ಖುಷ್​​ ಖುಷಿಯಾಗಿದ್ದ ನವದಂಪತಿ ಬೆಳ್ಳಂಬೆಳಗ್ಗೆ ಜೋಡಿಯಾಗಿಯೇ ಶವವಾದರು: ನವದಂಪತಿಯದ್ದು ಕೊಲೆಯೋ, ಆತ್ಮಹತ್ಯೆಯೋ?

ಸಂತೋಷದಿಂದಿದ್ದ ದಂಪತಿ ಮೊನ್ನೆ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮಕ್ಕೆ ಬಂದಿದ್ದು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದ್ರೆ ರಾತ್ರಿ ಊಟ ಮಾಡಿ, ಮೊಬೈಲ್ ಮನೆಯಲ್ಲೆ ಬಿಟ್ಟು ಹೊರಗಡೆ ಹೋದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಖುಷ್​​ ಖುಷಿಯಾಗಿದ್ದ ನವದಂಪತಿ ಬೆಳ್ಳಂಬೆಳಗ್ಗೆ ಜೋಡಿಯಾಗಿಯೇ ಶವವಾದರು: ನವದಂಪತಿಯದ್ದು ಕೊಲೆಯೋ, ಆತ್ಮಹತ್ಯೆಯೋ?
ನವದಂಪತಿಯದ್ದು ಕೊಲೆಯೋ, ಆತ್ಮಹತ್ಯೆಯೋ?
Follow us
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on: Aug 01, 2023 | 10:16 AM

ಜಸ್ಟ್ ಮೂರು ತಿಂಗಳಿಂದಷ್ಟೆ ಪ್ರೀತಿಸಿ ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದರು. ಜೊತೆಗೆ ಒಂದೇ ಜಾತಿ, ಎಲ್ಲ ನಮ್ಮವರೆ ಅಂತ ಮನೆಯವರು ಸಹ ಒಂದಾಗಿದ್ದು ದಂಪತಿಗಳು ಸಹ ಸುಖ ಸಂಸಾರ ಮಾಡಿಕೊಂಡು ಬರ್ತಿದ್ರು. ಆದ್ರೆ ಕಳೆದ ರಾತ್ರಿ ಸಂಬಂಧಿಕರ ಮನೆಗೆ ಬಂದಿದ್ದ ಆ ದಂಪತಿ ಬೆಳಗಾಗ್ತಿದ್ದಂತೆ ಶವವಾಗಿ ಪತ್ತೆಯಾಗಿದ್ದು ಗ್ರಾಮಕ್ಕೆ ಗ್ರಾಮವೆ ಬೆಚ್ಚಿ ಬಿದ್ದಿದೆ. ಕಷ್ಟ ಬಂದ್ರು ಸುಖ ಬಂದ್ರು ಜೊತೆಯಾಗಿರೋಣ, ಏಳೇಳು ಜನ್ಮಕ್ಕೂ ಒಂದಾಗಿ ಬಾಳೋಣ ಅಂತ ಮೊದಲ ನೋಟದಲ್ಲೆ ಪ್ರೀತಿಯ ಬಲೆಗೆ ಬಿದ್ದಿದ್ದ ಈ ಜೋಡಿ ನೂರಾರು ಕನಸುಗಳನ್ನ ಹೊತ್ತು ಜಸ್ಟ್ ಮೂರು ತಿಂಗಳಿಂದಷ್ಟೆ ಮದುವೆಯಾಗಿದ್ರು (Love Marriage). ನೂತನ ವಧುವಿನ ಕೈನಲ್ಲಿದ್ದ ಹಸಿರು ಬಳೆಗಳು ಸಹ ಇನ್ನೂ ಒಡೆದಿಲ್ಲ. ಇನ್ನೂ ನವದಂಪತಿಯಂತೆ ಖುಷಿ ಖುಷಿಯಾಗಿದ್ದ ಇವರು ನಿನ್ನೆ ಸೋಮವಾರ ಬೆಳ್ಳಂಬೆಳಗ್ಗೆ ಜೋಡಿಯಾಗಿಯೇ ಶವವಾಗಿ (Murder, Suicide) ಪತ್ತೆಯಾಗುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ.

ಹೌದು ಅಂದಹಾಗೆ ಈ ಪೊಟೋದಲ್ಲಿರುವ ಈ ಜೋಡಿಯ ಹೆಸರು ರಮೇಶ್ ಮತ್ತು ಸಹನಾ ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ (Bijjavara, Devanahalli) ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈ ಜೋಡಿ ಜಸ್ಟ್ ಮೂರು ತಿಂಗಳಿಂದಷ್ಟೆ ಪ್ರೀತಿಸಿ ಮದುವೆಯಾಗಿದ್ರು. ಮೃತ ರಮೇಶ ಹೆಣ್ಣು ನೋಡೋಕ್ಕೆ ಅಂತ ಶಿಡ್ಲಘಟ್ಟದ ದಿಬ್ಬೂರಹಳ್ಳಿ ಬಳಿಯ ಸಹನಾಳ ಮನೆಗೆ ತೆರಳಿದ್ದಾಗ ಮೊದಲ ನೋಟದಲ್ಲೆ ಇಬ್ಬರಿಗೂ ಲವ್ ಆಗಿದೆ.

ಆದ್ರೆ ಎರಡು ಮನೆಯವರ ಕೊಟ್ಟು ತೆಗೆದುಕೊಳ್ಳುವ ಮಾತುಕತೆಯಲ್ಲಿ ಹೊಂದಾಣಿಕೆಯಾಗದೆ ಸಂಬಂಧ ಬೇಡ ಅಂದುಕೊಂಡಿದ್ದಾರೆ. ಆದ್ರೆ ಅಷ್ಟರಲ್ಲೆ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದಿದ್ದ ಕಾರಣ ಮಾತನಾಡಿಕೊಂಡು ಮನೆ ಬಿಟ್ಟು ಬಂದು ಮದುವೆಯಾಗಿದ್ದಾರೆ. ಇನ್ನು ಮಕ್ಕಳು ಮದುವೆಯಾಗಿದ್ದಾರೆ ಅಂತ ಮನೆಯವರು ಸಹ ಸಹಮತ ಕೊಟ್ಟಿದ್ದು, ಮೂರು ತಿಂಗಳ ಹಿಂದೆ ಇಬ್ಬರ ಮದುವೆಗೆ ಎರಡೂ ಮನೆಯವರು ಒಪ್ಪಿ ಮುಂದಿನ ಶಾಸ್ತ್ರಗಳನ್ನ ಮಾಡಿದ್ದರಂತೆ.

ಹೀಗಾಗಿ ಎಲ್ಲಾ ಅಂದುಕೊಂಡಂತೆ ಆಯ್ತು ಅಂತ ಸಂತೋಷದಿಂದಿದ್ದ ದಂಪತಿ ಎರಡು ದಿನದ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮಕ್ಕೆ ಬಂದಿದ್ದು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದ್ರೆ ರಾತ್ರಿ ಊಟ ಮಾಡಿ, ಮೊಬೈಲ್ ಗಳನ್ನು ಮನೆಯಲ್ಲೆ ಬಿಟ್ಟು ಹೊರಗಡೆ ಹೋದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ರಾತ್ರಿ ಮನೆಬಿಟ್ಟು ಹೋದ ದಂಪತಿ ಎಷ್ಟೋತ್ತಾದ್ರು ಮನೆಗೆ ಬಾರದಿದ್ದಾಗ ಸಂಬಂದಿಗಳು ಎಲ್ಲೆಡೆ ಹುಡುಕಾಡಿ ಬರ್ತಾರೆ ಬಿಡು ಅಂತ ಸುಮ್ಮನಾಗಿದ್ದಾರೆ. ಆದ್ರೆ ಬೆಳಗ್ಗೆ ಗ್ರಾಮಸ್ಥರು ತೋಟಗಳ ಕಡೆ ಹೋದಾಗ ರಮೇಶನ ಮೃತದೇಹ ಕೃಷಿ ಹೊಂಡದಲ್ಲಿ ತೇಲುತ್ತಿರುವುದನ್ನ ನೋಡಿ ಪೊಲೀಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

Also read: Tomato crop: ಅಯ್ಯೋ! ಇವರೆಂಥಾ ಜನ? ಹೊಟ್ಟೆಯುರಿಗೆ ಸಮೃದ್ಧವಾಗಿ ಬೆಳೆದಿದ್ದ ಟೊಮೇಟೊ ಗಿಡಗಳಿಗೆ ಆ್ಯಸಿಡ್ ಸಿಂಪಡಣೆ ಮಾಡಿ ಬೆಳೆ ನಾಶಮಾಡಿದ್ದಾರೆ!

ಹೀಗಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ನೀರಿನಲ್ಲಿ ತೇಲಾಡುತ್ತಿದ್ದ ರಮೇಶನ ಮೃತದೇಹ ಹೊರತೆಗೆದು ನಂತರ ಕೃಷಿ ಹೊಂಡದ ನೀರನ್ನ ಖಾಲಿ ಮಾಡಿ ಸಹನಾಳ ಮೃತದೇಹವನ್ನು ಹೊರ ತೆಗೆದಿದ್ದಾರೆ. ಇನ್ನು ನೂತನ ದಂಪತಿ ಸಾವನ್ನಪಿದ ಹಿನ್ನೆಲೆಯಲ್ಲಿ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಸಹ ಸ್ಥಳಕ್ಕೆ ದೌಡಾಯಿಸಿ ಬಂದು ಪರಿಶೀಲನೆ ನಡೆಸಿದ್ದು ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಒಟ್ಟಾರೆ ನೂರು ಕಾಲ ಸುಖವಾಗಿ ಬಾಳಿ ಬದುಕಬೇಕಿದ್ದ ನವ ಜೋಡಿ ಮೂರು ತಿಂಗಳಿಗೆ ನಿಗೂಢವಾಗಿ ಸಾವನ್ನಪಿರುವುದು ನಿಜಕ್ಕೂ ದುರಂತ. ಇನ್ನು, ಈ ಸಂಬಂದ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ತನಿಖೆಯ ನಂತರ ನವಜೋಡಿಯ ಸಾವಿನ ರಹಸ್ಯ ಬೆಳಕಿಗೆ ಬರಬೇಕಿದೆ.

ದೇವನಹಳ್ಳಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ