ಭಾರತದ ಮೊದಲ ಪರಿಸರ ಸ್ನೇಹಿ ಬೋಯಿಂಗ್: 20ನೇ ಆಕಾಸ ಏರ್​ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್

ಆಕಾಸ ಏರ್​ಲೈನ್ಸ್​ನ ಪರಿಸರ ಸ್ನೇಹಿ ಬೋಯಿಂಗ್ 737 MAX 737-8-200 ವಿಮಾನವು ಯುಎಸ್‌ಎನ ಸಿಯಾಟಲ್​ನಿಂದ ಹೊರಟು ಇಂದು ಬೆಳಗ್ಗೆ 9.31ಕ್ಕೆ ಬೆಂಗಳೂರಿಗೆ ಲ್ಯಾಂಡ್ ಮಾಡಿತು. ವಿಮಾನ ನೌಕಾಪಡೆಗೆ ಸೇರ್ಪಡೆಗೊಳ್ಳಬೇಕೆಂದರೆ ಕನಿಷ್ಠ 20 ವಿಮಾನಗಳನ್ನು ಹೊಂದಿರಬೇಕು. ಇದೀಗ ತನ್ನ 20ನೇ ವಿಮಾನವನ್ನು ಪರಿಚಯಿಸಿರುವ ಆಕಾಸ ವಿಮಾನ ಸಂಸ್ಥೆ ಇದೀಗ ವಿಮಾನ ನೌಕಾಪಡೆಗೂ ಸೇರ್ಪಡೆಗೊಂಡಿದೆ.

ಭಾರತದ ಮೊದಲ ಪರಿಸರ ಸ್ನೇಹಿ ಬೋಯಿಂಗ್: 20ನೇ ಆಕಾಸ ಏರ್​ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್
ಆಕಾಸ ಏರ್
Follow us
ನವೀನ್ ಕುಮಾರ್ ಟಿ
| Updated By: Rakesh Nayak Manchi

Updated on: Aug 01, 2023 | 10:02 PM

ದೇವನಹಳ್ಳಿ, ಆಗಸ್ಟ್ 1: ಕಡಿಮೆ ಹೊಗೆ ಹೊರಸೂಸುವ ದೇಶದಲ್ಲೇ ಮೊದಲ ಪರಿಸರ ಸ್ನೇಹಿ ಬೋಯಿಂಗ್‌ ಹೊಂದಿರುವ 20ನೇ ವಿಮಾನವನ್ನು ಆಕಾಸ ಏರ್‌ಲೈನ್‌ (Akasa Airlines) ಇಂದು ಪರಿಚಯಿಸಿದೆ. ಪರಿಸರ ಸ್ನೇಹಿ ಬೋಯಿಂಗ್ ಆದ 737 MAX 737-8-200 ವಿಮಾನವು ಯುಎಸ್‌ಎನ ಸಿಯಾಟಲ್​ನಿಂದ ಹೊರಟು ಇಂದು ಬೆಳಗ್ಗೆ 9.31ಕ್ಕೆ ಬೆಂಗಳೂರು (Bengaluru) ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿತು.

ಕಳೆದ ವರ್ಷದ ತನ್ನ ವಿಮಾನಯಾವನ್ನು ಪ್ರಾರಂಭಿಸಿದ ಆಕಾಸ ವಿಮಾನ ಸಂಸ್ಥೆಯು ಒಂದು ವರ್ಷದೊಳಗೆ 20 ವಿಮಾನವನ್ನು ವಿವಿಧ ಮಾರ್ಗಗಳಿಗೆ ತೆರೆದಿದೆ. ಇನ್ನು ವಿಮಾನ ನೌಕಾಪಡೆಗೆ ಸೇರ್ಪಡೆಗೊಳ್ಳಬೇಕೆಂದರೆ ಕನಿಷ್ಠ 20 ವಿಮಾನಗಳನ್ನು ಹೊಂದಿರಬೇಕು. ಇದೀಗ ತನ್ನ 20ನೇ ವಿಮಾನವನ್ನು ಪರಿಚಯಿಸಿರುವ ಆಕಾಸ ವಿಮಾನ ಸಂಸ್ಥೆ ಇದೀಗ ವಿಮಾನ ನೌಕಾಪಡೆಗೂ ಸೇರ್ಪಡೆಗೊಂಡಿದೆ.

ಈ ಕುರಿತು ಮಾತನಾಡಿದ ಆಕಾಸ ಏರ್​ಲೈನ್ಸ್​ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ. ಅದೂ ಅಲ್ಲದೆ ಮೊದಲ ಬಾರಿಗೆ ಬೋಯಿಂಗ್‌ 737 MAX ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಈ ಬೋಯಿಂಗ್‌ನ ವಿಶೇಷತೆ ಎಂದರೆ, ಇದು ಸಾಮಾನ್ಯ ಎಂಜಿನ್‌ಗಿಂತ ಶೇ.20ರಷ್ಟು ಕಡಿಮೆ ಇಂಧನ ಉಗುಳಲಿದ್ದು ಹೆಚ್ಚು ಪರಿಸರ ಸ್ನೇಹಿ ವಿಮಾನವಾಗಲಿದೆ.

ಇದನ್ನೂ ಓದಿ: Jet Fuel Price: ದುಬಾರಿಯಾಗಲಿದೆ ವಿಮಾನ ಪ್ರಯಾಣ; ವಿಮಾನಗಳಿಗೆ ಬಳಸುವ ಎಟಿಎಫ್ ಇಂಧನದ ಬೆಲೆ ಹೆಚ್ಚಳ

ಇಂಧನ ದಕ್ಷತೆಯನ್ನು ಸಹ ಇದು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ. ಈ ಬೋಯಿಂಗ್‌ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಇದಷ್ಟೇ ಅಲ್ಲದೆ, ಬೇರೆ ವಿಮಾನಗಳಂತೆ ಇದು ಹೆಚ್ಚು ಶಬ್ಧ ಮಾಡುವುದಿಲ್ಲ. ಶೇ.50ರಷ್ಟು ಕಡಿಮೆ ಶಬ್ದ ಮಾಡಲಿದ್ದು, ಶಬ್ದ ಮಾಲಿನ್ಯವನ್ನು ತಡೆಯಲಿದೆ ಎಂದು ವಿವರಿಸಿದರು.

ಆಗಸ್ಟ್ 2022 ರಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಆಕಾಸ ವಿಮಾನಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾಗಿದೆ. ಇಂದು ಇದು 20 ವಿಮಾನಗಳ ಸಮೂಹವನ್ನು ಹೊಂದಿದೆ ಮತ್ತು ಇದುವರೆಗೆ 4 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ. 16 ಭಾರತೀಯ ನಗರಗಳನ್ನು ಸಂಪರ್ಕಿಸುವ 35 ವಿವಿಧ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ