ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿದ ಯುವಕ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 14, 2024 | 7:45 PM

ಪೊಲೀಸರ ಮೇಲಿನ ಕೋಪಕ್ಕೆ ಯುವಕನೊಬ್ಬ ವಿಧಾನಸೌಧದ ಸಮೀಪ ತನ್ನ ಎಲೆಕ್ಟ್ರಿಕ್ ಬೈಕ್‌(Bike)ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಸದ್ಯ ಯುವಕನನ್ನು ಚಳ್ಳಕೆರೆ ಮೂಲದ ಪೃತ್ವಿರಾಜ್ ಎಂದು ಗುರುತಿಸಲಾಗಿದ್ದು, ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿದ ಯುವಕ
ವಿಧಾನಸೌಧದ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿದ ಯುವಕ
Follow us on

ಬೆಂಗಳೂರು, ಆ.14: ವಿಧಾನಸೌಧದ ಸಮೀಪ ಎಲೆಕ್ಟ್ರಿಕ್ ಬೈಕ್‌(Bike)ಗೆ ಮಾಲೀಕನೇ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಬಾಕಿ ಹಣ ಪಾವತಿಸಲು ಆಗದಿದ್ದಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಇದೀಗ ಘಟನೆಗೆ ಅಸಲಿ ಕಾರಣ ತಿಳಿದು ಬಂದಿದ್ದು, ಪೊಲೀಸರ ಮೇಲಿನ ಕೋಪಕ್ಕೆ ಯುವಕನೊಬ್ಬ ಬೈಕ್​ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಸದ್ಯ ಯುವಕನನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೆಂಕಿ ಹಚ್ಚಲು ಕಾರಣವೇನು?

ಚಳ್ಳಕೆರೆ ಮೂಲದ ಪೃತ್ವಿರಾಜ್ ಎಂಬ ಯುವಕ ಟ್ರಕ್ಕಿಂಗ್ ಹೋಗಿ ಮಿಸ್ಸಾಗಿದ್ದ. ಈ ಹಿನ್ನಲೆ ಗಾಬರಿಗೊಂಡ ಆತನ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಪೃಥ್ವಿ ತಾಯಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಪೃಥ್ವಿ ಮೊಬೈಲ್ ಹಿಡಿದು ತಾಯಿ ಜತೆ ಠಾಣೆಗೆ ಹೋಗಿದ್ದನು. ನಾಪತ್ತೆ ದೂರು ಏಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದ, ಈ ವೇಳೆ ಪೊಲೀಸರು ಮೊಬೈಲ್ ಕಸಿದುಕೊಂಡು ಠಾಣೆಯೊಳಗೆ ಕರೆದೊಯ್ದಿದ್ದರು. ನಂತರ  ಪೊಲೀಸರ ಜತೆ ವಾಗ್ವಾದದ ವಿಡಿಯೋಗಳನ್ನು ವೈರಲ್ ಮಾಡಿದ್ದನು.

ಇದನ್ನೂ ಓದಿ:ಚಾಮರಾಜನಗರ: ವರದಕ್ಷಿಣೆ ನೀಡಿಲ್ಲವೆಂದು ಮಾವನ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್​ಗೆ ಬೆಂಕಿ ಹಚ್ಚಿದ ಅಳಿಯ

ವಿಧಾನಸೌಧ ಸ್ಪೋಟಿಸುವುದಾಗಿ ವಿಡಿಯೋ ಮಾಡಿದ್ದ ಪೃಥ್ವಿ

ಬಳಿಕ ಡಿಆರ್ ಡಿಓ, ಐಐಎಸ್ಸಿ, ವಿಧಾನಸೌಧ ಸ್ಪೋಟಿಸುವುದಾಗಿ ಪೃಥ್ವಿ ವಿಡಿಯೋ ಮಾಡಿದ್ದ. ಪೃಥ್ವಿರಾಜ್ ಬೆದರಿಕೆಯ ವಿಡಿಯೋ ವೈರಲ್ ಆಗಿತ್ತು. ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಪೃಥ್ವಿ ಕರೆಸಿ ಎಚ್ಚರಿಕೆ ನೀಡಿದ್ದರು. ಪೊಲೀಸರು ಮತ್ತು ತಹಸೀಲ್ದಾರ್ ಬಳಿ ಪೃಥ್ವಿ ತಪ್ಪೊಪ್ಪಿಗೆ ಪತ್ರ ನೀಡಿದ್ದ. ವಿಡಿಯೋ ಮಾಡಿ ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ್ದನು. ಕೆಲ ದಿನಗಳ ಬಳಿಕ ಮತ್ತೆ ಆಡಿಯೋ ವೈರಲ್ ಮಾಡಿದ್ದ. ಚಳ್ಳಕೆರೆ ಠಾಣೆ ಸತೀಶ್ ನಾಯ್ಕ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿ ಪಿಎಸ್ ಐ ಬಳಿಯಿದ್ದ ಪಿಸ್ತೂಲ್ ತೆಗೆದು ಶೂಟ್ ಮಾಡುತ್ತಿದ್ದೆ ಎಂದು ಆವಾಜ್ ಹಾಕಿದ್ದ. ದೂರು ಕೊಟ್ಟರೂ ಪಿಎಸ್ ಐ ಸತೀಶ್ ನಾಯ್ಕ್ ಮೇಲೆ ಕ್ರಮ ಕೈಗೊಂಡಿಲ್ಲವೇಕೆ ಎಂದು ಕಿಡಿಕಾರಿದ್ದ. ಮತ್ತೆ ಪೃಥ್ವಿ ಮತ್ತು ತಾಯಿಗೆ ಡಿವೈಎಸ್ಪಿ ರಾಜಣ್ಣ ಬುದ್ಧಿ ಹೇಳಿ ಕಳುಹಿಸಿದ್ದರು. ಇಂದು ಬೇಸರಗೊಂಡ  ಪೃತ್ವಿರಾಜ್,  ವಿಧಾನಸೌಧದ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Wed, 14 August 24