ಬೆಂಗಳೂರು, ಜನವರಿ 09: ಸಾರ್ವಜನಿಕ ಸ್ಥಳದಲ್ಲೇ ಯುವತಿ (Young Girl) ಎದುರಿಗೆ ಯುವಕನ (Boy) ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 5 ರಂದು ರಾತ್ರಿ 8:40 ರ ಸುಮಾರಿಗೆ ಓರ್ವ ಯುವತಿ ಮಹದೇವಪುರದ (Mahadevpura) ಪಾರ್ಕ್ನ ಸರ್ವಿಸ್ ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡಿ ಕಾರಿನಲ್ಲೇ ಕುಳಿತುಕೊಂಡಿದ್ದಳು. ಈ ವೇಳೆ ಕಾರಿನ ಮುಂಭಾಗದಲ್ಲಿ ನಿಂತಿದ್ದ ಯುವಕ ಯುವತಿಯನ್ನು ನೋಡುತ್ತಲೇ ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ. ಆಗ ಯುವತಿ ಹೆದರಿಕೆಯಿಂದ ಕಾರ್ ಡೋರ್ ಲಾಕ್ ಮಾಡಿಕೊಂಡಿದ್ದಾಳೆ.
ಬಳಿಕ ಯುವತಿ ಕಾರು ಸಮೇತ ಅಲ್ಲಿಂದ ತೆರಳಬೇಕು ಎಂದುಕೊಂಡಳು. ಆದರೆ ಆಕೆಯ ಕಾರ್ ಪಕ್ಕ ಮತ್ತು ಹಿಂದೆ ಮತ್ತೊಂದು ಕಾರ್ ನಿಂತಿದ್ದರಿಂದ ಹೋಗಲು ಸಾಧ್ಯವಾಗಲಿಲ್ಲ. ಕಲೆ ಸಮಯದ ಬಳಿಕ ಯುವಕ ಈಕೆಯ ಕಾರ್ ಬಳಿ ಬಂದಿದ್ದಾನೆ. ನಂತರ ಕಾರನ್ನು ಸುತ್ತು ಹಾಕಿದ್ದಾನೆ. ನಂತರ ಚಾಲಕನ ಪಕ್ಕದ ಕಿಟಕಿ ಬಳಿ ಬಂದು, ಬೆದರಿಕೆಯ ಸನ್ನೆ ಮಾಡಿದ್ದಾನೆ.
ಇದನ್ನೂ ಓದಿ: ಹೊಸವರ್ಷಾಚರಣೆ ನಡುವೆ ಕೆಲವೆಡೆ ಅವಾಂತರ, ಅಸಭ್ಯ ವರ್ತನೆ ತೋರಿದ ಯುವಕನ ಕೆನ್ನೆಗೆ ಬಾರಿಸಿದ ಪೊಲೀಸ್
ಇದರಿಂದ ಭಯಗೊಂಡ ಯುವತಿ ಸ್ಟೇರಿಂಗ್ ಕೆಳಗೆ ಅವಿತುಕೊಂಡ ಕೆಳಗೆ ಅವಿತುಕೊಂಡಿದ್ದಾಳೆ. ಸುಮಾರು 10 ನಿಮಿಷಗಳ ನಂತರ, ಯುವತಿಯ ಸ್ನೇಹಿತರೊಬ್ಬರು ಕಾರಿನ ಬಳಿ ಬಂದರು. ಬಳಿಕ ಯುವತಿ ಕಾರಿನಿಂದ ಕೆಳಗೆ ಇಳಿದು, ಸ್ನೇಹಿತನೊಂದಿಗೆ ಸೇರಿ ಯುವಕನನ್ನು ಹುಡುಕಾಡಿದ್ದಾರೆ. ಆದರೆ ಆತ ಕಾಣೆಯಾಗಿದ್ದ ಎಂದು ನೊಂದ ಯುವತಿ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಹಾಕಿದ್ದಾಳೆ. ಈ ಬಗ್ಗೆ ಮಹದೇವಪುರ ಪೊಲೀಸರು ತನಿಖೆ ನಡೆಸುವಂತೆ ಯುವತಿ ಮನವಿ ಮಾಡಿಕೊಂಡಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ