Namma Metro: ಮಾರ್ಚ್​​ 10ರಿಂದ ಕೆಆರ್​ ಪುರಂ-ವೈಟ್​ಪಿಲ್ಡ್​​ ಮೆಟ್ರೋ ಸಂಚಾರಕ್ಕೆ ಯೋಗ್ಯ: ಪ್ರಧಾನಿ ಮೋದಿ ಉದ್ಘಾಟನೆ ಸಾಧ್ಯತೆ

ಕೆ.ಆರ್​ ಪುರಂ-ವೈಟ್​ಪಿಲ್ಡ್ ಮಾರ್ಗದ ಮೆಟ್ರೋ ಕಾಮಗಾರಿ ಮಾರ್ಚ್​ 10 ರ ಒಳಗಾಗಿ ಸಂಪೂರ್ಣ ಮುಗಿಯಲಿದ್ದು, ಅಂದಿನಿಂದ ಕಾರ್ಯಾರಂಭ ಮಾಡಲು ಯೋಗ್ಯವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ರಾಜ್ಯ ಸರ್ಕಾರಕ್ಕೆ ಹೇಳಿದೆ.

Namma Metro: ಮಾರ್ಚ್​​ 10ರಿಂದ ಕೆಆರ್​ ಪುರಂ-ವೈಟ್​ಪಿಲ್ಡ್​​ ಮೆಟ್ರೋ ಸಂಚಾರಕ್ಕೆ ಯೋಗ್ಯ: ಪ್ರಧಾನಿ ಮೋದಿ ಉದ್ಘಾಟನೆ ಸಾಧ್ಯತೆ
ನಮ್ಮ ಮೆಟ್ರೋ
Follow us
ವಿವೇಕ ಬಿರಾದಾರ
|

Updated on: Mar 06, 2023 | 10:20 AM

ಬೆಂಗಳೂರು: ಸಿಲಿಕಾನ್​ ಸಿಟಿ ಜನರ ಬಹು ನಿರೀಕ್ಷಿತ ಕೆ.ಆರ್​ ಪುರಂ-ವೈಟ್​ಪಿಲ್ಡ್ ಮಾರ್ಗದ​​ ಮೆಟ್ರೋ (K.R. Puram-Whitefield Metro) ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಾರ್ಗದ ಮೆಟ್ರೋ ಕಾಮಗಾರಿ ಮಾರ್ಚ್​ 10 ರ ಒಳಗಾಗಿ ಸಂಪೂರ್ಣ ಮುಗಿಯಲಿದ್ದು, ಅಂದಿನಿಂದ ಕಾರ್ಯಾರಂಭ ಮಾಡಲು ಯೋಗ್ಯವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ರಾಜ್ಯ ಸರ್ಕಾರಕ್ಕೆ (Karanataka Government) ಹೇಳಿದೆ. ಹಾಗೇ ಇದರ ಉದ್ಘಾಟನಾ ದಿನಾಂಕವನ್ನು ನೀವೆ ನಿಗದಿಪಡಿಸಿ ಎಂದಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇದೇ ತಿಂಗಳು ಬೆಂಗಳೂರು-ಮೈಸೂರು ಎಕ್ಸಪ್ರೆಸ್​ ವೇ (Bengaluru-Mysore Express way) ಉದ್ಘಾಟನೆ ಸಂಬಂಧ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಈ ಎಕ್ಸಪ್ರೆಸ್​ ವೇ ಉದ್ಘಾಟನೆ ದಿನದಂದೇ, ಕೆಆರ್​ ಪುರಂ-ವೈಟ್​ಪಿಲ್ಡ್​​ ಮೆಟ್ರೋ ಅನ್ನು ಕೂಡ ಪ್ರಧಾನಿ ಮೋದಿಯವರು ಉದ್ಘಾಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ 13.75 ಕಿಮೀ ಮಾರ್ಗದ ಸುರಕ್ಷತಾ ತಪಾಸಣೆ ನಡೆಸಿರುವ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ರೈಲ್ವೆ ಸಂಚಾರಕ್ಕೆ ಫೆ. 28ರಂದು ಒಪ್ಪಿಗೆ ನೀಡಿದ್ದಾರೆ. 25 ಪ್ರಮುಖ ಅಂಶಗಳ ಮೂಲಕ 60 ಸಲಹೆ, ಸೂಚನೆ ನೀಡಿದ್ದು, ಸೇವೆ ಆರಂಭಿಸುವುದಕ್ಕೂ ಮುನ್ನ ಅವುಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಅದರಂತೆ 12 ನಿಲ್ದಾಣಗಳು ಹಾಗೂ ಮೆಟ್ರೋ ಮಾರ್ಗದಲ್ಲಿ ಅಂತಿಮ ಹಂತದ ಕಾಮಗಾರಿಯನ್ನು ಬಿಎಂಆರ್‌ಸಿಎಲ್‌ ಕೈಗೊಂಡಿದೆ.

ಅಂತಿಮ ಹಂತದ ಕಾಮಾಗಾರಿಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದು. ಇವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಹಾಗೇ ಎಲ್ಲ ಕಾರ್ಯಗಳು ಪೂರ್ಣಗೊಂಡ ನಂತರ ಸಂಪೂರ್ಣ ವರದಿಯನ್ನು CMRSಗೆ ಸಲ್ಲಿಸಲಾಗುತ್ತಿದೆ. ಮಾರ್ಚ್ 10ರೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಬಿಎಂಆರ್​ಸಿಎಲ್​​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 12 ಮೆಟ್ರೋ ನಿಲ್ದಾಣಗಳಿವೆ

ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ, ಮತ್ತು ಕೆ.ಆರ್. ಪುರಂ. ಈ ಮಾರ್ಗದಿಂದ ತೆರೆಯುವುದರಿಂದ ಪ್ರತಿದಿನ 2.5 ರಿಂದ 3 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮೆಟ್ರೋ ನಿಲ್ದಾಣಗಳ ಒಳಾಂಗಣ ವಿನ್ಯಾಸ

ಮೆಟ್ರೋ ನಿಲ್ದಾಣ ಸುಂದರವಾಗಿ ಕಾಣವ ದೃಷ್ಠಿಯಿಂದ ಒಳಾಂಗಣ ವಿನ್ಯಾಸ ಮಾಡಲು ವಿವಿಧ ಸಂಸ್ಥೆಗಳೊಂದಿಗೆ ಬಿಎಂಆರ್​ಸಿಎಲ್​ ಒಪ್ಪಂದ ಮಾಡಿಕೊಂಡಿದೆ. ಬಿಎಂಆರ್​ಸಿಎಲ್ ಪ್ರಕಾರ​​ ಮೆಟ್ರೋ ಆಸ್ತಿಗಳನ್ನು ಸುಂದರಗೊಳಿಸಲು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಕೂಡ ಮೆಟ್ರೋ ನಿಲ್ದಾಣಗಳ ಒಳಾಂಗಣ ಸುಂದರವಾಗಿ ಕಾಣಲು ವಿವಿಧ ಸಂಸ್ಥೆಗಳು ಮುಂದೆ ಬಂದಿದ್ದವು.

ಈಗಾಗಲೇ ವೈಟ್‌ಫೀಲ್ಡ್ ಮೆಟ್ರೋ ಲೈನ್‌ನಲ್ಲಿ, ಸಧೃಡ ಭಾರತ, ಪರಿಸರ ಸಂರಕ್ಷಣೆ ಮತ್ತು ಇತರ ಸಾಮಾಜಿಕ ಸಂದೇಶಗಳಂತಹ ವಿವಿಧ ವಿಷಯಗಳನ್ನು ಒಳಗೊಂಡ ಸುಂದರೀಕರಣದ ಕೆಲಸವನ್ನು ನಾವು ನೋಡಬಹುದು. ಕೆಲವು ಸ್ಥಳಗಳಲ್ಲಿ, ಕಂಬಗಳಿಗೆ ನೇರಳೆ ಬಣ್ಣ ಬಳಿಯಲಾಗಿದೆ. ಸದ್ಯ ಐದು ಕಂಪನಿಗಳು ಸೌಂದರ್ಯೀಕರಣಕ್ಕೆ ಮುಂದೆ ಬಂದಿದ್ದು, ಐದು ವರ್ಷಗಳ ಅವಧಿಗೆ ಅವುಗಳೇ ನಿರ್ವಹಿಸಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ