AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato crop: ಅಯ್ಯೋ! ಇವರೆಂಥಾ ಜನ? ಹೊಟ್ಟೆಯುರಿಗೆ ಸಮೃದ್ಧವಾಗಿ ಬೆಳೆದಿದ್ದ ಟೊಮೇಟೊ ಗಿಡಗಳಿಗೆ ಆ್ಯಸಿಡ್ ಸುರಿದು ಬೆಳೆ ನಾಶ ಮಾಡಿದ್ದಾರೆ!

Jealousy at its peak! ಅತ್ತ ರೈತ ಟೊಮೇಟೊ ಮಾರಾಟ ಮಾಡಲು ತಮಿಳುನಾಡಿಗೆ ಹೋದ ಸಂದರ್ಭದಲ್ಲಿ ಇತ್ತ ಕಿಡಿಗೇಡಿಗಳು ಆತನ ತೋಟದಲ್ಲಿ ನಳನಳಿಸುತ್ತಿದ್ದ ಸುಮಾರು ಮುನ್ನೂರು ಗಿಡಗಳಿಗೆ ಆ್ಯಸಿಡ್ ಮಿಶ್ರಿತ ನೀರನ್ನ ಸಿಂಪಡಣೆ ಮಾಡಿದ್ದಾರೆ!

Tomato crop: ಅಯ್ಯೋ! ಇವರೆಂಥಾ ಜನ? ಹೊಟ್ಟೆಯುರಿಗೆ ಸಮೃದ್ಧವಾಗಿ ಬೆಳೆದಿದ್ದ ಟೊಮೇಟೊ ಗಿಡಗಳಿಗೆ ಆ್ಯಸಿಡ್  ಸುರಿದು ಬೆಳೆ ನಾಶ ಮಾಡಿದ್ದಾರೆ!
ಹೊಟ್ಟೆಯುರಿಗೆ ಸಮೃದ್ಧವಾಗಿ ಬೆಳೆದಿದ್ದ ಟೊಮೇಟೊ ಗಿಡಗಳಿಗೆ ಆ್ಯಸಿಡ್ ಸಿಂಪಡಣೆ
ಪ್ರಶಾಂತ್​ ಬಿ.
| Edited By: |

Updated on:Aug 01, 2023 | 10:50 AM

Share

ಮಂಡ್ಯ, ಜುಲೈ 31: ಆ ರೈತ ಲಕ್ಷಾಂತರ ರೂ ಸಾಲ ಮಾಡಿ ಟಮೋಟಾ ಬೆಳೆಯನ್ನ ಬೆಳೆದಿದ್ದ. ಆತನ ಶ್ರಮ ಮತ್ತು ನೀರಿಕ್ಷೆಗೆ ತಕ್ಕಂತೆ ಉತ್ತಮ ಬೆಳೆ ಕೂಡ ಬಂದಿತ್ತು. ಅಷ್ಟೇ ಅಲ್ಲ, ಆತನ ನಿರೀಕ್ಷೆಗೂ ಮೀರಿದ ಬೆಲೆ ಕೂಡ ಈ ಬಾರಿ ಸಿಗುವುದಿತ್ತು. ಆದರೆ ಇದು ಕೆಲ ಕಿಡಿಗೇಡಿಗಳ (Miscreants) ಕಣ್ಣನ್ನ ಕೆಂಪು ಮಾಡಿಸಿತು (Jealous). ಹೀಗಾಗಿ ಟೊಮೇಟೊ ಗಿಡಗಳಿಗೆ ( tomato crop) ಆ್ಯಸಿಡ್ ಮಿಶ್ರಿತ (Acid) ನೀರನ್ನ ಸಿಂಪಡಣೆ ಮಾಡಿ ಬೆಳೆಯನ್ನೇ ನಾಶಮಾಡಿಬಿಟ್ಟಿದ್ದಾರೆ. ಹೌದು ಕೆಂಪುಸುಂದರಿ ಟೊಮೇಟೊಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆಯಿದೆ. ಮಾರುಕಟ್ಟೆಯಲ್ಲಿ 22 ಕೆಜಿ ಕ್ರೇಟ್ ಗೆ ಸರಾಸರಿ 2500 ರಿಂದ 2800 ರೂ ಬೆಲೆ ಇದೆ. ಯಾವ ವರ್ಷ, ಯಾವ ಸಮಯದಲ್ಲೂ ಇಲ್ಲದ ಬೆಲೆ ಟೊಮೇಟೊಗೆ ಬಂದಿದೆ. ರೈತ ನೀರಿಕ್ಷೆ ಮಾಡಿರದಷ್ಟು ಬೆಲೆ ಈ ಬಾರಿ ಬಂದಿದೆ. ಹೀಗಾಗಿ ರೈತನ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ಆದರೆ ಇಲ್ಲೊಬ್ಬ ರೈತ ಮಾತ್ರ ಟೊಮೇಟೊ ಬೆಳೆ ಬೆಳೆದು ಕಂಗಾಲು ಪಡುತ್ತಿದ್ದಾನೆ. ಆತ ಬೆಳೆದಿರೋ ಟೊಮೇಟೊ ಬೆಳೆಯ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ. ರೈತ ಬೆಳೆದ ಟಮೋಟಾ ಬೆಳೆಗೆ ಆ್ಯಸಿಡ್ ಮಿಶ್ರಿತ ನೀರನ್ನ ಸಿಂಪಡಣೆ ಮಾಡಿ ಬೆಳೆಯನ್ನೇ ನಾಶಪಡಿಸಿದ್ದಾರೆ. ಅಂದಹಾಗೆ ಇಂತಹ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ (Malavalli, Mandya) ಹಂಗ್ರಾಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು ಹಂಗ್ರಾಹಳ್ಳಿ ಗ್ರಾಮದ ರೈತ ಮಹದೇವಸ್ವಾಮಿ ಎಂಬಾತ ತನ್ನ ಅರ್ಧ ಎಕರೆ ಜಮೀನನಲ್ಲಿ ಸುಮಾರು ಒಂದು ಲಕ್ಷ ಖರ್ಚು ಮಾಡಿ ಸುಮಾರು 2500 ಟೊಮೇಟೊ ಗಿಡಗಳನ್ನ ಬೆಳೆದಿದ್ದ. ಒಳ್ಳೆಯ ಬೆಲೆಯೂ ಕೂಡ ಸಿಕ್ಕಿತ್ತು. ಅದರಂತೆ ಎರಡು ಬಾರಿ ತಮಿಳುನಾಡಿಗೆ ಮಾರಾಟ ಕೂಡ ಮಾಡಿ ಬಂದಿದ್ದ.

ಆದರೆ ಮಾರಾಟ ಮಾಡಲು ತಮಿಳುನಾಡಿಗೆ ಹೋದಂತಹ ಸಂದರ್ಭದಲ್ಲಿ ಇತ್ತ ಕಿಡಿಗೇಡಿಗಳು ಆತನ ತೋಟದಲ್ಲಿ ನಳನಳಿಸುತ್ತಿದ್ದ ಸುಮಾರು 250 ರಿಂದ 300 ಗಿಡಗಳಿಗೆ ಆ್ಯಸಿಡ್ ಮಿಶ್ರಿತ ನೀರನ್ನ ಸಿಂಪಡಣೆ ಮಾಡಿದ್ದಾರೆ. ಹೀಗಾಗಿ ಗಿಡಗಳು ಸಂಪೂರ್ಣವಾಗಿ ಬುಡದಿಂದ ಒಣಗಿ ಹೋಗಿವೆ. ತಮಿಳನಾಡಿನಿಂದ ವಾಪಸಾದ ರೈತ ಮಹದೇವಸ್ವಾಮಿ ಅದನ್ನ ಕಂಡು ಕಂಗಾಲಾಗಿದ್ದಾನೆ.

Also Read: ಇಂದಿನಿಂದ ದುಬಾರಿ ದುನಿಯಾ; ಟೊಮೆಟೊ ದರ ಬರೆಯ ಮೇಲೆ ಮತ್ತೊಂದು ಬರೆ, ಹಾಲು-ಹೋಟೆಲ್ ದರ ಹೆಚ್ಚಳ

ಅಂದಹಾಗೆ ಅರ್ಧ ಎಕರೆ ಜಮೀನಿನಲ್ಲಿ ಅಲ್ಲಲ್ಲಿ ಕಿಡಿಗೇಡಿಗಳು ಆ್ಯಸಿಡ್ ಮಿಶ್ರಿತ ನೀರನ್ನ ಹಾಕಿದ್ದಾರೆ. ಉಳಿದ ಗಿಡಗಳು ಹಚ್ಚಹಸಿರಿನಿಂದ ಚೆನ್ನಾಗಿಯೇ ಇವೆ. ಹೀಗಾಗಿ ರೈತ ಘಟನೆ ನಡೆದ ನಂತರ ಉಳಿದ ಬೆಳೆಯನ್ನಾದರೂ ಉಳಿಸಿಕೊಳ್ಳಲು ದಿನಾ ರಾತ್ರಿ ವೇಳೆ ಸ್ವತಃ ತಾನೇ ಕಾವಲು ಕಾಯುತ್ತಿದ್ದಾನೆ. ಅಲ್ಲದೆ ಆ್ಯಸಿಡ್ ದಾಳಿಯಿಂದ ನಾಶವಾಗಿರೋ ಗಿಡಗಳು ಹಾಗೂ ಮಣ್ಣನ್ನ ಪರೀಕ್ಷೆ ಮಾಡಿಸಲು ಸಹ ಮುಂದಾಗಿದ್ದಾನೆ. ಇನ್ನು ಈ ರೀತಿಯ ಘಟನೆಗಳು ಗ್ರಾಮದ ಇತರೇ ರೈತರನ್ನು ಆತಂಕಕ್ಕೆ ತಳ್ಳಿದೆ.

ಮಂಡ್ಯ ಜಿಲ್ಲೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:38 am, Tue, 1 August 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!