AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya Lady murder : 9 ವರ್ಷದ ಸುಂದರ ಸಂಸಾರ ಅವರದ್ದಾಗಿತ್ತು, ಆದರೆ ಕುಡಿತಕ್ಕೆ ದಾಸನಾದ ಗಂಡ ಹೆಂಡತಿಯನ್ನು ಸಾಯಿಸಿಬಿಟ್ಟ

ಮಂಡ್ಯ ಕ್ರೈಂ: ಕೌಟುಂಬಿಕ ಕಲಹ, ಪತ್ನಿ ಮೇಲೆ ಶಂಕೆಯಿಂದ ಕ್ರೂರಿ ಪತಿ ಹೆಂಡತಿಯನ್ನ ಮನೆಯಲ್ಲಿ ಹಾಡುಹಗಲೇ ಚಾಕುವಿನಿಂದ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಪಾಂಡವಪುರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.

Mandya Lady murder : 9 ವರ್ಷದ ಸುಂದರ ಸಂಸಾರ ಅವರದ್ದಾಗಿತ್ತು, ಆದರೆ ಕುಡಿತಕ್ಕೆ ದಾಸನಾದ ಗಂಡ ಹೆಂಡತಿಯನ್ನು ಸಾಯಿಸಿಬಿಟ್ಟ
ಕುಡಿತಕ್ಕೆ ದಾಸನಾದ ಗಂಡ ಹೆಂಡತಿಯನ್ನು ಸಾಯಿಸಿಬಿಟ್ಟ
ಪ್ರಶಾಂತ್​ ಬಿ.
| Updated By: ಸಾಧು ಶ್ರೀನಾಥ್​|

Updated on: Aug 01, 2023 | 2:50 PM

Share

ಅವರದ್ದು ಸುಂದರ ಸಂಸಾರವಾಗಿತ್ತು. ಒಂಬತ್ತು ವರ್ಷದ ಕೆಳಗೆ ವಿವಾಹವಾಗಿ ಒಂದು ಮುದ್ದಾದ ಗಂಡು ಮಗುವಿತ್ತು. ಆದರೆ ಕುಡಿತದ ದಾಸನಾಗಿದ್ದ (Alchohol) ಆತ ಪ್ರತಿನಿತ್ಯ ಪತ್ನಿ ಮೇಲೆ ಅನುಮಾನ ಪಡುತ್ತಾ ಗಲಾಟೆ ಮಾಡುತ್ತಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ರಾಜೀ ಪಂಚಾಯತಿ ಕೂಡ ಆಗಿತ್ತು. ಆದರು ಕೂಡ ಇದರಿಂದ ಸರಿಹೋಗದ ಆತ (Husband) ತನ್ನ ಹೆಂಡತಿಯನ್ನು ಭೀಕರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ. ಹೌದು ಕೌಟುಂಬಿಕ ಕಲಹ, ಪತ್ನಿ ಮೇಲೆ ಶಂಕೆ ಹಿನ್ನೆಲೆಯಲ್ಲಿ ಕಟ್ಟಿಕೊಂಡ ಹೆಂಡತಿಯನ್ನು ಕ್ರೂರಿ ಪತಿಯೊಬ್ಬ ತನ್ನ ಮನೆಯಲ್ಲೇ ಹಾಡುಹಗಲೇ ಚಾಕುವಿನಿಂದ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹುಲಿಕೆರೆ (Hulikere, Pandavapura) ಗ್ರಾಮದಲ್ಲಿ ನಡೆದಿದೆ. ಸೌಮ್ಯ(26) ಮೃತ ದುರ್ದೈವಿ (Mandya Crime).

ಇನ್ನು ಆರೋಪಿ ಗಣೇಶ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅಂದಹಾಗೆ ಲಾರಿ ಚಾಲಕನಾಗಿದ್ದ ಆರೋಪಿ ಗಣೇಶ್, ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೊಂಗಳ್ಳಿ ಗ್ರಾಮದ ಸೌಮ್ಯಳನ್ನ 9 ವರ್ಷದ ಕೆಳಗೆ ವಿವಾಹವಾಗಿದ್ದ. ಇಬ್ಬರಿಗೂ ಒಬ್ಬ ಮಗ ಕೂಡ ಇದ್ದಾನೆ. ಆದರೆ ವಿಪರೀತ ಕುಡಿತ ಚಟಕ್ಕೆ ದಾಸನಾಗಿದ್ದ ಗಣೇಶ್, ಪತ್ನಿ ಸೌಮ್ಯ ಮೇಲೆ ಸಾಕಷ್ಟು ಅನುಮಾನ ಪಡುತ್ತಿದ್ದ. ಅಲ್ಲದೆ ಪ್ರತಿನಿತ್ಯ ಗಲಾಟೆ ಸಹ ಮಾಡುತ್ತಿದ್ದ. ಈತನ ಕಿರುಕುಳ ತಾಳಲಾರದೇ ಒಮ್ಮೇ ಸೌಮ್ಯ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದಳು. ಇದರಿಂದ ಜೈಲು ಪಾಲಾಗಿದ್ದ. ಆನಂತರ ಜೈಲಿನಿಂದ ಬಂದವನು ನಾನು ಇನ್ನು ಮುಂದೆ ಸರಿಹೋಗುತ್ತೇನೆ ಎಂದು ಹೇಳಿ ಸೌಮ್ಯಳ ಜೊತೆ ಇದ್ದ. ಅಲ್ಲದೆ ಸೌಮ್ಯಳ ತವರು ಮನೆಯಲ್ಲೂ ಸಹ ಇರುತ್ತಿದ್ದ. ಆದರೆ ನಾಲ್ಕು ದಿನಗಳ ಕೆಳಗೆ ನಂಜನಗೂಡಿನಿಂದ ಹೆಂಡತಿಯನ್ನು ಕರೆದುಕೊಂಡ ಬಂದಿದ್ದ ಆತ, ನಿನ್ನೆ ಸೋಮವಾರ ಮಟಮಟ ಮಧ್ಯಾಹ್ನ ಮನೆಯಲ್ಲಿಯೇ ಆಕೆಯ ಕತ್ತು ಕುಯ್ದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿ ಗಣೇಶ್ ತಾಯಿ ಲತಾ ತಿಳಿಸಿದ್ದಾರೆ.

Also Read: ಆನೇಕಲ್: ಸಾವಿರಾರು ಮಂದಿ ಓಡಾಡುವ ಜಾಗದಲ್ಲಿದೆ ಡೇಂಜರಸ್ ಓವರ್ ಹೆಡ್ ಟ್ಯಾಂಕ್! ಯಾವುದೇ ಕ್ಷಣ ಕುಸಿಯುವ ಆತಂಕ

ಅಂದಹಾಗೆ ಆರೋಪಿ ಗಣೇಶ್ ನ ತಾಯಿ ಲತಾ ಮನೆಗೆ ಬಂದು ನೋಡಿದಾಗ ಬಾಗಿಲು ಹಾಕಿತ್ತು. ಫೋನ್ ಸಹಾ ಮಾಡಿದ್ರು ಕರೆ ಸ್ವೀಕಾರ ಮಾಡಿಲ್ಲ. ಹಂಚನ್ನ ತೆಗೆದು ನೋಡಿದಾಗ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನು ಘಟನೆ ನಂತರ ಆರೋಪಿ ಗಣೇಶ್ ಮೊಬೈಲ್ ಅನ್ನ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಇನ್ನು ಘಟನೆ ನಂತರ ಪಾಂಡವಪುರ ಠಾಣೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಮಂಡ್ಯ ಎಸ್ ಪಿ ಯತೀಶ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಕುಡಿತದ ಚಟ, ಅನುಮಾನವೆಂಬ ಪೆಡಂಭೂತಕ್ಕೆ ಬಲಿಯಾಗಿ ಕಟ್ಟಿಕೊಂಡ ಹೆಂಡತಿಯನ್ನ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇಬ್ಬರ ಗಲಾಟೆಯಲ್ಲಿ ಮಗ ಮಾತ್ರ ಅನಾಥವಾಗಿದೆ.

ಮಂಡ್ಯ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ