ನ್ಯೂ ಇಯರ್: ಮಾಸ್ಕ್ ಧರಿಸಿ ಗಲಾಟೆ: ಗರ್ಲ್ ಫ್ರೆಂಡ್ ಜೊತೆ ಅಸಭ್ಯ ವರ್ತನೆ ಆರೋಪ, ಹಲ್ಲೆ
ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆ ಜೋರಾಗಿದ್ದು, ಈ ವೇಳೆ ನಗರದ ಚರ್ಚ್ ಸ್ಟ್ರೀಟ್ (Church Street) ನಲ್ಲಿ ಫೇಸ್ಮಾಸ್ಕ್(Face Mask) ಧರಿಸಿ ಪುಂಡರು ಗಲಾಟೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಫೇಸ್ಮಾಸ್ಕ್ ಧರಿಸಿ ಗಲಾಟೆ ಮಾಡುತ್ತಿದ್ದವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರು, ಡಿ.31: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆ ಜೋರಾಗಿದ್ದು, ಈ ವೇಳೆ ನಗರದ ಚರ್ಚ್ ಸ್ಟ್ರೀಟ್ (Church Street) ನಲ್ಲಿ ಫೇಸ್ಮಾಸ್ಕ್(Face Mask) ಧರಿಸಿ ಪುಂಡರು ಗಲಾಟೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಫೇಸ್ಮಾಸ್ಕ್ ಧರಿಸಿ ಗಲಾಟೆ ಮಾಡುತ್ತಿದ್ದವರಿಗೆ ವಾರ್ನಿಂಗ್ ಕೊಟ್ಟಿದ್ದು, ಅಷ್ಟೇ ಅಲ್ಲದೇ ಫೇಸ್ಮಾಸ್ಕ್ ಮಾರಾಟಗಾರರ ಬಳಿಯಿದ್ದ ಮಾಸ್ಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ
ತನ್ನ ಗರ್ಲ್ ಫ್ರೆಂಡ್ ಜೊತೆ ಅಸಭ್ಯವಾಗಿ ವರ್ತನೆ ಹಿನ್ನೆಲೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ನೂಕು ನುಗ್ಗಲಿನಲ್ಲಿ ಗರ್ಲ್ ಫ್ರೆಂಡ್ ಮೈಮುಟ್ಟಿದ ಆರೋಪದ ಹಿನ್ನಲೆ ಅಪರಿಚಿತ ವ್ಯಕ್ತಿಯ ಮೇಲೆ ಯುವತಿಯ ಪ್ರಿಯತಮ ಹಲ್ಲೆ ಮಾಡಿದ್ದಾನೆ. ತಕ್ಷಣ ಪೊಲೀಸರ ಮಧ್ಯಪ್ರವೇಶದಿಂದ ಗಲಾಟೆ ಹತೋಟಿಗೆ ಬಂದಿದೆ.
ಇದನ್ನೂ ಓದಿ:New Year Celebration: ಕೊಪ್ಪಳದ ರೆಸಾರ್ಟ್ಗಳಲ್ಲಿ ವಿದೇಶಿಗರ ಎದರು ದೇಶಿ ಹಾಡು ಹಾಡಲು ತಯಾರಾದ ಕಲಾವಿದರು
ಬ್ರಿಗೇಡ್ ರಸ್ತೆಯಲ್ಲಿ ಫುಲ್ ತಳ್ಳಾಟ್ ನೂಕಾಟ
ಇನ್ನು ಬ್ರಿಗೇಡ್ ರಸ್ತೆಯಲ್ಲಿ ಫುಲ್ ನೂಕಾಟ ತಳ್ಳಾಟ ಶುರುವಾಗಿದೆ. ಫುಟ್ ಪಾತ್ ಪಕ್ಕದ ರಸ್ತೆಯುದ್ದಕ್ಕೂ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಜನ ಹೆಚ್ಚಾದ ಹಿನ್ನೆಲೆ ಎರಡೂ ಕಡೆ ಜನರ ಸಂಚಾರದ ಹಿನ್ನಲೆ ತಳ್ಳಾಟ ನೂಕಾಟಕ್ಕೆ ಯುವತಿಯರು ಬ್ಯಾರಿಕೇಡ್ ಹಾರಿದ್ದಾರೆ. ಕ್ಷಣ ಕ್ಷಣಕ್ಕೂ ಜನರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ