ಬೆಂಗಳೂರಿನಲ್ಲಿ ಮತ್ತೊಂದು ಸ್ಫೋಟ: ಓರ್ವ ಸಾವು, ತಜ್ಞರಿಂದ ಪರಿಶೀಲನೆ

ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಕುಕ್ಕರ್ ಸ್ಫೋಟಗೊಂಡು ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಆದರೆ ಸ್ಫೋಟದ ತೀವ್ರತೆಯಿಂದಾಗಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಘಟನಾ ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ಸ್ಫೋಟ: ಓರ್ವ ಸಾವು, ತಜ್ಞರಿಂದ ಪರಿಶೀಲನೆ
ಬೆಂಗಳೂರಿನಲ್ಲಿ ಮತ್ತೊಂದು ಅನುಮಾನಾಸ್ಪದ ಸ್ಫೋಟ: ಓರ್ವ ಸಾವು, ತಜ್ಞರಿಂದ ಪರಿಶೀಲನೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 14, 2024 | 6:59 PM

ಬೆಂಗಳೂರು, ಆಗಸ್ಟ್​ 14: ಕುಕ್ಕರ್ ಸ್ಫೋಟಗೊಂಡು (blast) ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಯುವಕರ ಪೈಕಿ ಓರ್ವ ಸಾವನ್ನಪ್ಪಿರುವಂತಹ ಘಟನೆ ಪುಟ್ಟೇನ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಪಿ.ನಗರದಲ್ಲಿ ನಡೆದಿದೆ. ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಮೋಸಿನ್ ಚಿಕಿತ್ಸೆ ಫಲಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.​ ಸಮೀರ್​ಗೆ ಚಿಕಿತ್ಸೆ ಮುಂದುವರೆದಿದೆ. ಇಬ್ಬರು ಯುವಕರು ಯುಪಿ ಮೂಲದವರು. ಈ ಸ್ಫೋಟ​ ಕೂಡ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ​ ಮಾದರಿಯಲ್ಲೇ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಘಟನಾ ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ ಭೇಟಿ ನೀಡಲಾಗಿದೆ.

ಅಡುಗೆ ಮಾಡಲು ಗ್ಯಾಸ್ ಸ್ಟೌವ್‌​ ಮೇಲೆ ಕುಕ್ಕರ್​ ಇಟ್ಟು ಇಬ್ಬರು ಯುವಕರು ಮಲಗಿದ್ದಾರೆ. ಈ ವೇಳೆ ಕುಕ್ಕರ್ ಹೀಟ್ ಹೆಚ್ಚಾಗಿ ಸ್ಫೋಟಗೊಂಡಿದೆ. ಕುಕ್ಕರ್​ ಸ್ಫೋಟವಾಗಿ ಬಲ್ಬ್​ಗೆ ತಾಗಿ ಶಾರ್ಟ್ ಸರ್ಕೀಟ್​​ನಿಂದ ರೂಂ​ಗೆ ಬೆಂಕಿ ಹೊತ್ತಿಕೊಂಡಿದೆ.

ಇದನ್ನೂ ಓದಿ: ಪೊಲೀಸರ ಮೇಲಿನ ಕೋಪಕ್ಕೆ ವಿಧಾನಸೌಧದ ಮುಂದೆಯೇ ಬೈಕ್​ಗೆ ಬೆಂಕಿ ಹಚ್ಚಿದ ಯುವಕ

ಅಡಿಗೆ ಮಾಡಲು ಇಟ್ಟಾಗ ಕುಕ್ಕರ್ ಸಿಡಿದಿದೆ. ಬೇರೆ ಯಾವ ಕಾರಣಕ್ಕೆ ಸ್ಫೋಟಗೊಂಡಿರುವ ಮಾಹಿತಿ ಇಲ್ಲ.  (ಸ್ಫೋಟಕಗಳನ್ನು ಬಳಸಿರುವ ಬಗ್ಗೆ ಯಾವ ಸಾಕ್ಷಿಗಳು ಪತ್ತೆ ಇಲ್ಲ) ಈಗಾಗಲೇ ಎಲ್ಲಾ ರೀತಿಯಿಂದಲ್ಲೂ ಪರಿಶೀಲನೆ ನಡೆಸಲಾಗಿದೆ. ಉಗ್ರ ಕೃತ್ಯದ ರೀತಿಯಲ್ಲಿ ಯಾವ ಸಾಕ್ಷಿಗಳು ಪತ್ತೆ ಆಗಿಲ್ಲ. ಈಗಾಗಲೇ ನುರಿತ ತಜ್ಞರಿಂದ ಪರಿಶೀಲನೆ ಮಾಡಲಾಗಿದೆ. ಅಡುಗೆ ಮನೆಯಲ್ಲಿ ಆಗಿರುವ ಘಟನೆ ಇದು ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಸ್ಪಷನೆ ನೀಡಲಾಗಿದೆ.

ಸ್ಫೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಕೊಠಡಿ ಮತ್ತು ಗೃಹೋಪಯೋಗಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಘಟನಾ ಸ್ಥಳದಲ್ಲಿ ಸುಟ್ಟ ವೈರ್​ಗಳು ಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಅದರಲ್ಲೂ 78ನೇ ಸ್ವಾತಂತ್ರ್ಯ ದಿನಾಚರಣೆಗೂ ಮುಂಚೆ ದುರಂತ ಸಂಭವಿಸಿರುವುದು ಸಾಕಷ್ಟು ಆಕಂತಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ರಾಷ್ಟ್ರೀಕೃತ ಬ್ಯಾಂಕ್​​ಗಳ ಸರ್ಕಾರಿ ಖಾತೆ ಕ್ಲೋಸ್​ಗೆ ಸೂಚನೆ

ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್​ ಅವರು ಪ್ರತಿಕ್ರಿಯಿಸಿದ್ದು, ಶಾರ್ಟ್ ಸರ್ಕೀಟ್​ನೊಂದಿಗೆ ಕುಕ್ಕರ್ ಸ್ಫೋಟ ಸಂಭವಿಸಿದೆ. ಭಯೋತ್ಪಾದನೆ ವಿಚಾರವನ್ನು ತಳ್ಳಿಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:33 pm, Wed, 14 August 24

‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
VIDEO: ಎಲ್ಲಾ ಮಸಾಲೆಗೆ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಬ್ರೇಕ್..!
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್​ ಸಂಭ್ರಮ
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
CPL 2024: ಕಾರ್ನ್​ವಾಲ್ ಕಮಾಲ್: ರಾಯಲ್ಸ್​ಗೆ ಭರ್ಜರಿ ತಂದುಕೊಟ್ಟ ರಹ್​ಕೀಮ್
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಈ ರಾಶಿಯವರು ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತು ಕಳೆದುಕೊಳ್ಳಲಿದ್ದೀರಿ
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಬಾಂಗ್ಲಾ ನಾಯಕನಿಗೆ ಮಾತಿನಲ್ಲೇ ತಿವಿದ ರೋಹಿತ್ ಶರ್ಮಾ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ
ಲಾರಿಯಡಿ ಸಿಲುಕಿದ ಬೈಕ್; ಪವಾಡದಂತೆ ಬಚಾವಾದ ಚಾಲಕ