ಬೆಂಗಳೂರು ಹೋಟೆಲ್ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್; ಯಾವ ತಿಂಡಿಗೆ ಎಷ್ಟು ದರ? ಇಲ್ಲಿದೆ ಪರಿಷ್ಕೃತ ಪಟ್ಟಿ

ಬೆಂಗಳೂರಿನ ದರ್ಶಿನಿ, ಸರ್ವೀಸ್ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಎಸಿ ಸರ್ವೀಸ್ ಹೋಟೆಲ್‌ಗಳಲ್ಲಿನ ತಿಂಡಿ ತಿನಿಸು, ಪಾನೀಯಗಳ ಪರಿಷ್ಕೃತ ದರ ಪಟ್ಟಿ ಇಲ್ಲಿದೆ.

ಬೆಂಗಳೂರು ಹೋಟೆಲ್ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್; ಯಾವ ತಿಂಡಿಗೆ ಎಷ್ಟು ದರ? ಇಲ್ಲಿದೆ ಪರಿಷ್ಕೃತ ಪಟ್ಟಿ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Aug 01, 2023 | 5:01 PM

ಬೆಂಗಳೂರು, ಆಗಸ್ಟ್ 1: ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಹೋಟೆಲ್ (Hotel Food) ಗ್ರಾಹಕರ ಮೇಲೂ ತಟ್ಟಿದೆ. ಬೆಂಗಳೂರಿನ ಹೋಟೆಲ್, ದರ್ಶಿನಿ ಹಾಗೂ ಉಪಾಹಾರ ಮಂದಿರಗಳಲ್ಲಿ ಮಂಗಳವಾರದಿಂದ (August 1) ತಿಂಡಿ ತಿನಿಸುಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘವು (Hotel Owners Association in Bengaluru) ಆಹಾರ ಪದಾರ್ಥಗಳ ಬೆಲೆಯನ್ನು ಶೇ 10 ವರೆಗೆ ಹೆಚ್ಚಿಸುವಂತೆ ಹೋಟೆಲ್‌ಗಳಿಗೆ ಸೂಚಿಸಿದೆ. ಆಗಸ್ಟ್ 1 ರಿಂದ ತರಕಾರಿ, ಪದಾರ್ಥಗಳು ಮತ್ತು ಡೈರಿ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ. ಪ್ರತಿ ಲೀಟರ್ ಹಾಲಿನ ಬೆಲೆ 3 ರೂ. ಹೆಚ್ಚಳವಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ನಗರದ ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.

ಹೋಟೆಲ್ ತಿಂಡಿಯ ಬೆಲೆ ಏರಿಕೆಯ ಬಗ್ಗೆ ಗ್ರಾಹಕರು ಆಶ್ಚರ್ಯಪಡುವುದಿಲ್ಲ. ತರಕಾರಿ ಮತ್ತು ಪದಾರ್ಥಗಳ ಬೆಲೆ ಏರಿಕೆಯ ಬಗ್ಗೆ ಅವರಿಗೆ ತಿಳಿದಿದೆ. ಏಕೆಂದರೆ ಅವರು ಅವುಗಳನ್ನು ನಿಯಮಿತವಾಗಿ ಮನೆಯಲ್ಲಿ ಬಳಸುತ್ತಾರೆ. ಶೇ 10ರಷ್ಟು ದರ ಹೆಚ್ಚಿಸುವಂತೆ ಹೋಟೆಲ್ ಮಾಲೀಕರ ಸಂಘ ಸಲಹೆ ನೀಡಿದ್ದು, ಅದನ್ನು ಪಾಲಿಸುತ್ತಿದ್ದೇವೆ ಎಂದು ಬೆಂಗಳೂರಿನ ದರ್ಶಿನಿ ಹೋಟೆಲ್​ಗಳ ಮಾಲೀಕರು ಹೇಳಿದ್ದಾರೆ.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್ ಪಡೆಯಲು ನೀವೂ ಅರ್ಹರೇ? ತಿಳಿಯುವ ವಿಧಾನ ಇಲ್ಲಿದೆ

ಬೆಂಗಳೂರಿನ ದರ್ಶಿನಿ, ಸರ್ವೀಸ್ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಎಸಿ ಸರ್ವೀಸ್ ಹೋಟೆಲ್‌ಗಳಲ್ಲಿನ ತಿಂಡಿ ತಿನಿಸು, ಪಾನೀಯಗಳ ಪರಿಷ್ಕೃತ ದರ ಪಟ್ಟಿ ಇಲ್ಲಿದೆ (ಕೃಪೆ; ನ್ಯೂಸ್ 9 ವರದಿ) (ದರ ರೂಪಾಯಿಗಳಲ್ಲಿ).

ಅಗತ್ಯ ವಸ್ತುಗಳ ದರ ಹೆಚ್ಚಳದ ಕಾರಣ ತಿಂಡಿ, ತಿನಿಸುಗಳ ಬೆಲೆ ಹೆಚ್ಚಿಸಲು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈ ಹಿಂದೆಯೇ ಚಿಂತನೆ ನಡೆಸಿತ್ತು. ಅದರ ಬೆನ್ನಲ್ಲೇ ಸರ್ಕಾರವು ಹಾಲಿನ ದರ ಹೆಚ್ಚಳಕ್ಕೆ ನಿರ್ಧಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ ಹೋಟೆಲ್ ಮಾಲೀಕರ ಸಂಘ ಅಂತಿಮವಾಗಿ ಶೇ 10ರ ದರ ಹೆಚ್ಚಳಕ್ಕೆ ತೀರ್ಮಾನ ಕೈಗೊಂಡಿತು. ಪರಿಷ್ಕೃತ ದರ ಈಗ ಅಸ್ತಿತ್ವಕ್ಕೆ ಬಂದಿದ್ದು, ಗ್ರಾಹಕರ ಜೇಬು ಸುಡಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ