ಬೆಂಗಳೂರು, (ಡಿಸೆಂಬರ್ 04): ಬೆಂಗಳೂರಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. 28 ವರ್ಷದ ಮೆರಿನಾ ವಿಲ್ಸನ್ ಎನ್ನುವ ಮಹಿಳೆ ನಿವೃತ್ತ ಐಎಎಸ್ ಅಧಿಕಾರಿ ರಾಮಚಂದ್ರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಪಾನೀಯದಲ್ಲಿ ಮತ್ತುಬರಿಸುವ ಪದಾರ್ಥ ಹಾಕಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಅನ್ವಯ ಪೊಲೀಸರು, ರಾಮಚಂದ್ರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮೆರಿನಾ ವಿಲ್ಸನ್ ಎಂ ಆದ ನನ್ನ ಮೇಲೆ ನಿವೃತ್ತ ಐಎಎಸ್ ಅಧಿಕಾರಿಯಾದ ರಾಮಚಂದ್ರ ಅವರು ನನಗೆ ಮತ್ತುಬರುವ ಪಾನೀಯವನ್ನು ನೀಡಿ ಅತ್ಯಾಚಾರ ಮಾಡಿದ್ದು, ಇದೀಗ ನಾನು 8 ತಿಂಗಳು ಗರ್ಭಿಣಿಯಾಗಿದ್ದೇನೆ. ಇದರ ಬಗ್ಗೆ ನಾನು ಪೊಲೀಸ್ ಠಾಣೆತಲ್ಲಿ ದೂರು ನೀಡಿದ್ದು, ರಾಮಚಂದ್ರನವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ತನಿಖೆಯ ನಿಸ್ಪಕ್ಷಪಾತವಾಗಿ ನಡೆಯುತ್ತಿ. ಹಾಗೂ ಇದುವರೆಗೂ ಅವರ ಮೇಲೆ ಯಾವ ರೀತಿ ಕಾನೂನು ಕ್ರಮವಾಗಿಲ್ಲ ಎಂದಿದ್ದಾರೆ.