ಪೋಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಬೆಂಗಳೂರಿನ ಬಾಲಕಿ ಗೋವಾದಲ್ಲಿ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 19, 2022 | 11:02 PM

ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಪೋಷಕರು ಬೈಯ್ಯುತ್ತಾರೆ ಎಂದು ಹೆದರಿ ಮನೆ ಬಿಟ್ಟು ಹೋಗಿದ್ದ ಬಾಲಕಿ ಗೋವಾದಲ್ಲಿ ಪತ್ತೆಯಾಗಿರುವಂತಹ ಘಟನೆ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೋಷಕರು ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಬೆಂಗಳೂರಿನ ಬಾಲಕಿ ಗೋವಾದಲ್ಲಿ ಪತ್ತೆ
ಸಿಸಿಟಿವಿ ದೃಶ್ಯ
Follow us on

ಬೆಂಗಳೂರು: ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಪೋಷಕರು ಬೈಯ್ಯುತ್ತಾರೆ ಎಂದು ಹೆದರಿ ಮನೆ ಬಿಟ್ಟು ಹೋಗಿದ್ದ ಬಾಲಕಿ (girl) ಗೋವಾ (Goa) ದಲ್ಲಿ ಪತ್ತೆಯಾಗಿದ್ದಾಳೆ. 9ನೇ ತರಗತಿ ವಿದ್ಯಾರ್ಥಿನಿ ಭಾರ್ಗವಿ ಮನೆ ಬಿಟ್ಟುಹೋದ ಬಾಲಕಿ. ಸದ್ಯ ಬಾಲಕಿ ಕರೆತರಲು ಬೆಂಗಳೂರಿನಿಂದ ಪೋಷಕರು ತೆರಳಿದ್ದಾರೆ. ಭಾರ್ಗವಿ ಪತ್ತೆಗಾಗಿ ರಾಜ್ಯದಾದ್ಯಂತ ಪೊಲೀಸ್‌ ಠಾಣೆಗಳು ಹಾಗೂ ಹೊರ ರಾಜ್ಯದ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿತ್ತು. ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಜನರು ಬಾಲಕಿಯ ಪತ್ತೆಗೆ ನೆರವಾಗಲು ಕೋರಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಬುಧವಾರ ಭಾರ್ಗವಿ ಗೋವಾದಲ್ಲಿರುವುದು ಖಚಿತವಾಗಿದೆ. ಈ ಕುರಿತಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಘಟನೆ ಹಿನ್ನೆಲೆ:

ಕೆಲ ದಿನಗಳ ಹಿಂದೆ ಮೆಜೆಸ್ಟಿಕ್​ನಿಂದ ಬಾಲಕಿ ಮಂಗಳೂರು ಬಸ್ ಹತ್ತಿ ಹೋಗಿರುವುದು ಬೆಳಕಿಗೆ ಬಂದಿತ್ತು. ಘಟನೆ ಕುರಿತಾಗಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಬಾಲಕಿ ಪತ್ತೆಗೆ ಮಂಗಳೂರಿನಲ್ಲಿ ಪೊಲೀಸರಿಂದ ನಾಲ್ಕು ತಂಡ ರಚಿಸಿ ತಲಾಶ್ ನಡೆಸಲಾಗಿತ್ತು. ಬಾಲಕಿ ಗೋವಾದಲ್ಲಿ ಪತ್ತೆಯಾಗುವುದಕ್ಕೂ ಮುಂಚೆ ಮಂಗಳೂರಿನ ಹಲವೆಡೆ ತಿರುಗಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಸೋಮವಾರ ಬೆಳಗ್ಗಿನ ಜಾವ 3 ಗಂಟೆಗೆ ಮಂಗಳೂರು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಾಲಕಿ ಬಂದಿಳಿದಿದ್ದಾಳೆ. ಅಲ್ಲಿಂದ ರಿಕ್ಷಾವೊಂದರಲ್ಲಿ ಮುಕ್ಕ ಬೀಚ್​ಗೆ ತೆರಳಿದ್ದು, ಅಲ್ಲಿಂದ ಮತ್ತೆ ಅದೇ ರಿಕ್ಷಾದಲ್ಲಿ ಕದ್ರಿ ಪಾರ್ಕ್​ಗೆ ಹೋಗಿರುವುದು ಪೊಲೀಸರ ತನಿಖೆಯಿಂದ ಬಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:35 pm, Wed, 19 October 22