Bengaluru: BMTC ಬಸ್, ಬೈಕ್ ನಡುವೆ ಅಪಘಾತ; ಸವಾರರಿಬ್ಬರು ಸಾವು

ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್​ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನಗರದ ಮಾಗಡಿ ರಸ್ತೆ ಜಂಕ್ಷನ್ ಬಳಿ ನಡೆದಿದೆ.

Bengaluru: BMTC ಬಸ್, ಬೈಕ್ ನಡುವೆ ಅಪಘಾತ; ಸವಾರರಿಬ್ಬರು ಸಾವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Nov 29, 2022 | 3:45 PM

ಬೆಂಗಳೂರು: ಬಿಎಂಟಿಸಿ ಬಸ್ (BMTC Bus) ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್​ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನಗರದ ಮಾಗಡಿ ರಸ್ತೆ ಜಂಕ್ಷನ್ ಬಳಿ ನಡೆದಿದೆ. ಮಂಜುನಾಥ್(25), ಶಿವರಾಜ್(29) ಮೃತ ದುರ್ದೈವಿಗಳು. ಮೃತರು ಗೊಲ್ಲರಹಟ್ಟಿಯ ಇಂದಿರಾ ಕಾಲೋನಿ ನಿವಾಸಿಗಳು ಎಂದು ತಿಳಿಬಂದಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕನ್ನಡ ಗೊತ್ತಿಲ್ಲ ಎಂದು ಪಂಜಾಬ್ ಮೂಲದ ಮಹಿಳೆಗೆ ಥಳಿಸಿದ ಗುಂಪು

ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಆರೋಪಿಸಿ ಪಂಜಾಬ್ ಮೂಲದ ಮಹಿಳೆಯೊಬ್ಬರನ್ನು ಮಹಿಳೆಯರ ಗುಂಪೊಂದು ನಿಂದಿಸಿ ಥಳಿಸಿದ (Punjab woman assaulted) ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರದ (Doddabommasandra) ಸರ್ಕಾರಿ ಶಾಲೆಯ ಬಳಿ ನಡೆದಿದೆ. ಶುಕ್ರವಾರ ರಾತ್ರಿ 10ರಿಂದ 10.15ರ ನಡುವೆ ಈ ಘಟನೆ ನಡೆದಿದೆ. ನಗರದಲ್ಲಿ ಸಲೂನ್ ಮತ್ತು ಸ್ಪಾ ಹೊಂದಿರುವ ಪಂಜಾಬ್​ನ ಲೂಧಿಯಾನದ ನೀಲಂಜಿತ್ ಕೌರ್ (46) ಹಲ್ಲೆಗೊಳಗಾದವರು. 7 ವರ್ಷದ ಮಗುವನ್ನು ಉಳಿಸುವ ಪ್ರಯತ್ನದಲ್ಲಿ ಕೌರ್ ತನ್ನ ಸ್ಕೂಟರ್‌ಗೆ ಹಠಾತ್ ಬ್ರೇಕ್ ಹಾಕಿದ್ದಾರೆ. ಅದಾಗ್ಯೂ ಕೋಪಗೊಂಡ ಮಹಿಳೆಯರ ಗುಂಪು ಕೌರ್ ಅವರನ್ನು ಸುತ್ತುವರೆದು ಥಳಿಸಿದ್ದಾರೆ.

ಮಗುವಿನ ಪಾಲಕರಿಗೆ ಮಗುವನ್ನು ರಸ್ತೆಯಲ್ಲಿ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ. ಇದು ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಗುಂಪುಗೂಡಲು ಪ್ರಾರಂಭಿಸಿದ ಮಹಿಳೆಯರು ಆಕೆಗೆ ಕನ್ನಡ ಗೊತ್ತಿಲ್ಲ ಎಂದು ನಿಂದಿಸಲು ಪ್ರಾರಂಭಿಸಿದರು. ಅಲ್ಲದೆ ಕರ್ನಾಟಕದಿಂದ ಹೊರಹೋಗುವಂತೆಯೂ ಒತ್ತಾಯಿಸಿದರು. ಕೆಲವು ಮಹಿಳೆಯರು ಪ್ಲಾಸ್ಟಿಕ್ ಪೈಪ್‌ನಿಂದ ಥಳಿಸಿದ್ದು, ಕೂದಲನ್ನು ಎಳೆದಾಡಿದ್ದಾರೆ. ಏಕಾಂಗಿಯಾಗಿದ್ದ ಈಕೆ ಹತಾಶಳಾಗಿದ್ದಲ್ಲದೆ, ತನ್ನ ಮೇಲೆ ಹಲ್ಲೆ ನಡೆಸುತ್ತಿರುವ ಮಹಿಳೆಯ ವಿಡಿಯೋವನ್ನು ಮಾಡಿದ್ದಾಳೆ.

ಇದನ್ನೂ ಓದಿ: ಜಾನುವಾರಗಳಿಗೆ ನೀರು ಕುಡಿಸಲು ಹೋದ ಇಬ್ಬರು ಬಾಲಕರು ಕಲ್ಲಿನ ಕ್ವಾರಿಯಲ್ಲಿ ಬಿದ್ದು ಸಾವು

ಮಹಿಳೆಗೆ ಥಳಿಸಿದ್ದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ತಪ್ಪಿತಸ್ಥರೆಂದು ಕಂಡುಬಂದವರಿಗೆ ಶಿಕ್ಷೆಯಾಗುತ್ತದೆ ಎಂದು ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ವಿದ್ಯಾರಣ್ಯಪುರ ಪೊಲೀಸರು ಐಪಿಸಿ 143, ಐಪಿಸಿ 323, ಐಪಿಸಿ 324 (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Tue, 29 November 22