ಬೆಂಗಳೂರು: ಲಂಚ(Bribe) ಸ್ವೀಕರಿಸುವಾಗ ಬಿಬಿಎಂಪಿಯ ಬಿಎಂಟಿಎಫ್(Bangalore Metropolitan Task Force) ಮಹಿಳಾ ಪಿಎಸ್‌ಐ (PSI) ಸಿಕ್ಕಿಬಿದ್ದಿದ್ದಾರೆ. ಮಾಜಿ ಕಾರ್ಪೊರೇಟರ್ ಲಕ್ಷ್ಮೀ ನಾರಾಯಣ ಬಳಿ ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ PSI ಬೇಬಿ ಓಲೇಕಾರ್ ಬಲೆಗೆ ಬಿದ್ದಿದ್ದಾರೆ.
ಹೊರಮಾವು ಅಗರದ ಸರ್ವೆ ನಂಬರ್ 153ರ ಭೂವ್ಯಾಜ್ಯ ಸಂಬಂಧ PSI ಬೇಬಿ ಓಲೇಕಾರ್, ಮಾಜಿ ಮಾಜಿ ಕಾರ್ಪೊರೇಟರ್ ಲಕ್ಷ್ಮೀ ನಾರಾಯಣ ಬಳಿ 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಸದ್ಯ ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ 1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ PSI ಬೇಬಿ ಓಲೇಕಾರ್ರನ್ನು ವಶಕ್ಕೆ ಪಡೆದಿದ್ದು ಎಸಿಬಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಇದೇ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಶ್ರೀನಿವಾಸ್ ಕೂಡ ಅರೆಸ್ಟ್ ಆಗಿದ್ದಾರೆ. ಕಾನ್ಸ್‌ಟೇಬಲ್ ಶ್ರೀನಿವಾಸ್ ಮೂಲಕ ಪಿಎಸ್‌ಐ ಬೇಬಿ ಓಲೇಕಾರ್ ಲಂಚ ಪಡೆದಿದ್ದರು ಎನ್ನಲಾಗಿದೆ. ಆರೋಪಿಗಳನ್ನು ಬಂಧಿಸಿ ಅಧಿಕಾರಿಗಳು 1 ಲಕ್ಷ ಜಪ್ತಿ ಮಾಡಿದ್ದಾರೆ. 2019ರಲ್ಲಿ ದಾಖಲಾಗಿದ್ದ ರಸ್ತೆ ನಿರ್ಮಾಣ ಪ್ರಕರಣ ಸಂಬಂಧ ಮಾಜಿ ಕಾರ್ಪೊರೇಟರ್ ಲಕ್ಷ್ಮೀ ನಾರಾಯಣ ಬಳಿ ಲಂಚ ಸ್ವೀಕಾರ ಮಾಡಿದ್ದಾರೆ. ಕೇಸ್ ಕ್ಲೋಸ್ ಆಗಿದ್ರೂ ಮತ್ತೆ ಕೇಸ್ ಮುಕ್ತಾಯ ಮಾಡೋದಾಗಿ ಲಂಚ ಪಡೆದಿದ್ದಾರೆ. 3 ಲಕ್ಷಕ್ಕೆ ಬೇಡಿಕೆಯಿಟ್ಟು 1 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಲಾಗಿದೆ.
ಪತಿಯನ್ನ ಕೊಂದು ಪೊಲೀಸರಿಗೆ ದೂರು ಕೊಟ್ಟ ಹಂತಕಿ ಪತ್ನಿ ಅಂದರ್
ಮಂಡ್ಯ: ಪತಿಯನ್ನ ಕೊಂದು ಪೊಲೀಸರಿಗೆ ದೂರು ಕೊಟ್ಟ ಹಂತಕಿ ಪತ್ನಿ ಅಂದರ್ (arrest) ಆಗಿರುವಂತಹ ಘಟನೆ ಕೆ.ಆರ್.ಎಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನಿಗೆ ಸ್ಕೆಚ್ ಹಾಕಿ ಮರ್ಡರ್ ಮಾಡಿಸಿದ್ದ ಪತ್ನಿ ಗೌರಿ, ಸುಂದರ್ ರಾಜ್ನನ್ನ ಮಜ್ಜಿಗೆಪುರದ ಕಾಲಿ ಜಾಗದಲ್ಲಿ ಕತ್ತು ಸೀಳಿ ಭೀಕರವಾಗಿ ಹಂತಕರು ಕೊಂದಿದ್ದರು. ಕೊಲೆಯ ಬಳಿಕ ಏನು ಗೊತ್ತೆ ಇಲ್ಲಾ ಅನ್ನೋ ರೀತಿ ವರ್ತಿಸಿದ್ದ ಪತ್ನಿ ಗೌರಿ, ಖಾಕಿ ವಿಚಾರಣೆ ವೇಳೆ ಸತ್ಯಾಂಶ ಬಟಾ ಬಯಲಾಗಿದೆ. ಚಾಲಕನಾಗಿದ್ದ ಸುಂದರ್ ರಾಜ್ 15 ದಿನಕ್ಕೊಮ್ಮೆ ಮನೆಗೆ ಬರ್ತಾಯಿದ್ದ. ಕಂಠ ಪೂರ್ತಿ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ಹಿನ್ನಲೆ ಪತಿ ಸುಂದರ್ ರಾಜ್ ಒಂದು ಗತಿ ಕಾಣಿಸಲೇ ಬೇಕೆಂದು ಮುಹೂರ್ತ ಫಿಕ್ಸ್ ಮಾಡಿದ್ದ ಪತ್ನಿ ಗೌರಿ, ತನ್ನ ಸ್ನೇಹಿತರ ಬಳಿ ಕಷ್ಟವನ್ನ ಗೌರಿ ಹೇಳಿಕೊಂಡಿದ್ದು, ಜುಲೈ 2 ರ ಮದ್ಯಾಹ್ನ ಮಜ್ಜಿಗೆಪುರಕ್ಕೆ ಸುಂದರ್ ರಾಜ್ನನ್ನ ಆರೋಪಿಗಳು ಕರೆದುಕೊಂಡು ಹೋಗಿದ್ದಾರೆ. ಬಳಿಕ ಕಂಠಪೂರ್ತಿ ಕುಡಿಸಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಪತ್ನಿ ಗೌರಿ ಸೇರಿದಂತೆ ಐವರು ಆರೋಪಿಗಳನ್ನು ಅರೆಸ್ಟ್ ಮಾಡಿ, ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇದನ್ನೂ ಓದಿ: PGCIL Recruitment 2022: ಬೆಂಗಳೂರಿನ ಪವರ್ಗ್ರಿಡ್ ಕಾರ್ಪೊರೇಷನ್ನಲ್ಲಿದೆ ಉದ್ಯೋಗಾವಕಾಶ
Published On - 4:02 pm, Thu, 7 July 22