ರಾಮನಗರ: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಜನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ ತಾಲೂಕಿನ ದೊಡ್ಡ ಮಣ್ಣಗುಡ್ಡೆ ಗ್ರಾಮದಲ್ಲಿ ನಡೆದಿದೆ. ಮಂಗಳಮ್ಮ (28) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಲಭಾದೆ ತಾಳಲಾರದೆ ನಿನ್ನೆ (ಫೆ.2) ಮಧ್ಯಾಹ್ನ ಜಮೀನಿನಲ್ಲಿ ಇಲಿ ಪಾಷಾಣ ಸೇವಿಸಿದ್ದಾರೆ. ವಿಷಯ ತಿಳಿದ ಸ್ಥಳಿಯರು ಸಂಜೆ ವೇಳೆ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾಮನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಡ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮಂಗಳಮ್ಮ (28), ಮಂಗಳಮ್ಮನ ಪತಿ ರಾಜು(31), ಮಂಗಳಮ್ಮನ ತಾಯಿ ಸೊಮ್ಮಪುರದಮ್ಮ(48), ಮಕ್ಕಳಾದ ಆಕಾಶ್(9), ಕೃಷ್ಣ(13), ಮಂಗಳಮ್ಮ ತಂಗಿ ಸವಿತಾ(24) ಮತ್ತು ಸವಿತಾ ಮಗಳು ದರ್ಶಿನಿ (4) ವಿಷಸೇವಿಸಿದ್ದಾರೆ. ಮಂಗಳಮ್ಮನ ಪತಿ ರಾಜು ಸುಮಾರು 10 ಲಕ್ಷ ಸಾಲ ಮಾಡಿದ್ದನು.
ರಾಜು ಮೂಲತಃ ಬೆಂಗಳೂರು ದಕ್ಷಿಣ ತಾಲೂಕಿನ ಸುಬ್ಬರಾಯನಪಾಳ್ಯ ಗ್ರಾಮದವನು. ಸಾಲಗಾರರ ಕಾಟದಿಂದಾಗಿ ಪತ್ನಿ ಊರು ದೊಡ್ಡಮಣ್ಣುಗುಡ್ಡೆ ಗ್ರಾಮಕ್ಕೆ ಬಂದು ನೆಲೆಸಿದ್ದನು. ಇಲ್ಲಿಯೂ ಸಾಲಗಾರರ ಕಾಟ ಮುಂದುವರಿದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೊಪ್ಪಳ: ಆಸ್ತಿಗಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಪಾಟಲಚಿಂತಿ ಗ್ರಾಮದಲ್ಲಿ ನಡೆದಿದೆ. ಯಮನೂರಪ್ಪ (39) ಕೊಲೆಯಾದ ವ್ಯಕ್ತಿ. ಯಮನೂರಪ್ಪನ ತಮ್ಮ ಮಲ್ಲಪ್ಪನಿಂದ ಕೃತ್ಯ ನಡೆದಿದೆ. ಆಸ್ತಿ ಹಂಚಿಕೆ ವಿಚಾರವಾಗಿ ನಿನ್ನೆ ರಾತ್ರಿ (ಫೆ.2) ರಂದು ಮನೆಯ ಸ್ನಾನದ ಕೋಣೆಯಲ್ಲಿ ಚಾಕು, ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಪೊಲೀಸರು ಬರುವವರೆಗೂ ಕೊಲೆಯಾದ ಸ್ಥಳದಲ್ಲಿ ಕುಳಿತಿದ್ದನು. ಸ್ಥಳಕ್ಕೆ ಹನುಮಸಾಗರ ಪೊಲೀಸರ ಭೇಟಿ ನೀಡಿ, ಆರೋಪಿಯನ್ನು ಬಂಧಸಿದ್ದಾರೆ.
ಬೆಂಗಳೂರು: ದ್ವಾರಬಾಗಿಲಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ನೈತಿಕ್ಗೆ ಗಾಯಗೊಂಡಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಅಪಘಾತಕ್ಕೆ ಅತಿ ವೇಗವೇ ಕಾರಣ ಎನ್ನಲಾಗುತ್ತಿದೆ. ಗಾಯಾಳುವನ್ನು ಹತ್ತಿರದ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ. ಮಣಿಕಂಠ (14), ಹರ್ಷವರ್ಧನ (9) ಸಾವನ್ನಪ್ಪಿದ ಬಾಲಕರು. ಅಂಬಾದೇವಿ ಜಾತ್ರೆಗೆ ಬಂದಿದ್ದ ಚೌಡಿಕಿ ಕುಟುಂಬದ ಮೂವರು ಮಕ್ಕಳು ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ ಇಬ್ಬರು ಮಣಿಕಂಠ ಮತ್ತು ಹರ್ಷವರ್ಧನ ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದರೆ ಮತ್ತೋರ್ವ ಬಾಲ ಅಪಾಯದಿಂದ ಪಾರಾಗಿದ್ದಾನೆ. ಸಾವನ್ನಪ್ಪಿದವರಲ್ಲಿ ಓರ್ವ ಬಾಲಕ ಹಿರಿಯನಾಗಿದ್ದು, ಮತ್ತೋರ್ವ ಕಿರಿಯವನಾಗಿದ್ದಾನೆ. ಪ್ರಾಣಾಪಾಯದಿಂದ ಪಾರಾದ ಬಾಲಕ ಮಧ್ಯದವನಾಗಿದ್ದಾನೆ.
ಮತ್ತಷ್ಟು ಅಪಾರಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ