ಆಭರಣ ಪ್ರಿಯರಿಗೆ ಶಾಕ್; ಒಂದು ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ 1 ಲಕ್ಷ
ಆಭರಣ ಪ್ರಿಯರು ಇನ್ಮುಂದೆ ಬೆಳ್ಳಿ ಹಾಗೂ ಚಿನ್ನ ಖರೀದಿ ಮಾಡ್ಬೇಕು ಅಂದ್ರೆ ಒಮ್ಮೆ ಯೋಚನೆ ಮಾಡ್ಬೇಕಾದ ಅನಿವಾರ್ಯಾತೆ ಎದುರಾಗಿದೆ. ಯಾಕಂದ್ರೆ ಬೆಳ್ಳಿ ಬೆಲೆ ದಾಖಾಲೆ ಬರೆಯುತ್ತಿದ್ದು, ಗ್ರಾಹಕರು ಶಾಕ್ ಆಗ್ತಿದ್ದಾರೆ. ಒಂದು ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ 1 ಲಕ್ಷ ಆಗಿದೆ.
ಬೆಂಗಳೂರು, ಜೂನ್.01: ಆಭರಣ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಇಷ್ಟು ದಿನಗಳ ಕಾಲ ಚಿನ್ನದ (Gold) ಬೆಲೆ ಶತಕ ಬಾರಿಸುತ್ತಿತ್ತು. ಇದೀಗಾ ಬೆಳ್ಳಿಯ (Silver) ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರು ಬೆಲೆ ಕೇಳಿಯೇ ಶಾಕ್ ಆಗುತ್ತಿದ್ದಾರೆ. 80 ಸಾವಿರದ ಆಸು ಪಾಸಿನಲ್ಲಿದ್ದ ಬೆಳ್ಳಿಯ ಬೆಲೆ ಆರು ತಿಂಗಳ ಅಂತರದಲ್ಲಿ ಬರೋಬ್ಬರಿ 1ಲಕ್ಷದ ಗಡಿ ಮುಟ್ಟಿದೆ.
ಈ ವರ್ಷ ಬೆಳ್ಳಿಯ ಬೆಲೆ ಸಾರ್ವಕಾಲಿಕ ದಾಖಲೆ ಬರೆಯುತ್ತಿದ್ದು, ಒಂದು ಕೆಜಿ ಬೆಳ್ಳಿಗೆ ಒಂದು ಲಕ್ಷ ರೂಪಾಯಿ ಆಗಿದೆ. ಕಳೆದ ತಿಂಗಳ ಹಿಂದಷ್ಟೇ kg ಗೆ 83000 ಆಸುಪಾಸಿನಲ್ಲಿ ಇದ್ದ ಬೆಳ್ಳಿ ಬೆಲೆ ಕಳೆದ ಮೂರ್ನಾಲ್ಕು ದಿನಗಳಲ್ಲಿ 6 ರಿಂದ 7 ಸಾವಿರ ರೂಪಾಯಿ ಏರಿಕೆಯಾಗಿದೆ. ಅಂದಹಾಗೇ ಕಳೆದ ಒಂದೇ ತಿಂಗಳಲ್ಲಿ 17 ಸಾವಿರ ರೂಪಾಯಿ ಏರಿಕೆಯಾಗಿದ್ದು, ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ kg ಗೆ 50 ಸಾವಿರ ರೂಪಾಯಿ ಏರಿಕೆಯಾಗಿದೆ. ಸಧ್ಯ ಬೆಲೆ ಕುರಿತಾಗಿ ಮಧ್ಯಾಪ್ರಾಚ್ಯದಲ್ಲಿ ಇತ್ಯಾರ್ಥ ಆಗದೆ ಇರುವುದು ಹಾಗೂ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಳ್ಳಿಯ ಅಲಭ್ಯತೆ ಇರುವುದರಿಂದ ಕೈಗಾರಿಕೆ ವಲಯದಲ್ಲಿ ಬೆಳ್ಳಿಗೆ ಬಾರಿ ಬೇಡಿಕೆ ಇದೆ. ಹೀಗಾಗಿ ಬೆಳ್ಳಿಯ ಬೆಲೆ ಸಾರ್ವಕಾಲಿಕ ದಾಖಲೆ ಕಂಡಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಅಂತ ಚಿನ್ನ ಬೆಳ್ಳಿ ಅಂಗಡಿಗಳ ಮಾಲೀಕರು ಹೇಳ್ತಿದ್ದಾರೆ.
ಇದನ್ನೂ ಓದಿ: ಜೂನ್ 12 ರವರೆಗೆ HSRP ಅಳವಡಿಸಲು ಅವಕಾಶ ನೀಡಿದ ಹೈಕೋರ್ಟ್
ಇನ್ನು, ಇಷ್ಟು ದಿನಗಳ ಕಾಲ ಚಿನ್ನ ಖರೀದಿ ಮಾಡುವುದಕ್ಕೆ ಸಾಧ್ಯವಾಗದೇ ಇರುವವರು ಬೆಳ್ಳಿ ಖರೀದಿ ಮಾಡಿ ಬೆಳ್ಳಿ ಆ್ಯಂಟಿಕ್ ಒಡವೆಗಳನ್ನ ಹಾಕುತ್ತಿದ್ವಿ. ಆದ್ರೀಗಾ ಬೆಳ್ಳಿಯ ಬೆಲೆ ಏರಿಕೆಯಾಗುತ್ತಿದ್ದು, ಮುಂದೆ ಬೆಳ್ಳಿ ಖರೀದಿ ಮಾಡುವುದು ಕಡಿಮೆ ಮಾಡ್ಬಾಗುತ್ತೆ. ಚಿನ್ನದ ಬೆಲೆನೂ ಜಾಸ್ತಿಯಾಗುತ್ತಿದೆ. ಇನ್ಮೆಲೆ ಆಭರಣಗಳ ಮೇಲಿನ ಪ್ರೀತಿಯನ್ನ ಕಡಿಮೆಮಾಡಬೇಕಾಗಿದೆ ಅಂತ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಒಟ್ನಲ್ಲಿ, ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯು ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆಭರಣ ಪ್ರಿಯರು ಆಭರಣಗಳನ್ನು ಹೇಗಪ್ಪಾ ಖರೀದಿಸೋದು? ಆ್ಯಂಟಿಕ್ ಒಡವೆಗಳೇ ನಮಗೆ ಗತಿ ಎಂಬ ಚಿಂತೆಗೀಡಾಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ