Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ವೃತ್ತಿಯಲ್ಲಿ ನರ್ಸ್, ಶೋಕಿ‌ ಜೀವನಕ್ಕೆ ಬಿದ್ದು ಈಕೆ ಹಿಡಿದ ದಾರಿ ಎಂತಹದ್ದು ನೋಡಿ

ಇತ್ತಿಚೀನ ದಿನಗಳಲ್ಲಿ ಶೋಕಿ ಜೀವನದ ಹಿಂದೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕೊಸ್ಕರ​ ಎಂತಹ ಕೆಲಸಕ್ಕಾದರೂ ಇಳಿಯಲು ಸಿದ್ಧರಿದ್ದಾರೆ. ಅದರಂತೆ ಇಲ್ಲೊಬ್ಬಳು ಹೈ ಪೈ ಜೀವನದ ಆಸೆಗೆ ಬಿದ್ದು ಇದೀಗ ಅಂದರ್​ ಆಗಿದ್ದಾಳೆ.

Bengaluru News: ವೃತ್ತಿಯಲ್ಲಿ ನರ್ಸ್, ಶೋಕಿ‌ ಜೀವನಕ್ಕೆ ಬಿದ್ದು ಈಕೆ ಹಿಡಿದ ದಾರಿ ಎಂತಹದ್ದು ನೋಡಿ
ಆರೋಪಿ ಮಹಿಳೆ ಗಂಗಾ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 15, 2023 | 8:05 AM

ಬೆಂಗಳೂರು: ಇತ್ತಿಚೀನ ದಿನಗಳಲ್ಲಿ ಶೋಕಿ ಜೀವನದ ಹಿಂದೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕೊಸ್ಕರ​ ಎಂತಹ ಕೆಲಸಕ್ಕಾದರೂ ಇಳಿಯಲು ಸಿದ್ಧರಿದ್ದಾರೆ. ಅದರಂತೆ ಇಲ್ಲೊಬ್ಬಳು ಹೈ ಪೈ ಜೀವನದ ಆಸೆಗೆ ಬಿದ್ದು ಇದೀಗ ಅಂದರ್​ ಆಗಿದ್ದಾಳೆ. ಹೌದು ಆಕೆ ವೃತ್ತಿಯಲ್ಲಿ ನರ್ಸ್(Nurse), ಕೈತುಂಬಾ ಒಳ್ಳೆ ಸಂಬಳ ಕೂಡ ಬರುತ್ತಿತ್ತು. ಇದರ ಮಧ್ಯೆ ಶೋಕಿ‌ ಜೀವನದ ಜೊತೆಗೆ ಹಣದ ವ್ಯಾಮೋಹ ಕೂಡ ಜಾಸ್ತಿಯಾಗಿತ್ತು. ಇದಕ್ಕೊಸ್ಕರ ಕಳ್ಳತನ(Theft)ದ ಹಾದಿ ಹಿಡಿದಿದ್ದಳು. ಇದರಿಂದ ತನ್ನ ಇಷ್ಟದ ಕೆಲಸವನ್ನ ಕಳೆದುಕೊಂಡಳು. ಇನ್ನು ಕೆಲಸ ಹೋದ ಬಳಿಕ ಆಕೆ ಆಯ್ಕೆ ಮಾಡಿಕೊಂಡಿದ್ದೇ ಡೇಂಜ​ರಸ್ ದಾರಿ. ಹೌದು ಬಾಡಿಗೆ ಕೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಒಬ್ಬರೆ ಇದ್ದದ್ದನ್ನು ನೋಡಿ, ಅವರ ತಲೆಗೆ ಹೊಡೆದು‌ ಕತ್ತಿನಲ್ಲಿದ್ದ ಸರವನ್ನ ದೋಚಲು ಶುರು ಮಾಡಿದ್ದಳು. ಇದೀಗ ಆಕೆಯನ್ನ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮೀ ಅಲಿಯಾಸ್ ಗಂಗಾ ಅರೆಸ್ಟ್

ಹೌದು ಹೀಗೆ ಅಡ್ಡದಾರಿ ಹಿಡಿದ ಲಕ್ಷ್ಮೀ ಅಲಿಯಾಸ್ ಗಂಗಾ ಕಳೆದ ತಿಂಗಳು ಮೇ.26 ರಂದು ಲಗ್ಗೆರೆಯ ಪಾರ್ವತಿನಗರದಲ್ಲಿ ಡ್ರೈ ಪ್ರೂಟ್ಸ್ ಮಾರುವ ನೆಪದಲ್ಲಿ ಹೋಗಿದ್ದಳು. ಮನೆ ಕೇಳಲು ಹೋಗಿ, ಒಂಟಿಯಾಗಿ ಮನೆಯಲ್ಲಿ ಇರುವವರನ್ನ ಟಾರ್ಗೆಟ್ ಮಾಡಿದ್ದ ಆಕೆ, ಅದರಂತೆ ಮೊದಲ ಪ್ರಯತ್ನದಲ್ಲೇ ಆರೋಪಿ ಗಂಗಾ ಸಿಕ್ಕಿಬಿದ್ದಿದ್ದಾಳೆ. ಜೊತೆಗೆ ಆಕೆಯ ಹಿಂದಿನ ಘಟನೆಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ:ಅರೆಸ್ಟ್​ ಮಾಡಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಫೈರಿಂಗ್‌ ಮಾಡಿ ಆರೋಪಿಯ ಬಂಧನ

ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡೋಕು ಮುನ್ನ ಮಾಡ್ತಿದ್ಳು ಖತರ್ನಾಕ್ ಫ್ಲ್ಯಾನ್

ಇನ್ನು ಆರೋಪಿ ಗಂಗಾ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡೋಕು ಮುನ್ನ ಖತರ್ನಾಕ್ ಫ್ಲ್ಯಾನ್ ಮಾಡುತ್ತಿದ್ದಳು. ಈಕೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗ ದೋಚಿದ್ದ ಒಡವೆಗಳು ಒಂದೆರಡಲ್ಲ. ವಾರ್ಡ್​ಗೆ ಹೋಗಿ ಪೇಷಂಟ್ ಕಡೆಯವರನ್ನು ಹೊರಗೆ ಕಳುಹಿಸಿ, ರೋಗಿಗೆ ಮದ್ದು ಬರುವ ಇಂಜೆಕ್ಷನ್ ಕೊಟ್ಟು, ನಂತರ ಅವರ ಮೈ ಮೇಲಿದ್ದ ಚಿನ್ನಾಭರಣ ದೋಚಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಇಂತಹ ಹಲವು ಘಟನೆಗಳ ಬಳಿಕ ಆಸ್ಪತ್ರೆಯವರು ಆಕೆಯನ್ನ ಕೆಲಸದಿಂದ ತೆಗೆದು ಹಾಕಿದ್ದರು.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​