ಬೆಂಗಳೂರು: ಹೊಸವರ್ಷಾಚರಣೆ ನಡುವೆ ಕೆಲವೆಡೆ ಅವಾಂತರ, ಅಸಭ್ಯ ವರ್ತನೆ ತೋರಿದ ಯುವಕನ ಕೆನ್ನೆಗೆ ಬಾರಿಸಿದ ಪೊಲೀಸ್

ಹೊಸ ವರ್ಷದ ಸಂಭ್ರಮದ ನಡುವೆ ಕೆಲ ಅವಾಂತರಗಳು ನಡೆದಿವೆ. ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಪೊಲೀಸರು ಕೆನ್ನೆಗೆ ಬಾರಿಸಿದ್ದು, ಪಬ್​ನಲ್ಲಿ ಕನ್ನಡ ಹಾಡು ಹಾಕಿಲ್ಲವೆಂದು ಗಲಾಟೆ, ಪೊಲೀಸರ ಜೊತೆ ಯುವಕ, ಯುವತಿಯರ ವಾಗ್ವಾದ ಸೇರಿದಂತೆ ಅನೇಕ ಘಟನೆಗಳು ನಡೆದಿವೆ.

ಬೆಂಗಳೂರು: ಹೊಸವರ್ಷಾಚರಣೆ ನಡುವೆ ಕೆಲವೆಡೆ ಅವಾಂತರ, ಅಸಭ್ಯ ವರ್ತನೆ ತೋರಿದ ಯುವಕನ ಕೆನ್ನೆಗೆ ಬಾರಿಸಿದ ಪೊಲೀಸ್
ಹೊಸ ವರ್ಷಾಚರಣೆ
Follow us
| Updated By: ಆಯೇಷಾ ಬಾನು

Updated on: Jan 01, 2024 | 7:12 AM

ಬೆಂಗಳೂರು, ಜ.01: ಹೊಸ ನಿರೀಕ್ಷೆಗಳೊಂದಿಗೆ ಬೆಂಗಳೂರು ಮಂದಿ 2024ಕ್ಕೆ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ (New Year). ಪ್ರತಿವರ್ಷ ಹೊಸ ವರ್ಷಾಚರಣೆ ವೇಳೆ ಆಕರ್ಷಣೆಯ ಕೇಂದ್ರ ಬಿಂದು ಆಗುವ ಬೆಂಗಳೂರಿನ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್​ನಲ್ಲಿ ಯುವಸಮೂಹ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಆದರೆ ಹೊಸ ವರ್ಷದ ಸಂಭ್ರಮದ ನಡುವೆ ಕೆಲ ಅವಾಂತರಗಳು ನಡೆದಿವೆ. ಯುವತಿ ಜೊತೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಪೊಲೀಸರು ಕೆನ್ನೆಗೆ (Slap) ಬಾರಿಸಿದ್ದು, ಪಬ್​ನಲ್ಲಿ ಕನ್ನಡ ಹಾಡು ಹಾಕಿಲ್ಲವೆಂದು ಗಲಾಟೆ, ಪೊಲೀಸರ ಜೊತೆ ಯುವಕ, ಯುವತಿಯರ ವಾಗ್ವಾದ ಸೇರಿದಂತೆ ಅನೇಕ ಘಟನೆಗಳು ನಡೆದಿವೆ.

ಯುವತಿ ಜೊತೆ ಅಸಭ್ಯ ವರ್ತನೆ ತೋರಿದವಿಗೆ ಏಟು

ಹೊಸ ವರ್ಷದ ಸಂಭ್ರಮದ ನಡುವೆ ಕೆಲ ಅವಾಂತರಗಳು ನಡೆದಿವೆ. ಹೊಸ ವರ್ಷ ಆಚರಿಸಲು ಚರ್ಚ್‌ಸ್ಟ್ರೀಟ್‌ನಲ್ಲಿ ಜನಸಾಗರವೇ ಹರಿದು ಬಂದಿತ್ತು. ಈ ಜನಸಮೂಹದ ನಡುವೆ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಯುವಕನೊಬ್ಬನಿಗೆ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಯುವಕನ ಅಸಭ್ಯ ವರ್ತನೆ ವಿರುದ್ಧ ನೊಂದ ಯುವತಿ ಅಲ್ಲೇ ಇದ್ದ ಪೊಲೀಸರಿಗೆ ದೂರು ಕೊಟ್ಟಿದ್ದು ತಕ್ಷಣವೇ ಪುಂಡ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಸರಿಯಾಗಿ ಕ್ಲಾಸ್‌ ತೆಗೆದುಕೊಂಡ್ರು. ಕೆನ್ನೆಗೆ ಒಂದು ಬಾರಿಸಿ ಬುದ್ಧಿ ಹೇಳಿದ್ರು.

ಯುವತಿಯರ ಟಚಿಂಗ್‌ಗಾಗಿ ಬಂದಿದ್ದವನಿಗೆ ಗೂಸಾ

ಬ್ರಿಗೇಡ್ ರೋಡ್‌ನಲ್ಲಿ ಮಂಡ್ಯ ಮೂಲದ ಯುವಕನೊಬ್ಬ ಯುವತಿಯೊಬ್ಬಳ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಟಿವಿ9 ತಂಡ ಈತನ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿತ್ತು. ಕೂಡಲೇ ಕಬ್ಬನ್ ಪಾರ್ಕ್ ಠಾಣೆ ಪೊಲೀಸ್ರು ಆತನನ್ನು ವಶಕ್ಕೆ ಪಡೆದು ಬಿಸಿ ಮುಟ್ಟಿಸಿದ್ರು. ಈ ವೇಳೆ ಪೊಲೀಸರ ಮುಂದೆ ಆತ ತಪ್ಪೊಪ್ಪಿಕೊಂಡಿದ್ದು ನಾನು ಯುವತಿಯರ ಮೈಕೈ ಮುಟ್ಟಿದ್ದು ನಿಜ. ನಾನು ಎಂಜಿರೋಡ್‌ಗೆ ಬಂದಿದ್ದೇ ಅದಕ್ಕಾಗಿ ಅಂತಾ ಹೇಳಿದ್ದಾನೆ.

ಕನ್ನಡ ಸಾಂಗ್ ಹಾಕಿಲ್ಲ ಎಂದು ಗಲಾಟೆ

ಕೋರಮಂಗಲ ಪಬ್‌ನಲ್ಲಿ ಯುವಕನೊಬ್ಬ ಕನ್ನಡ ಸಾಂಗ್ಸ್ ಹಾಕಿಲ್ಲ ಅಂತಾ ಕುಡಿದ ಮತ್ತಿನಲ್ಲಿ ಫುಲ್ ಕಿರಿಕ್ ಮಾಡಿದ್ದಾನೆ. ಪೊಲೀಸರು ಆತನನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟಿದ್ದಾರೆ. ಗಲಾಟೆ ವೇಳೆ ಆತನ ಕೈಗೂ ಗಾಯವಾಯ್ತು. ಇದೇ ವೇಳೆ ಅಲ್ಲೇ ಇದ್ದ ಮತ್ತೊಬ್ಬ ಯುವಕ ಫುಲ್ ಟೈಟಾಗಿ ರಸ್ತೆಯಲ್ಲೇ ವಾಲಾಡುವಂತ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಫೇಸ್‌ ಮಾಸ್ಕ್ ಧರಿಸಿ ಪುಂಡರ ಕಿತಾಪತಿ

ಬ್ರಿಗೇಡ್ ರಸ್ತೆಯಲ್ಲಿ ತನ್ನ ಗರ್ಲ್‌ಫ್ರೆಂಡ್ ಜೊತೆ ಅಸಭ್ಯವಾಗಿ ವರ್ತಿಸಿದ ಕಾರಣಕ್ಕೆ, ಆಕೆಯ ಬಾಯ್‌ ಫ್ರೆಂಡ್ ಅಪರಿಚಿತ ವ್ಯಕ್ತಿಯನ್ನು ಹಿಡಿದು ಥಳಿಸಿದ ಘಟನೆ ನಡೀತು. ಬಳಿಕ ಪೊಲೀಸರು ಮದ್ಯಪ್ರವೇಶದಿಂದ ಗಲಾಟೆ ತಿಳಿಯಾಯಿತು. ಇನ್ನೊಂದೆೆಡೆ ಚರ್ಚ್‌ಸ್ಟ್ರೀಟ್‌ನಲ್ಲಿ ಫೇಸ್‌ಮಾಸ್ಕ್ ಧರಿಸಿ ಹಾವಳಿ ಮಾಡ್ತಿದ್ದ ಪುಂಡರಿಗೆ ಪೊಲೀಸರು ತರಾಟೆಗೆ ತೆಗೆದುಕೊಂಡ್ರು.

ಇದನ್ನೂ ಓದಿ: ಶಿವಮೊಗ್ಗ: ಅನ್ಯಕೋಮಿನ ಗುಂಪಿನಿಂದ ಯುವಕನಿಗೆ ಚಾಕು ಇರಿತ

ಬ್ಯಾರಿಕೇಡ್ ತಳ್ಳಿ ನುಗ್ಗಲು ಯತ್ನಿಸಿದ ಜನ

ಚರ್ಚ್‌ಸ್ಟ್ರೀಟ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಒಮ್ಮೆಲೆ ನೂಕು ನುಗ್ಗಲು ಉಂಟಾಯಿತು. ತಳ್ಳಾಟ ನೂಕಾಟದ ಪರಿಸ್ಥಿತಿ ತಲೆದೋರಿತು. ಬ್ಯಾರಿಕೇಡ್‌ಗಳನ್ನು ತಳ್ಳಿ ಸಾರ್ವಜನಿಕರು ನುಗ್ಗಲು ಪ್ರಯತ್ನಿಸಿದ್ರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ರು.

ಅಸ್ವಸ್ಥಗೊಂಡು ಕುಸಿದು ಬಿದ್ದ ಯುವತಿ

ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಬಂದಿದ್ದ ಯುವತಿಯೊಬ್ಬಳು ಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ನಡೆದಿದೆ. ಕೂಡಲೇ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆ್ಯಂಬುಲೆನ್ಸ್‌ನಲ್ಲಿ ಪೊಲೀಸರು ಆಸ್ಪತ್ರೆಗೆ ರವಾನಿಸಿದರು.

12ಗಂಟೆಯಾಗ್ತಿದ್ದಂತೆ ಪೊಲೀಸ್ ಲಾಠಿ ಬಿಸಿ

12 ಗಂಟೆ ತುಂಬಿ ಹೊಸವರ್ಷವನ್ನು ವೆಲ್‌ಕಮ್ ಮಾಡಿ, ಸಂಭ್ರಮಾಚರೆ ಮುಗಿಯುತ್ತಿದ್ದಂತೆ ಎಂಜಿ ರಸ್ತೆಯಲ್ಲಿ ಪೊಲೀಸರು ಗುಂಪು ಚದುರಿಸಲು ಮುಂದಾದ್ರು. ಮಧ್ಯರಾತ್ರಿ 1 ಗಂಟೆಯವರೆಗೂ ಅವಕಾಶವಿದ್ರೂ ಕೂಡ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಮನೆಗೆ ತೆರಳುವಂತೆ ಲಾಠಿ ವಾರ್ನಿಂಗ್ ಕೊಟ್ರು.

12ಗಂಟೆ ಮುಗಿಯುತ್ತಿದ್ದಂತೆ ಫುಲ್ ಟ್ರಾಫಿಕ್ ಜಾಮ್

ಸೆಲೆಬ್ರೇಷನ್ ಮುಗಿಸಿ ಜನ ಒಮ್ಮೆಲೆ ಮನೆಗಳಿಗೆ ತೆರಳೋಕೆ ಶುರುಮಾಡಿದ್ದರಿಂದ ಎಂ.ಜಿ.ರಸ್ತೆ ಸುತ್ತಮುತ್ತ, ರಿಚ್ಮಂಡ್ ಸರ್ಕಲ್, ಮ್ಯೂಸಿಯಂ ರಸ್ತೆ, ಕಬ್ಬನ್ ಪಾರ್ಕ್ ಸರ್ಕಲ್, ಮಲ್ಯ ರಸ್ತೆಯಲ್ಲಿ ಫುಲ್ ಟ್ರಾಫಿಕ್​ಜಾಮ್ ಉಂಟಾಗಿತ್ತು.

ಪೊಲೀಸರಿಂದ ಅಚ್ಚುಕಟ್ಟಾಗಿ ಬಿಗಿಭದ್ರತೆ

ಈ ಬಾರಿ 2024ರ ಹೊಸವರ್ಷವನ್ನು ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಲಾಗಿದೆ. ಮೋಜು, ಮಸ್ತಿ, ಮದರಿಯ ಮತ್ತಿನೊಂದಿಗೆ ಕೆಲವರು ನ್ಯೂಇಯರ್‌ಗೆ ಸ್ವಾಗತ ಕೋರಿದ್ದಾರೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದ್ರೆ. ಪೊಲೀಸ್ ಬಿಗಿಭದ್ರತೆಯ ಕಾರಣ ಯಾವುದೇ ರೀತಿಯ ದೊಡ್ಡ ಅನಾಹುತಗಳಾಗಿಲ್ಲ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ