ಉತ್ತರ ಕನ್ನಡ: ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ
ಜಿಲ್ಲೆಯ ಹೊನ್ನಾವರ ತಾಲೂಕಿನ ಇಕೋ ಬೀಚ್ ಬಳಿ ಪೊಲೀಸ್ ಕಾನ್ಸ್ಟೇಬಲ್ ರಾಮ ನಾಗೇಶ್(32) ಎಂಬಾತ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉತ್ತರ ಕನ್ನಡ: ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಕೋಡ ಸಮೀಪದ ಇಕೋ ಬೀಚ್ ಬಳಿ ನಡೆದಿದೆ. ಕುಮಟಾ ತಾಲೂಕಿನ ನಾಡುಮಾಸ್ಕೇರಿ ಮೂಲದ ಕಾನ್ಸ್ಟೇಬಲ್ ರಾಮ ನಾಗೇಶ್(32) ಎಂಬಾತ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಇನ್ನು ಇತ ಜೂಜು, ಆನ್‌ಲೈನ್ ಆಟದಿಂದ ಸಾಲ ಮಾಡಿಕೊಂಡಿದ್ದನಂತೆ. ಜೊತೆಗೆ 5-6 ತಿಂಗಳಿನಿಂದ ಕರ್ತವ್ಯಕ್ಕೆ ಗೈರಾಗಿದ್ದ ಕಾನ್ಸ್ಟೇಬಲ್ ರಾಮ ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಲಿಯಿಂದ ಕೊಚ್ಚಿ ಪತ್ನಿಯ ಬರ್ಬರ ಹತ್ಯೆ
ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಪತಿ ಮನ್ನೇಶ್ ಎಂಬಾತ ಪತ್ನಿ ವಿದ್ಯಾಶ್ರೀ ಆಡಿನ್(29)ನನ್ನು ಕೊಲೆ ಮಾಡಿದ್ದಾನೆ. 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವಿದ್ಯಾಶ್ರೀ ಮನ್ನೇಶ್, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಪದೆ ಪದೆ ಜಗಳ ಮಾಡ್ತಿದ್ದರಂತೆ. ಆದರೆ ಇಂದು ಜಗಳ ವಿಕೋಪಕ್ಕೆ ಹೋಗಿ ಪತಿ ಮನ್ನೇಶ್ ಪತ್ನಿಯನ್ನ ಕೊಚ್ಚಿ ಕೊಲೆ ಮಾಡಿದ್ದಾನೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.
ಮುಂಬೈನ ಪೆಡ್ಲರ್ ಮೂಲಕ ಪಿಸ್ತೂಲ್ ಪಡೆಯುತಿದ್ದವನನ್ನ ಬಂಧಿಸಿದ ಪೊಲೀಸರು
ಬೆಂಗಳೂರು: ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ ರೋಷನ್ ಎಂಬಾತ ಮುಂಬೈನ ಪೆಡ್ಲರ್ ಮೂಲಕ ಪಿಸ್ತೂಲ್ ಪಡೆಯುತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪಿಸ್ತೂಲ್ಗಳನ್ನು ತಂದು ಮಾರಾಟ ಮಾಡಲು ಮುಂದಾಗಿದ್ದ ಮಹಾರಾಷ್ಟ್ರದ ನಾಗಪುರ ಮೂಲದ ಬಂಧಿತ ಆರೋಪಿ ರೋಷನ್. ಕಳೆದ ಮೂರು ವರ್ಷದ ಹಿಂದೆ ಪ್ರಮುಖ ಪೆಡ್ಲರ್ ಜೊತೆ ಲಿಂಕ್ ಇಟ್ಟುಕೊಂಡಿದ್ದ. ಜೊತೆಗೆ ಮಹಾರಾಷ್ಟರದಲ್ಲಿ ಕೂಡ ಇತ ಕೊಲೆಯತ್ನ ಹಾಗೂ ಕಳ್ಳತನ ಪ್ರಕರಣಗಳನ್ನ ಹೊಂದಿದ್ದಾನೆ. ಸಿಸಿಬಿ ಪೊಲೀಸರಿಂದ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಸದ್ಯ ಈತನಿಗೆ ಪಿಸ್ತೂಲ್ ನೀಡಿದಾತನ ಬಗ್ಗೆ ಮಾಹಿತಿ ನೀಡಿರುವ ಆರೋಪಿ, ಆದರೆ ಬೆಂಗಳೂರಿನಲ್ಲಿ ಯಾರಿಗೆ ಮಾರಲು ಬಂದಿದ್ದ ಎಂಬ ಬಗ್ಗೆ ಇನ್ನು ಉತ್ತರ ನೀಡಿಲ್ಲ.
ಇದನ್ನೂ ಓದಿ:3 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಸೆಲ್ಪೀ ವಿಡಿಯೋ ವೈರಲ್
ಗಾಂಜಾ ಬೆಳೆದ ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ ಪ್ರಕಟ
ಗದಗ: ಗಾಂಜಾ ಬೆಳೆದ ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ ಜೊತೆಗೆ 2 ಲಕ್ಷ ರೂಪಾಯಿಯನ್ನ ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ವಿಧಿಸಿದೆ. ಬೆಳಗಟ್ಟಿ ಗ್ರಾಮದ ಉಡಚಪ್ಪ ಪುರದ ಎಂಬಾತ 1 ಎಕರೆ 10 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ. 2013 ನವೆಂಬರ್ 09 ರಂದು ಶಿರಹಟ್ಟಿ ಪೊಲೀಸರು ದಾಳಿ ಮಾಡಿ, ಒಂದು ಲಕ್ಷ ರೂಪಾಯಿ ಮೌಲ್ಯದ 101 ಕೆಜಿ ತೂಕದ ಗಾಂಜಾವನ್ನ ವಶಕ್ಕೆ ಪಡೆದಿದ್ದರು. 2014 ಏಪ್ರಿಲ್ 30 ರಂದು ಪಿಎಸ್ಐ ಎಸ್.ಆರ್ ಕಟ್ಟಿಮನಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ರು, ಇದೀಗ ಆತನಿಗೆ ಶಿಕ್ಷೆಯಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ