ಬೆಂಗಳೂರು: ಹೆಬ್ಬಾಳದ ಮಸೀದಿ ಬಳಿ ಸಿಲಿಂಡರ್ ಸ್ಫೋಟ; ಯಾವುದೇ ಪ್ರಾಣಾಪಾಯವಾಗಿಲ್ಲ- ಘಟನೆಯ ವಿಡಿಯೋ ಇಲ್ಲಿದೆ

Gas Cylinder Explosion in Bengaluru: ಬೆಂಗಳೂರಿನ ಹೆಬ್ಬಾಳದ ಮಸೀದಿ ಆವರಣದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರು: ಹೆಬ್ಬಾಳದ ಮಸೀದಿ ಬಳಿ ಸಿಲಿಂಡರ್ ಸ್ಫೋಟ; ಯಾವುದೇ ಪ್ರಾಣಾಪಾಯವಾಗಿಲ್ಲ- ಘಟನೆಯ ವಿಡಿಯೋ ಇಲ್ಲಿದೆ
ಸಿಲಿಂಡರ್ ಸ್ಫೋಟದ ದೃಶ್ಯ
Updated By: shivaprasad.hs

Updated on: Dec 24, 2021 | 2:28 PM

ಬೆಂಗಳೂರು: ಹೆಬ್ಬಾಳ (Hebbal) ಬಳಿ ಮಸೀದಿಯ ಆವರಣದಲ್ಲಿ ಸಿಲಿಂಡರ್ ಸ್ಫೋಟವಾಗಿದೆ (Cylinder Blast). ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅನಿಲ ಸೋರಿಕೆಯಾಗಿ ಮಸೀದಿಯ ಒಳಗೆ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗ್ಯಾಸ್ ಲೀಕ್​ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆ ನಡೆಯುವ ವೇಳೆ ಮಸೀದಿಯ ಒಳಗೆ ಇದ್ದವರೆಲ್ಲರೂ ಹೊರಗೆ ಬಂದಿದ್ದಾರೆ. ನಂತರ ಸಿಲಿಂಡರ್ ಸ್ಫೋಟವಾಗಿದೆ.

ನಾಗವಾರ ಹೆಬ್ಬಾಳಕ್ಕೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ. ಮಸೀದಿ ಅವರಣದಲ್ಲಿ ಗ್ಯಾಸ್ ಸ್ಟೌ ರಿಪೇರಿ ಅಂಗಡಿಯಿತ್ತು.  ಅಂಗಡಿಯಲ್ಲಿ ಇದ್ದ ಗ್ಯಾಸ್ ಸಿಲಿಂಡರ್​​ನಿಂದ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗೋವಿಂದ ಪುರ ಪೊಲೀಸರು ಭೇಟಿ ನೀಡಿದ್ದಾರೆ.

ಶಾರ್ಟ್​​ಸರ್ಕ್ಯೂಟ್​ನಿಂದ ಸಿಲಿಂಡರ್ ಬ್ಲಾಸ್ಟ್ ಆಗಿದೆ; ಸ್ಥಳೀಯ ನಿವಾಸಿ ಮಾಹಿತಿ
ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಮಸೀದಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಸ್ಥಳೀಯ ನಿವಾಸಿ ರಹಮತುಲ್ಲಾ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಮಾಲೀಕರಿಗೆ ಹಾಗೂ ಕೆಲಸದ ಸಿಬ್ಬಂದಿಗೆ ಸಣ್ಣ ಮಟ್ಟದ ಗಾಯ ಆಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಗ್ಯಾಸ್ ರಿಫೀಲಿಂಗ್ ಹಾಗೂ ಗ್ಯಾಸ್ ಸ್ಟೌವ್ ರಿಪೇರಿ ಮಾಡೋ ಅಂಗಡಿ ಅದಾಗಿದ್ದು, ಬೆಳಗ್ಗೆ 11:30 ರ ಸುಮಾರಿಗೆ ಬ್ಲಾಸ್ಟ್ ಆಗಿದೆ ಎಂದು ರಹಮತುಲ್ಲಾ ನುಡಿದಿದ್ದಾರೆ.

ಘಟನೆಯಿಂದ ಮಸೀದಿಗೆ ಯಾವುದೇ ಹಾನಿಯಾಗಿಲ್ಲ. ಮಸೀದಿಯಲ್ಲಿ ಶುಕ್ರವಾರದ ನಮಾಜ್ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಪಾಸಿಟಿವ್

Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್​ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್

Published On - 1:20 pm, Fri, 24 December 21