ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯಿಂದ ದೋಖಾ; ಸಿಬಿಎಸ್​ಇ ಪಠ್ಯಕ್ರಮ ಎಂದು ಟೊಳ್ಳು ಭರವಸೆ ನೀಡಿ ಲಕ್ಷ ಲಕ್ಷ ಪೀಕಿದ ಶಾಲೆ

|

Updated on: Mar 06, 2023 | 8:47 AM

ಇಂಟರ್ ನ್ಯಾಷನಲ್ ಲೇವಲ್ ಶಾಲೆ ಎಂದು ಪೋಸ್ ಕೊಟ್ಟಿರುವ ಖಾಸಗಿ ಶಾಲೆಯೊಂದು ಮಕ್ಕಳನ್ನೂ ಸೇರಿಸಿಕೊಂಡು, ಪೋಷಕರಿಗೂ ಕನ್ಫ್ಯೂಸ್ ಮಾಡಿದೆ. ನಮ್ಮದು ಸಿಬಿಎಸ್​ಇ ಪಠ್ಯಕ್ರಮ ಎಂದು ಅಡ್ಮಿಷನ್ ಮಾಡಿಕೊಂಡು ಲಕ್ಷಾಂತರ ದುಡ್ಡು ಪೀಕಿದೆ.

ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯಿಂದ ದೋಖಾ; ಸಿಬಿಎಸ್​ಇ ಪಠ್ಯಕ್ರಮ ಎಂದು ಟೊಳ್ಳು ಭರವಸೆ ನೀಡಿ ಲಕ್ಷ ಲಕ್ಷ ಪೀಕಿದ ಶಾಲೆ
ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆಯಿಂದ ಸಿಬಿಎಸ್​ಇ ಪಠ್ಯಕ್ರಮ ಎಂದು ಟೊಳ್ಳು ಭರವಸೆ ನೀಡಿ ಲಕ್ಷಗಟ್ಟಲೇ ಪೀಕಿದ ಶಾಲೆ
Follow us on

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಹೊಮ್ಮದೇವನಹಳ್ಳಿಯಲ್ಲಿರುವ ಆರ್ಕಿಡ್ ಇಂಟರ್ ನ್ಯಾಶನಲ್ ಶಾಲೆ(orchid international school) ಸಿ ಬಿ ಎಸ್ ಸಿ ಪಠ್ಯಕ್ರಮ ಶಾಲೆ ಎಂದು ಪೋಸ್ ಕೊಟ್ಟು ಪೋಷಕರಿಗೆ ಪಂಗನಾಮ ಹಾಕಿದೆ. ಸಿಬಿಎಸ್​ಸಿ ಪಠ್ಯಕ್ರಮ ಓದಿಸುವ ಅರ್ಹತೆ ಗಿಟ್ಟಿಸಿಕೊಳ್ಳದೇ ಇದ್ದರೂ, ನಮ್ಮದು ಸಿಬಿಎಸ್​ಸಿ ಪಠ್ಯಕ್ರಮ ಎಂದು ಹೇಳಿ ಲಕ್ಷ ಲಕ್ಷ ಹಣ ಪೀಕಿದೆ.‌ ಆದರೆ ಮಕ್ಕಳಿಗೆ ಓದಲು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ನೀಡಿದ ಪುಸ್ತಕವನ್ನು ನೀಡಿದೆ. ಇದನ್ನು ಕಂಡ ಪೋಷಕರು ಪ್ರಶ್ನೆ ಮಾಡಿದಕ್ಕೆ, ಯಾವ ಸ್ಪಷ್ಟನೆ ನೀಡದೇ, ನಾವು ಕೇಂದ್ರದ ಪಠ್ಯಕ್ರಮ ಓದಿಸುತ್ತಿಲ್ಲ, ಅದರದ್ದೇ ಥರಾ ಇರುವ ಪಠ್ಯಕ್ರಮ ನೀಡಿದ್ದೇವೆ ಎಂದು ಕನ್ಫ್ಯೂಸ್ ಮಾಡಿದೆ.

ಸಿಬಿಎಸ್​ಸಿ ಪಠ್ಯಕ್ರಮ ಇಲ್ಲದೇ ಇದ್ರೂ ಯಾಕೆ ಪೊಷಕರಿಗೆ ಸುಳ್ಳು ಹೇಳಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಸಂಸ್ಥೆ ಮ್ಯಾನೇಜ್ಮೆಂಟ್, ನಾವು ಯಾರಿಗೂ ಹೀಗೆ ಹೇಳೇ ಇಲ್ಲ ಅಂತ ನುಣುಚಿಕೊಂಡಿದೆ. ಇನ್ನು ಈ ಬಗ್ಗೆ ಶಿಕ್ಷಣ ಅಧಿಕಾರಿಗಳಿಗೆ ಕೇಳಿದರೆ,‌ ನಾವು ಆರ್ಕಿಡ್ ಸಂಸ್ಥೆಗೆ ಸಂಬಂಧಿಸಿದಂತೆ ಅಕ್ರಮ ಮಾಡಿರುವ ಎಲ್ಲಾ ಶಾಲೆಗಳಿಗೂ ನೊಟೀಸ್ ಜಾರಿ ಮಾಡಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಡಾಫೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ಆರ್ಕಿಡ್​ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು​, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ರಾಜ್ಯ ಸರ್ಕಾರದ ಪಠ್ಯಕ್ರಮವೇ ಓಧಿಸುವ ಹಾಗಿದ್ರೆ, ಲಕ್ಷ ಲಕ್ಷ ದುಡ್ಡು ಕೊಟ್ಟು ನಾವು ಆರ್ಕೀಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯಾಕೆ ಓದಿಸೋದು, ಸರಕಾರಿ ಶಾಲೆಯಲ್ಲೇ ಓದಿಸಬಹುದಿತ್ತು ಎಂದು ಕೆಲ ಪೋಷಕರು ತಮ್ಮ ಮಕ್ಕಳ ಟಿ.ಸಿ ಪಡೆಯಲು ಮುಂದಾಗಿದ್ದಾರೆ. ಇನ್ನಾದರೂ ಶಿಕ್ಷಣ ಇಲಾಖೆ ಈ ಕುರಿತು ಕ್ರಮಕ್ಕೆ ಮುಂದಾಗುತ್ತಾ ಕಾದು ನೋಡಬೇಕಿದೆ.

ವರದಿ: ಸೈಯ್ಯದ್ ನಿಜಾಮುದ್ದೀನ್ ಟಿವಿ9 ಆನೇಕಲ್

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ