ಆನೇಕಲ್; ಕಡತ, ದಾಖಲೆಗಳನ್ನು ಕದ್ದೊಯ್ಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿ
ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಅಕ್ರಮ ಕೇಲಿ ಬಂದಿದ್ದು ತನಿಖೆ ನಡೆಯುತ್ತಿದೆ. ಇದೇ ವೇಳೆ ರಾತ್ರೋ ರಾತ್ರಿ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಗೆ ನುಗ್ಗಿ ಕಡತದ ಪುಸ್ತಕಗಳನ್ನು ಕದ್ದು ತೆಗೆದುಕೊಂಡು ಹೋಗುವಾಗ ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆನೇಕಲ್, ಡಿ.04: ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ರಾತ್ರೋರಾತ್ರಿ ಪುರಸಭೆಯ ಕಡತದ ಪುಸ್ತಕಗಳನ್ನು ಕದ್ದೊಯ್ಯಲು (Theft) ಬಂದು ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಪುರಸಭೆಯಲ್ಲಿ ಕಡತದ ಪುಸ್ತಕಗಳನ್ನು ಕದ್ದು ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದಿದ್ದಾರೆ.
ಪುರಸಭೆಯಲ್ಲಿ ನಡೆದಿರುವ ಅಕ್ರಮಗಳನ್ನ ಪುರಸಭಾ ಸದಸ್ಯರು ಬಯಲು ಮಾಡಿದ್ದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರನ್ನ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಶ್ವೇತಾ ಬಾಯಿ, ಆರೋಗ್ಯಾಧಿಕಾರಿ ರಮೇಶ್, ಸಿಬ್ಬಂದಿ ಅಮೃತ ಎಂಬಾಕೆಯ ವಿರುದ್ಧ ಪುರಸಭಾ ಸದಸ್ಯರು ಆರೋಪ ಮಾಡಿದ್ದರು. ಈ ಹಿನ್ನೆಲೆ ಮುಖ್ಯಾಧಿಕಾರಿಯನ್ನ ವರ್ಗಾವಣೆ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಅದರಂತೆಯೇ ಮೇಲಾಧಿಕಾರಿಗಳು ತನಿಖೆ ನಡೆಸುತ್ತಿದ್ದು ತಡರಾತ್ರಿ ಪುರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಪುರಸಭೆಯ ಕಡತದ ಪುಸ್ತಕಗಳನ್ನು ಕಳ್ಳತನ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ನಿಂತಿದ್ದ ಬಿಎಂಟಿಸಿ ಬಸ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು: ಬಸ್ ಚಾಲಕ ಪ್ರಯಾಣಿಕರನ್ನ ರಕ್ಷಿಸಿದ್ದೇ ರೋಚಕ
ಪುರಸಭಾ ವಾಹನಗಳ ಡಿಸೇಲ್, ಅಕ್ರಮ ಖಾತೆ, ನೋ ಪಾರ್ಕಿಂಗ್ ಬೋರ್ಡ್, ಜಾಹೀರಾತು ಫಲಕ ಸೇರಿದಂತೆ ಸಾಕಷ್ಟು ಕಾಮಗಾರಿಗಳಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ನಡೆದಿರುವ ಬಗ್ಗೆ ಪುರಸಭಾ ಸದಸ್ಯರು ಆರೋಪ ಮಾಡಿದ್ದಾರೆ. ಕಳೆದ ರಾತ್ರಿ ಅದಕ್ಕೆ ಸಂಬಂಧ ಪಟ್ಟ ಫೈಲ್ಗಳನ್ನ ಆರೋಗ್ಯಾಧಿಕಾರಿ ರಮೇಶ್ ಹಾಗೂ ಸಿಬ್ಬಂದಿ ಅಮೃತ ಪುರಸಭೆಯಿಂದ ಕದ್ದೊಯ್ಯುತ್ತಿದ್ದರು. ಈ ವೇಳೆ ಪುರಸಭೆ ಮುಂಭಾಗದಲ್ಲಿ ಅಡ್ಡಗಟ್ಟಿ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಪುರಸಭಾ ಸದಸ್ಯರು ಫೈಲ್ ಗಳನ್ನ ಸೂರ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಎರಡು ದಿನದ ಹಿಂದೆ ಸಿಇಒ ವಿರುದ್ಧವೇ ಆರೋಪ ಮಾಡಲಾಗಿತ್ತು. ಆರೋಪದ ಬೆನ್ನಲ್ಲೇ ಭಾನುವಾರ ಆಗಿದ್ದರು ಕಚೇರಿಗೆ ಅಧಿಕಾರಿಗಳು ಬಂದಿದ್ದರು. ನಿನ್ನೆ ರಾತ್ರಿ ಕಚೇರಿ ತೆಗೆದು ಪುಸ್ತಕ ಹಾಗೂ ದಾಖಲೆ ಸಾಗಿಸಲು ಯತ್ನಿಸಿದ್ದು ಸಿಕ್ಕಿಬಿದ್ದಿದ್ದಾರೆ.
ಪುರಸಭೆ ಕಚೇರಿ ಬೀಗ ತೆಗೆಯಲು ಬಿಡದೆ ಧರಣಿ ಕುಳಿತ ಸದಸ್ಯರು
ಇನ್ನು ಪುರಸಭೆ ಮುಂಭಾಗ ಪುರಸಭಾ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪುರಸಭಾ ಸದಸ್ಯರು ಹಾಗೂ ಸಾರ್ವಜನಿಕರು ಚಂದಾಪುರ ಪುರಸಭೆ ಹೆಲ್ತ್ ಇನ್ಸ್ಪೆಕ್ಟರ್ ರಮೇಶ ಹಾಗೂ ಅಮೃತ ವಿರುದ್ಧ ದೂರು ದಾಖಲಿಸಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚಂದಾಪುರ ಪುರಸಭೆಯ ಬೀಗ ತೆಗೆಯಲು ಬಿಡದೆ ಧರಣಿ ನಡೆಸಿ ತನಿಖೆಗೆ ಒತ್ತಾಯಿಸಿದ್ದಾರೆ. ತಮಟೆ ಭಾರಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಲಾಗುತ್ತಿದೆ.
ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ, ಹಿಂಬದಿ ಸವಾರ ಸ್ಥಳದಲ್ಲೇ ಸಾವು
ಆನೇಕಲ್ ತಾಲೂಕಿನ ಸುರಜಕ್ಕನಹಳ್ಳಿ ಗೇಟ್ ಬಳಿ ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಬೈಕ್ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರಿನ ಎಲಚೇನಳ್ಳಿಯಿಂದ ಆನೇಕಲ್ ಕಡೆ ಕೆಲಸಕ್ಕೆ ಬರುತ್ತಿದ್ದ ಬೈಕ್ ಸವಾರರು ಈ ವೇಳೆ ಲಾರಿಯ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:34 pm, Mon, 4 December 23