ಜಮೀರ್ ಅಹ್ಮದ್ ಸಾರಥ್ಯದ ನ್ಯಾಷನಲ್ ಟ್ರಾವೆಲ್ಸ್​ನಲ್ಲಿ ACB ತಲಾಶ್ ಅಂತ್ಯ; ಸಿಲ್ವರ್ ಓಕ್ ಅಪಾರ್ಟ್ಮೆಂಟ್​ನಲ್ಲಿ 24 ಜೀವಂತ ಗುಂಡು ಪತ್ತೆ!

| Updated By: sandhya thejappa

Updated on: Jul 07, 2022 | 9:14 AM

ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ ಶೋಧ ಮುಂದುವರೆದಿದ್ದು ಫ್ಲ್ಯಾಟ್‌ನಲ್ಲಿ 25 ಬುಲೆಟ್‌ಗಳು ಪತ್ತೆಯಾಗಿವೆ. ಎಸಿಬಿ ಅಧಿಕಾರಿಗಳು 25 ಬುಲೆಟ್‌ಗಳನ್ನು ಸೀಜ್ ಮಾಡಿದ್ದಾರೆ. ಒಟ್ಟು 14 ಅಧಿಕಾರಿಗಳ ತಂಡ ಫ್ಲ್ಯಾಟ್‌ನಲ್ಲಿ ಪರಿಶೀಲನೆ ನಡೆಸುತ್ತಿದೆ.

ಜಮೀರ್ ಅಹ್ಮದ್ ಸಾರಥ್ಯದ ನ್ಯಾಷನಲ್ ಟ್ರಾವೆಲ್ಸ್​ನಲ್ಲಿ ACB ತಲಾಶ್ ಅಂತ್ಯ; ಸಿಲ್ವರ್ ಓಕ್ ಅಪಾರ್ಟ್ಮೆಂಟ್​ನಲ್ಲಿ 24 ಜೀವಂತ ಗುಂಡು ಪತ್ತೆ!
ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ 25 ಬುಲೆಟ್‌ಗಳು ಪತ್ತೆ
Follow us on

ಬೆಂಗಳೂರು: ಅಸಮತೋಲನ ಆಸ್ತಿಗಳಿಕೆ ಆರೋಪದಡಿ ಶಾಸಕ ಜಮೀರ್ ಅಹ್ಮದ್(Zameer Ahmad) ಮೇಲೆ ಎಸಿಬಿ(ACB) ರೇಡ್ ಮಾಡಿದೆ. ಮನೆ, ಕಚೇರಿ ಸೇರಿ 5 ಕಡೆ, 40 ಜನರ ತಂಡ ರೇಡ್ ಮಾಡಿದೆ. ಸದ್ಯ ನ್ಯಾಷನಲ್ ಟ್ರಾವೆಲ್ಸ್ನಲ್ಲಿ ನಡೆಯುತ್ತಿದ್ದ ACB ತಲಾಶ್ ಅಂತ್ಯವಾಗಿದೆ. 8 ಗಂಟೆ ಕಾಲ ಸುದೀರ್ಘ ಶೋಧಕಾರ್ಯ ನಡೆಸಿದ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಿಂಟರ್ ತಂದು ಕೆಲವು ದಾಖಲೆ ಜೆರಾಕ್ಸ್ ಮಾಡಿಕೊಂಡು ವಶಕ್ಕೆ ಪಡೆದಿದ್ದಾರೆ. ಇನ್ನೂ ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ 25 ಬುಲೆಟ್‌ಗಳನ್ನು ಸೀಜ್ ಮಾಡಲಾಗಿದೆ.

ಎಲ್ಲೆಲ್ಲೆ ಎಸಿಬಿ ರೇಡ್‌
1. ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯ ನಿವಾಸ
2. ಸಿಲ್ವರ್ ಓಕ್‌ ಅಪಾರ್ಟ್‌ಮೆಂಟ್‌ ಫ್ಲ್ಯಾಟ್
3.. ಸದಾಶಿವನಗರದ ಗೆಸ್ಟ್‌ಹೌಸ್
4. ಬನಶಂಕರಿಯ ಜಿ.ಕೆ.ಅಸೋಸಿಯೇಟ್ಸ್ ಕಚೇರಿ
5. ಕಲಾಸಿಪಾಳ್ಯದ ಟ್ರಾವೆಲ್ಸ್ ಕಚೇರಿ

ಎಸಿಬಿಯ 14 ಅಧಿಕಾರಿಗಳ ತಂಡ ಜಮೀರ್‌ರ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯ ನಿವಾಸ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನಲ್ಲಿರುವ 3 ಬಿಎಚ್‌ಕೆ ಫ್ಲ್ಯಾಟ್, ಸದಾಶಿವನಗರದ ಗೆಸ್ಟ್‌ಹೌಸ್, ಬನಶಂಕರಿಯಲ್ಲಿರುವ ಜಿ.ಕೆ.ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದ ಟ್ರಾವೆಲ್ಸ್ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ. ಇದನ್ನೂ ಓದಿ: Shaheen Afridi: ಶಾಹೀನ್ ಅಫ್ರಿದಿ ಈಗ DSP: ಹೊಸ ಇನಿಂಗ್ಸ್ ಆರಂಭಿಸಿದ ಪಾಕ್ ವೇಗಿ

ಬಹುಕೋಟಿ ಐಎಂಎ ಪ್ರಕರಣದಲ್ಲಿ ತನಿಖೆ ನಡೆಸಿದ್ದ ಇಡಿ, ಅಕ್ರಮ ಆಸ್ತಿ ಗಳಿಸಿದ ಬಗ್ಗೆ ಎಸಿಬಿಗೆ ಮಾಹಿತಿ ನೀಡಿತ್ತು ಎನ್ನಲಾಗಿದೆ. ಎಸಿಬಿಗೆ ಇಡಿ ಅಧಿಕಾರಿಗಳು ವರದಿ ನೀಡಿದ್ರು ಎನ್ನಲಾಗಿದೆ. ತನಿಖೆಯಲ್ಲಿ ಅಕ್ರಮ ಆಸ್ತಿ ಗಳಿಸಿರೋದು ಸಾಬೀತಾಗಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಎಸಿಬಿ ದಾಳಿ ನಡೆಸಿದೆ ಎನ್ನಲಾಗಿದೆ.

25 ಬುಲೆಟ್‌ಗಳನ್ನು ಸೀಜ್ ಮಾಡಿರುವ ಎಸಿಬಿ ಅಧಿಕಾರಿಗಳು
ಇನ್ನು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿ ಶೋಧ ಮುಂದುವರೆದಿದ್ದು ಫ್ಲ್ಯಾಟ್‌ನಲ್ಲಿ 24 ಜೀವಂತ ಗುಂಡುಗಳು ಪತ್ತೆಯಾಗಿವೆ. ಹಾಗೂ 1 ಖಾಲಿ ಬುಲೆಟ್ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು 24 ಬುಲೆಟ್‌ಗಳನ್ನು ಸೀಜ್ ಮಾಡಿದ್ದಾರೆ. ಒಟ್ಟು 14 ಅಧಿಕಾರಿಗಳ ತಂಡ ಫ್ಲ್ಯಾಟ್‌ನಲ್ಲಿ ಪರಿಶೀಲನೆ ನಡೆಸುತ್ತಿದೆ.

ಶಾಸಕ ಜಮೀರ್ ಅಹಮ್ಮದ್ ಮೇಲೆ ಎಸಿಬಿ ದಾಳಿ ಪ್ರಕರಣ
ಯುಬಿ ಸಿಟಿ ಯ ಫ್ಲಾಟ್ ನಲ್ಲಿ 24 ಜೀವಂತ ಗುಂಡು ಪತ್ತೆ
ಜಮೀರ್ ಅಹಮ್ಮದ್ ಪಿಸ್ತೂಲ್ ಪರವಾನಗಿ ಹೊಂದಿದ್ದಾರೆ
ಹಾಗಾಗಿ ಇದೇ ಪಿಸ್ತೂಲ್ ನ ಗುಂಡುಗಳು ಇರಬಹುದು
ಆದರೆ ಇದೇ ಫ್ಲಾಟ್ ನಲ್ಲಿ 1 Empty bullet case ಪತ್ತೆ
ಕುತೂಹಲಕ್ಕೆ ಕಾರಣವಾದ Empty bullet case
ಪಿಸ್ತೂಲ್ ನಿಂದ ಗುಂಡು ಹಾರಿದ್ರೆ ಮಾತ್ರ ಈ Empty bullet case ಉಳಿಯುತ್ತದೆ
ಫ್ಲಾಟ್ ನಲ್ಲಿ ಪತ್ತೆಯಾದ ಜೀವಂತ ಬುಲೆಟ್ ಮತ್ತು Empty bullet case ಜಪ್ತಿ ಮಾಡಿರುವ ಎಸಿಬಿ ಅಧಿಕಾರಿಗಳು

ಫ್ಲ್ಯಾಟ್‌ನಲ್ಲಿ ಸಿಕ್ತು ದುಬಾರಿ ಮದ್ಯದ ಬಾಟಲಿಗಳು
ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯಿರುವ ಜಮೀರ್‌ರ ಬಂಗಲೆಯಲ್ಲಿ ಎಸಿಬಿ ಪರಿಶೀಲನೆ ಮುಂದುವರಿದಿದೆ. ಅಕ್ಕಸಾಲಿಗನನ್ನು ಕರೆತರಲಾಗಿದೆ. ಚಿನ್ನಾಭರಣ ತೂಗುವ ಯಂತ್ರ ತರಲಾಗಿದೆ. ಅಲ್ಲದೆ ಪ್ರಿಂಟರ್‌ ಕೂಡ ತರಲಾಗಿದೆ. ಹಣಕಾಸಿನ ವರ್ಗಾವಣೆ, ಆಸ್ತಿ ವ್ಯವಹಾರದ ದಾಖಲೆಗಳ ಪರಿಶೀಲನೆ ಮಾಡಲಾಗ್ತಿದೆ. ಮತ್ತೊಂದೆೆಡ ಮಲ್ಯ ರಸ್ತೆಯಲ್ಲಿರುವ ಸಿಲ್ವರ್ ಓಕ್‌ ಅಪಾರ್ಟ್‌ಮೆಂಟ್‌ನಲ್ಲಿನ ಫ್ಲ್ಯಾಟ್‌ನಲ್ಲಿ ದುಬಾರಿ ಬೆಲೆ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಇದನ್ನೂ ಓದಿ: Crime News: 450 ಎಕರೆ ಸರ್ಕಾರಿ ಗೋಮಾಳ‌ ಭೂಮಿ ಕಬಳಿಸಲು ಯತ್ನ! ಅಧಿಕಾರಿ ಸೇರಿ ಐವರು ಅರೆಸ್ಟ್

ಈ ಮಧ್ಯೆ ಜಮೀರ್ ಬೆಂಬಲಿಗರು ಎಸಿಬಿ ದಾಳಿ ಖಂಡಿಸಿ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ನಿವಾಸದ ಬಳಿ ಪ್ರತಿಭಟನೆ ಮಾಡಿದ್ದಾರೆ. ಇತ್ತ ಜಯಮಹಲ್ ಬಳಿ ಬೆಂಬಲಿಗನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

Published On - 4:32 pm, Tue, 5 July 22