AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರಾಯಣ ಮೂರ್ತಿ ವಾರದ 70 ಗಂಟೆ ಕೆಲಸ ಸಲಹೆಗೆ ಉದ್ಯಮಿ ವಿನೋದ್ ಖೋಸ್ಲಾ ಬೆಂಬಲ

ವಾರದ 70 ಗಂಟೆ ಕೆಲಸ ಮಾಡಬೇಕು ಎಂಬ ಐಟಿ ಸಂಸ್ಥೆ ಇನ್ಫೋಸಿಸ್​ನ ಮಾಜಿ ಮುಖ್ಯಸ್ಥ ನಾರಾಯಣ ಮೂರ್ತಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾರಾಯಣ ಮೂರ್ತಿ ಅವರ ಹೇಳಿಕೆಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಇದೀಗ ನಾರಾಯಣ ಮೂರ್ತಿ ಅವರ ಹೇಳಿಕೆಗೆ ಸನ್ ಮೈಕ್ರೊಸಿಸ್ಟಮ್ಸ್ ಸಹ-ಸಂಸ್ಥಾಪಕ ವಿನೋದ್ ಖೊಸ್ಲಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾರಾಯಣ ಮೂರ್ತಿ ವಾರದ 70 ಗಂಟೆ ಕೆಲಸ ಸಲಹೆಗೆ ಉದ್ಯಮಿ ವಿನೋದ್ ಖೋಸ್ಲಾ ಬೆಂಬಲ
ಖ್ಯಾತ ಉದ್ಯಮಿಗಳಾದ ನಾರಾಯಣ ಮೂರ್ತಿ, ವಿನೋದ ಖೋಸ್ಲಾ
ವಿವೇಕ ಬಿರಾದಾರ
|

Updated on: Dec 04, 2023 | 1:46 PM

Share

ಬೆಂಗಳೂರು, ಡಿ.04: ವಾರದ 70 ಗಂಟೆ ಕೆಲಸ ಮಾಡಬೇಕು ಎಂಬ ಐಟಿ ಸಂಸ್ಥೆ ಇನ್ಫೋಸಿಸ್​ನ (Infosys) ಮಾಜಿ ಮುಖ್ಯಸ್ಥ ನಾರಾಯಣ ಮೂರ್ತಿ (Narayana Murthy) ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾರಾಯಣ ಮೂರ್ತಿ ಅವರ ಹೇಳಿಕೆಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಾರಾಯಣ ಮೂರ್ತಿ ಅವರ ಹೇಳಿಕೆಗೆ ಸನ್ ಮೈಕ್ರೊಸಿಸ್ಟಮ್ಸ್ ಸಹ-ಸಂಸ್ಥಾಪಕ ವಿನೋದ್ ಖೊಸ್ಲಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೌದು ನಾರಾಯಾರಣ ಮೂರ್ತಿ ಅವರ ಹೇಳಿಕೆಯನ್ನು ತಪ್ಪು ಎಂದು ಟೀಕೆ ಮಾಡಿದವರಿಗೆ “ಮಾನಸಿಕ ಆರೋಗ್ಯ ಚಿಕಿತ್ಸೆಯ ಅಗತ್ಯವಿದೆ” ಎಂದು ವಿನೋದ್​ ಖೋಸ್ಲಾ (Vinod Khosla) ತಮ್ಮ ಎಕ್ಸ್ (ಟ್ವಿಟರ್​​) ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮುಂದುವರೆದು “ಅವರು ಅದನ್ನು ಕಠಿಣ ಪರಿಶ್ರಮ ಎಂದು ಭಾವಿಸಬೇಕೇ ಹೊರತು ತಮ್ಮ ಮೇಲಿನ ಹೇರಿಕೆ ಎಂದು ಭಾವಿಸಬಾರದು. ಟೀಕೆ ಮಾಡುವವರು 70 ಗಂಟೆ ಕೆಲಸ ಮಾಡುವ ಗಟ್ಟಿತನವನ್ನು ಬೆಳಸಿಕೊಳ್ಳಬೇಕು. ಇದು ಸಾಧ್ಯವಾಗದಿದ್ದರೇ ಸುಮ್ಮನಿರಬೇಕು. ನಿಮಗೆ 70 ಗಂಟೆ ಕೆಲಸ ಮಾಡುವ ಇಚ್ಛೆ ಇರದಿದ್ದರೇ ಇದರ ಪರಿಣಾಮವನ್ನು ನೀವು ಮುಂದಿನ ದಿನಗಳಲ್ಲಿ ಎದುರಿಸಲು ಸಿದ್ದರಾಗಿರಿ” ಎಂದು ಖ್ಯಾತ ಉದ್ಯಮಿ ವಿನೋದ್​ ಖೋಸ್ಲಾ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾರಾಯಣಮೂರ್ತಿ ಹೇಳಿದ್ದು ಹಂಗಲ್ಲ, ಹಿಂಗೆ: 70 ಗಂಟೆ ಕೆಲಸವನ್ನು ಬಿಡಿಸಿ ವಿವರಿಸಿದ ಟೆಕ್ ಮಹೀಂದ್ರ ಸಿಇಒ ಗುರ್ನಾನಿ

70 ಗಂಟೆಗಳು/ವಾರ ಕೆಲಸ ಮಾಡಬೇಡಿ ಮತ್ತು ನೀವು ಮಾಡುವ ಆಯ್ಕೆಗಳ ಪರಿಣಾಮಗಳೊಂದಿಗೆ ಬದುಕಬೇಕು. ಅವರು ಮಾತನಾಡುತ್ತಿದ್ದಾರೆ. “ವೃತ್ತಿ ಮಹತ್ವಾಕಾಂಕ್ಷೆಯ” ಯುವಕರಿಗೆ ಆದರೆ ವಿಭಿನ್ನ ಆಯ್ಕೆಗಳೊಂದಿಗೆ ಬದುಕಲು ಇತರ ಮಾರ್ಗಗಳಿವೆ” ಎಂದು ಖೋಸ್ಲಾ ಬರೆದಿದ್ದಾರೆ.

ಸರಿ, ವಾರಕ್ಕೆ 70 ಗಂಟೆ ಕೆಲಸ ಮಾಡುವುದಿಲ್ಲ ಎಂದು ತೀರ್ಮಾನಿಸಿ ನೀವು ಮಾಡುವ ಆಯ್ಕೆಗಳ ಪರಿಣಾಮಗಳೊಂದಿಗೆ ಜೀವಿಸಿ. ಅವರು “ವೃತ್ತಿ ಮಹತ್ವಾಕಾಂಕ್ಷೆಯ” ಯುವಜನರೊಂದಿಗೆ ಮಾತನಾಡುತ್ತಿದ್ದಾರೆ ಆದರೆ ವಿಭಿನ್ನ ಆಯ್ಕೆಗಳೊಂದಿಗೆ ಬದುಕಲು ಇತರ ಮಾರ್ಗಗಳಿವೆ” ಎಂದು ಖೋಸ್ಲಾ ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ