ಪಾರ್ಟಿಗೆಂದು ಕರೆದು ಹತ್ಯೆ, ಮೃತದೇಹವನ್ನು ತನ್ನದೇ ಬೈಕ್​ನಲ್ಲಿ ಊರಿಗೆ ತಂದ ಆರೋಪಿ: ಇಬ್ಬರು ಅರೆಸ್ಟ್

| Updated By: ಆಯೇಷಾ ಬಾನು

Updated on: Aug 01, 2023 | 3:44 PM

ಆನೇಕಲ್​ನಲ್ಲಿ ಮೊಹಮ್ಮದ್ ಸಲೀಂ ಎಂಬಾತನನ್ನು ಕೊಂದ ಆರೋಪಿ ನಾರಾಯಣಪ್ಪ ತನ್ನದೇ ದ್ವಿ ಚಕ್ರ ವಾಹನದಲ್ಲಿ ಮೃತದೇಹವನ್ನು ಊರಿಗೆ ತಂದಿದ್ದಾನೆ. ಸದ್ಯ ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾರ್ಟಿಗೆಂದು ಕರೆದು ಹತ್ಯೆ, ಮೃತದೇಹವನ್ನು ತನ್ನದೇ ಬೈಕ್​ನಲ್ಲಿ ಊರಿಗೆ ತಂದ ಆರೋಪಿ: ಇಬ್ಬರು ಅರೆಸ್ಟ್
ಟಿವಿಎಸ್ ಎಕ್ಸೆಲ್​ನಲ್ಲಿ ಕಟ್ಟಿಕೊಂಡು ಮೃತದೇಹ ತಂದ ಆರೋಪಿ
Follow us on

ಆನೇಕಲ್, ಆ.01: ಆನೇಕಲ್​ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿ ತನ್ನ ಸ್ನೇಹಿತನನ್ನೇ ಕೊಲೆ(Murder) ಮಾಡಿ ಬಳಿಕ ಮೃತದೇಹವನ್ನು ತನ್ನ ಬೈಕಿನಲ್ಲೇ ಊರಿಗೆ ತಂದಿದ್ದಾನೆ. ಆನೇಕಲ್ ತಾಲೂಕಿನ ಮುಗಳೂರು ಗ್ರಾಮದಲ್ಲಿ ಮೊಹಮ್ಮದ್ ಸಲೀಂ ಎಂಬಾತನನ್ನು ಕೊಂದ ಆರೋಪಿ ನಾರಾಯಣಪ್ಪ ತನ್ನದೇ ದ್ವಿ ಚಕ್ರ ವಾಹನದಲ್ಲಿ ಮೃತದೇಹವನ್ನು ಊರಿಗೆ ತಂದಿದ್ದಾನೆ. ಸದ್ಯ ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ (ಜು.31) ರಾತ್ರಿ ಚರಣ್ ಎಂಬ ವ್ಯಕ್ತಿ ಬರ್ತಡೇ ಪಾರ್ಟಿ ಇದೆ ಎಂದು ಸಲೀಂನನ್ನು ಕರೆಸಿಕೊಂಡಿದ್ದ. ಬಳಿಕ ಇಬ್ಬರೂ ಸಲೀಂ ಕೊಲ್ಲಲು ಪ್ಲ್ಯಾನ್ ಮಾಡಿದ್ದಾರೆ. ಸಲೀಂ ಪಾರ್ಟಿಗೆ ಬರುತ್ತಿದ್ದಂತೆ ನಾರಾಯಣಪ್ಪನ ಜೊತೆಗೆ ಹೋಗಿದ್ದ. ಈ ವೇಳೆ ಮದ್ಯಪಾನ ಮಾಡಿಸಿ ಬಳಿಕ ಇಟ್ಟಿಗೆಯಿಂದ ತಲೆಗೆ ಹೊಡೆದು ಸಲೀಂ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹ ಅಲ್ಲೇ ಬಿಟ್ಟು ತೆರಳಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ನಾರಾಯಣಪ್ಪನಿ ವಾಪಾಸ್ ಊರಿಗೆ ಬಂದಿದ್ದಾನೆ. ಆಗ ಸಲೀಂ ಎಲ್ಲಿದ್ದಾನೆ ಎಂದು ಕುಟುಂಬಸ್ಥರು ವಿಚಾರಿಸಿದ್ದಾರೆ.

ನಾರಾಯಣಪ್ಪ ಮತ್ತೆ ಕೊಲೆ ನಡೆದ ಜಾಗಕ್ಕೆ ವಾಪಸ್ ಹೋಗಿ ಸಲೀಂನ ಮೃತ ದೇಹವನ್ನ ಟಿವಿಎಸ್ ಎಕ್ಸೆಲ್​ನಲ್ಲಿ ಕಟ್ಟಿಕೊಂಡು ಊರಿಗೆ ತಂದಿದ್ದಾನೆ. ಮೃತದೇಹ ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸದ್ಯ ನಾರಾಯಣಪ್ಪ ಮತ್ತು ಚರಣ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರ ಬಾಯ್ಬಿಡಿಸುತ್ತಿದ್ದಾರೆ. ಅನೈತಿಕ ಸಂಬಂಧದ ಕಾರಣಕ್ಕೆ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗಿದ್ದು ಸರ್ಜಾಪುರ ಪೊಲೀಸರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಖುಷ್​​ ಖುಷಿಯಾಗಿದ್ದ ನವದಂಪತಿ ಬೆಳ್ಳಂಬೆಳಗ್ಗೆ ಜೋಡಿಯಾಗಿಯೇ ಶವವಾದರು: ನವದಂಪತಿಯದ್ದು ಕೊಲೆಯೋ, ಆತ್ಮಹತ್ಯೆಯೋ?

ಕುಡಿದ ಅಮಲಿನಲ್ಲಿ ಕ್ಯಾಂಟರ್ ಚಾಲನೆ, ಇಬ್ಬರು ಪಾದಚಾರಿಗಳ ಸಾವು

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಬಯೋಕಾನ್​ ಕಂಪನಿ ಎದುರು ದುರ್ಘಟನೆ ಸಂಭವಿಸಿದೆ. ಕುಡಿದ ಅಮಲಿನಲ್ಲಿ ಕ್ಯಾಂಟರ್ ಚಾಲನೆ ಮಾಡಿಕೊಂಡು ಬಂದ ಸವಾರ ಪಾದಚಾರಿಗಳ ಮೇಲೆ ಕ್ಯಾಂಟರ್ ಹರಿಸಿದ್ದಾನೆ. ಈ ಪರಿಣಾಮ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ. ಆಶಿಕ್(28), ಮನೋಜ್ ಕುಮಾರ್(30) ಮೃತ ದುರ್ದೈವಿಗಳು. ಅಪಘಾತ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಫ್ರೂಟ್ ಮಾರ್ಕೆಟ್​ನಿಂದ ಹಣ್ಣು ಲೋಡ್ ಮಾಡಿಕೊಂಡು ಅತೀ ವೇಗವಾಗಿ ಬಂದ ಕ್ಯಾಂಟರ್ ನಿಯಂತ್ರಣ ಕಳೆದುಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಇನ್ನು ಮೃತರು ಹೊಟ್ಟೆಪಾಡಿಗಾಗಿ ದೂರದ ಬಿಹಾರ ಮತ್ತು ತಮಿಳುನಾಡಿನಿಂದ ಬಂದಿದ್ದರು. ಸದ್ಯ ಹೆಬ್ಬಗೋಡಿ ಠಾಣೆ ಪೊಲೀಸರು ಚಾಲಕ, ಕ್ಲೀನರ್​ನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:41 pm, Tue, 1 August 23