ಕರುನಾಡಿನ ಉದ್ದಗಲಕ್ಕೂ ನ್ಯೂ ಇಯರ್ ಸಂಭ್ರಮ: ಪ್ರವಾಸಿ ಸ್ಥಳಗಳಲ್ಲಿ ಜನಜಾತ್ರೆ
ಹೊಸ ವರ್ಷದ ಸ್ವಾಗತಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ, ಬೀಚ್, ರೆಸಾರ್ಟ್ ಅಂತಾ ಜನ ಎಂಜಾಯ್ ಮಾಡುತ್ತಿದ್ದಾರೆ. ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಜನಜಾತ್ರೆಯೇ ಕಾಣುತ್ತಿದೆ. ಕಹಿ ಘಟನೆ ಮರೆಯುತ್ತಾ, ಸವಿ ನೆನಪುಗಳನ್ನ ಮೆಲುಕುಹಾಕುತ್ತಾ, 2024ನ್ನ ಬರಮಾಡಿಕೊಳ್ಳಲು ಇಡೀ ಕರುನಾಡು ಸಜ್ಜಾಗಿದೆ. ಅದರಲ್ಲಿಯೂ ಪ್ರವಾಸಿ ತಾಣಗಳು ಬೆಳಗಿನಿಂದ ಜನರಿಂದಲೇ ತುಂಬಿ ಹೋಗಿವೆ.
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷ (New Year 2024) ದ ಸ್ವಾಗತಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ, ಬೀಚ್, ರೆಸಾರ್ಟ್ ಅಂತಾ ಜನ ಎಂಜಾಯ್ ಮಾಡುತ್ತಿದ್ದಾರೆ. ರಾಜ್ಯದ ಪ್ರವಾಸಿ ಸ್ಥಳಗಳಲ್ಲಿ ಜನಜಾತ್ರೆಯೇ ಕಾಣುತ್ತಿದೆ. ಕೆಲವೇ ಗಂಟೆಗಳಲ್ಲಿ ಹೊಸ ವರ್ಷ ಆರಂಭ ಆಗಲಿದೆ. ಕಹಿ ಘಟನೆ ಮರೆಯುತ್ತಾ, ಸವಿ ನೆನಪುಗಳನ್ನ ಮೆಲುಕುಹಾಕುತ್ತಾ, 2024ನ್ನ ಬರಮಾಡಿಕೊಳ್ಳಲು ಇಡೀ ಕರುನಾಡು ಸಜ್ಜಾಗಿದೆ. ಅದರಲ್ಲಿಯೂ ಪ್ರವಾಸಿ ತಾಣಗಳು ಬೆಳಗಿನಿಂದ ಜನರಿಂದಲೇ ತುಂಬಿ ಹೋಗಿವೆ.
ಪ್ರವಾಸಿಗರಿಗೆ ಡಬಲ್ ಧಮಾಕ್!
ಇಂದು ವಿಕೇಂಡ್ ಜೊತೆಗೆ ಮಂಥ ಎಂಡ್ ಅಷ್ಟೇ ಅಲ್ಲದೇ ಇಯರ್ ಎಂಡ್. ಹೀಗಾಗಿ ಜನರ ಖುಷಿ ಇಂದು ಡಬಲ್ ಆಗಿತ್ತು. ಪ್ರವಾಸಿ ತಾಣಗಳಿಗೆ ಹೋಗಿ ಎಂಜಾಯ್ ಮಾಡುತ್ತಿದ್ದರು. ಅದರಲ್ಲೂ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಪ್ರವಾಸಿಗರಿಂದಲೇ ತುಂಬಿ ಹೋಗಿತ್ತು. ಜನಜಾತ್ರೆಯಿಂದಾಗಿ ಕೈಮರ ಚೆಕ್‌ಪೋಸ್ಟ್ ಬಳಿ ಕಿಲೋ ಮೀಟರ್ ಉದ್ದಕ್ಕೂ ಟ್ರಾಫಿಕ್ ಜಾಮ್ ಆಗಿತ್ತು. ಅಷ್ಟೇ ಅಲ್ಲ ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇಗಳು ಕೂಡಾ ಹೌಸ್‌ಫುಲ್ ಆಗಿವೆ.
ಇದನ್ನೂ ಓದಿ: ನ್ಯೂ ಇಯರ್: ಮಾಸ್ಕ್ ಧರಿಸಿ ಗಲಾಟೆ: ಗರ್ಲ್ ಫ್ರೆಂಡ್ ಜೊತೆ ಅಸಭ್ಯ ವರ್ತನೆ ಆರೋಪ, ಹಲ್ಲೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ರವೀಂದ್ರನಾಥ ಠಾಗೋರ್ ಬೀಚ್, ಗೋಕರ್ಣ, ಮುರ್ಡೇಶ್ವರ, ದಾಂಡೇಲಿಯಲ್ಲೂ ಪ್ರವಾಸಿಗರ ದಂಡೇ ಕಂಡಿತ್ತು. ಕೆಲವರು ಬೀಚ್‌ನಲ್ಲಿ ಎಂಜಾಯ್ ಮಾಡುತ್ತಾ ನ್ಯೂ ಇಯರ್ ಸಂಭ್ರಮಕ್ಕೆ ಸಜ್ಜಾದ್ರೆ, ಮತ್ತೆ ಕೆಲವರು ದೇವರ ದರ್ಶನ ಪಡೆದುಕೊಂಡರು. ಇಲ್ಲೂ ಕೂಡಾ ಒಂದು ವಾರದ ವರೆಗೂ ಹೋಂ ಸ್ಟೇ, ರೆಸಾರ್ಟ್‌ಗಳು ಬುಕ್ ಆಗಿವೆ.
ಬೀಚ್‌ಗಳಿಗೂ ಲಗ್ಗೆಯಿಟ್ಟ ಪ್ರವಾಸಿಗರು
ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಎಲ್ಲಿ ನೋಡಿದ್ರೂ ಜನಸಾಗರವೇ ಕಂಡಿತ್ತು. ತಣ್ಣೀರುಬಾವಿ, ಸಸಿಹಿತ್ಲು, ಉಳ್ಳಾಲ, ಸೋಮೇಶ್ವರ ಬೀಚ್‌ಗಳಿಗೂ ಪ್ರವಾಸಿಗರು ಲಗ್ಗೆಯಿಟ್ಟಿದ್ದರು. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ನ ಬೃಂದಾವನದಲ್ಲೂ ಜನಸಾಗರ ಕಂಡಿತ್ತು.
ಇದನ್ನೂ ಓದಿ: ಹೊಸ ವರ್ಷಾಚರಣೆ: ಬೆಂಗಳೂರು ಎಂಜಿ ರಸ್ತೆ ಬಂದ್, ಪಬ್ಗಳ ಮುಂದೆ ಕ್ಯೂನಿಂತ ಜನರು
ಒಂದು ವಾರದಿಂದಲೂ ರೌಂಡ್ಸ್ ಹಾಕುತ್ತಿರುವ ಜನ ಇಂದು ವಿಕೇಂಡ್ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಜನ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಎಂಜಾಯ್ ಮಾಡಿದ್ದಾರೆ.
ವಿಶಿಷ್ಟ ರೀತಿಯ ನ್ಯೂ ಇಯರ್ಗೆ ಸಜ್ಜಾದ ಬೆಳಗಾವಿ ಜನ
ವಿಶಿಷ್ಟ ರೀತಿಯಲ್ಲಿ 2023ಕ್ಕೆ ಗುಡ್ ಬೈ ಹೇಳಲು ಬೆಳಗಾವಿ ಜನ ಸಜ್ಜಾಗಿದ್ದಾರೆ. ಇಲ್ಲಿ ಓಲ್ಡ್ ಮ್ಯಾನ್‌ಗಳ ಪ್ರತಿಕೃತಿ ದಹಿಸಿ 2023 ರಕ್ಕೆ ಗುಡ್‌ಬೈ ಹೇಳಲಾಗುತ್ತೆ. ಕಷ್ಟಗಳೆಲ್ಲಾ ಸುಟ್ಟು ಹೋಗಲಿ ಅಂತಾ ಈ ರೀತಿ ಆಚರಿಸಲಾಗುತ್ತೆ. ಕಲಾವಿದರು ಪ್ರತಿಕೃತಿ ರೆಡಿ ಮಾಡಿದ್ದು, ಇಲ್ಲಿಂದ ಗೋವಾಗೂ ರವಾನೆ ಆಗಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.