ಆನೇಕಲ್: ತಾಯಿ ಸತ್ತಿದ್ದರೂ ತಾಯಿಯ ಹೆಣದ ಮೇಲೆ ಆಟ ಆಡುತ್ತಿದ್ದ ಮಗು

ತಾಯಿ ಸತ್ತಿದ್ದರೂ ತಾಯಿಯ ಹೆಣದ ಮೇಲೆ ಮಗು ಆಟ ಆಡುತ್ತಿರುವ ಹೃದಯ ವಿದ್ರಾವಕ‌ ಘಟನೆ ಅನೇಕಲ್​​ನ ಅತ್ತಿಬೆಲೆಯಲ್ಲಿ ನಡೆದಿದೆ.

ಆನೇಕಲ್: ತಾಯಿ ಸತ್ತಿದ್ದರೂ ತಾಯಿಯ ಹೆಣದ ಮೇಲೆ ಆಟ ಆಡುತ್ತಿದ್ದ ಮಗು
ಸಾಂಕೇತಿಕ ಚಿತ್ರ
Edited By:

Updated on: Jun 20, 2022 | 8:46 PM

ಬೆಂಗಳೂರು: ತಾಯಿ (Mother) ಸತ್ತಿದ್ದರೂ ತಾಯಿಯ ಹೆಣದ ಮೇಲೆ ಮಗು (Baby) ಆಟ ಆಡುತ್ತಿರುವ ಹೃದಯ ವಿದ್ರಾವಕ‌ ಘಟನೆ ಅನೇಕಲ್​​ನ (Anekal) ಅತ್ತಿಬೆಲೆಯಲ್ಲಿ ನಡೆದಿದೆ. ಕಸ ಆಯ್ದು ಜೀವನ‌ ಸಾಗಿಸುತ್ತಿದ್ದ ರತ್ನಮ್ಮ(30) ವಿಪರೀತ ಕುಡಿತ, ಗಾಂಜಾ ಸೇವನೆ‌ ಕಾರಣ ಅನಾರೋಗ್ಯದಿಂದ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಟೀ ಕುಡಿಯೋಕೆ ಅಂತ ಮಗುವಿನಿಂದಿಗೆ ತಾಯಿ ರತ್ನಮ್ಮ ಬಂದಿದ್ದರು. ಟೀ ಬ್ರೆಡ್ ಕೂಡ ತಿನ್ನೋಕೂ ಆಗದಷ್ಟು ನಿತ್ರಾಣಗೊಂಡಿದ್ದ ರತ್ನಮ್ಮ ಅಲ್ಲೇ ಮಲಗಿಕೊಂಡಿದ್ದಾರೆ. ನಂತರ ಮಲಗಿದಲ್ಲೇ‌ ಸಾವನ್ನಪ್ಪಿದ್ದಾರೆ.

ಆದರೆ 8 ತಿಂಗಳ ಹೆಣ್ಣು ಮಗು ತಾಯಿಯ ಹೆಣದ ಮೇಲೆ ಆಟ ಆಡುತ್ತಿತ್ತು. ಗಂಡ ಅಯ್ಯಪ್ಪನ್ ಬರೋ ವರೆಗೂ ಮೃತ ದೇಹದ ಪಕ್ಕದಲ್ಲಿದ್ದ ಮಗು ಆಟವಾಡುತ್ತಿತ್ತು. ಮಗು ಆಡೋದನ್ನು ನೋಡಿ ಸಾರ್ವಜನಿಕರು  ಮಹಿಳೆ ಮಲಗಿರಬಹುದೆಂದು ಊಹಿಸಿದ್ದರು. ಆದರೆ ತಾಯಿ ಸಾವನ್ನಪ್ಪಿದ್ದಾಳೆ ಎಂದು ತಿಳಿದಾಗ  ಮಗು ಸ್ಥಿತಿ ಕಂಡು ಜನರು ಮರುಗಿದ್ದಾರೆ.

ಇದನ್ನು ಓದಿ: ಕಾರಿಗೆ ಕೆಎಸ್​​ಆರ್​​ಟಿಸಿ ಬಸ್​ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಬಸ್​​ನಲ್ಲಿದ್ದ 10 ಪ್ರಯಾಣಿಕರಿಗೆ ಗಾಯ

ರತ್ನಮ್ಮ ಆಂಧ್ರದ ಕಡಪ ಜಿಲ್ಲೆಯವರಾಗಿದ್ದು, ಗಂಡ ಅಯ್ಯಪ್ಪನ್ , ಬೇಲೂರು ಮೂಲದವನು. ಅಯ್ಯಪ್ಪನ್ ನಾಲ್ಕು ವರ್ಷಗಳ ಹಿಂದೆ ಎರಡನೇ ಮದುವೆ ಆಗಿದ್ದನು. ತಮಿಳುನಾಡಿನ‌ ಹೊಸೂರಿನಲ್ಲಿ ವಾಸವಿದ್ದ ಕುಟುಂಬ ಕಸ ಆಯ್ದು, ‌ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿತ್ತು. ಗಂಡ ಹೆಂಡತಿ ಇಬ್ಬರಿಂದ ಅತಿಯಾಗಿ‌ ಮದ್ಯ‌ ಸೇವನೆ ಯಿಂದ ಸಾವು ಸಂಭವಿಸಿರಬಹುದೆಂದು ಅನುಮಾನ ವ್ಯಕ್ತವಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ ಮಾಡಿ.

Published On - 7:24 pm, Mon, 20 June 22