಾತಿಯವರನ್ನ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸದ್ಯ ಗೋಕಾಕ್ ನಲ್ಲಿ ಪಂಚಮಸಾಲಿ ವರ್ಸಸ್ ಜಾರಕಿಹೊಳಿ ಬ್ರದರ್ಸ್ ಅನ್ನುವಂತಾಗಿದ್ದು ಇದು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಎಪೇಕ್ಟ್ ಆಗುತ್ತೆ. ಜಾತಿ ಮೇಲೆ ಚುನಾವಣೆ ಆಗುತ್ತಾ ಅಥವಾ ಮತ್ತೆ ಜಾರಕಿಹೊಳಿ ಕುಟುಂಬಕ್ಕೆ ಗೋಕಾಕ್ ಜನ ಮಣೆ ಹಾಕ್ತಾರಾ ಎಂಬುದನ್ನ ಕಾದುನೋಡಬೇಕಿದೆ.

ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್