ಬೆಂಗಳೂರಿನ ಮಂತ್ರಿಮಾಲ್‌ ಹಿಂಭಾಗದ ಮನೆ ಬೆಂಕಿ ಅವಘಡ, ಓರ್ವ ಮಹಿಳೆ ಸಜೀವದಹನ

| Updated By: ರಮೇಶ್ ಬಿ. ಜವಳಗೇರಾ

Updated on: Feb 07, 2023 | 5:37 PM

ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಓರ್ವ ಮಹಿಳೆ ಸಜೀವದಹನವಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.

ಬೆಂಗಳೂರಿನ ಮಂತ್ರಿಮಾಲ್‌ ಹಿಂಭಾಗದ ಮನೆ ಬೆಂಕಿ ಅವಘಡ, ಓರ್ವ ಮಹಿಳೆ ಸಜೀವದಹನ
Follow us on

ಬೆಂಗಳೂರು: ನಗರದ ಮಲ್ಲೇಶ್ವರಂನ (Malleshwaram) ಮನೆಯೊಂದರಲ್ಲಿ ಬೆಂಕಿ(Fire) ಅವಘಡ ಸಂಭವಿಸಿದ್ದು, ಇದರಲ್ಲಿ ಓರ್ವ ಮಹಿಳೆ ಮಹಿಳೆ ಸಜೀವದಹನವಾದ್ದಾಳೆ. 55ವರ್ಷದ ಮೇರಿ ಮೃತ ದುರ್ವೈವಿ. ಇಂದು(ಫೆಬ್ರವರಿ 07) ಸಂಜೆ ಬೆಂಗಳೂರಿನ(Bengaluru) ಮಂತ್ರಿಮಾಲ್‌ನ ಹಿಂಭಾಗದಲ್ಲಿ ಇರುವ ಮನೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಈ ದುರ್ಘಟನೆಲ್ಲಿ ಮಹಿಳೆ ಸಜೀವದಹನವಾಗಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಆದ್ರೆ, ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆ ಬಳಿಕ ಬೆಂಕಿ ಅವಘಡಕ್ಕೆ ಕಾರಣ ತಿಳಿದುಬರಲಿದೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ‌ ಘಟಕದಲ್ಲಿ ಅಗ್ನಿ ಅವಘಡ

ಬೆಂಗಳೂರು: ಅತ್ತ ಮಲ್ಲೇಶ್ವರಂನಲ್ಲಿ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದರೆ, ಇತ್ತ ನಾಗರಬಾವಿಯಲ್ಲಿರುವ ಕುಡಿಯುವ ನೀರಿನ‌ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಾಗರಬಾವಿಯಲ್ಲಿರುವ ಕುಡಿಯುವ ನೀರಿನ‌ ಘಟಕದ ಮೀಟರ್ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಇಡೀ ಘಟಕವನ್ನ ಆವರಿಸಬೇಕಿದ್ದ ಬೆಂಕಿ ತಹಬದಿಗೆ ಬಂದಿದೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Published On - 5:30 pm, Tue, 7 February 23