ಆನೇಕಲ್: ಸಾವಿರಾರು ಮಂದಿ ಓಡಾಡುವ ಜಾಗದಲ್ಲಿದೆ ಡೇಂಜರಸ್ ಓವರ್ ಹೆಡ್ ಟ್ಯಾಂಕ್! ಯಾವುದೇ ಕ್ಷಣ ಕುಸಿಯುವ ಆತಂಕ
ಡೇಂಜರಸ್ ಓವರ್ ಹೆಡ್ ಟ್ಯಾಂಕ್: ಆನೇಕಲ್ ಎಎಸ್ಬಿ ಕಾಲೇಜು ಮೈದಾನದಲ್ಲಿ ಟ್ಯಾಂಕ್ ಇದ್ದು, ಸುತ್ತಮುತ್ತಲೂ ಸುಮಾರು ಮೂರು ಸರ್ಕಾರಿ ಶಾಲೆ ಕಾಲೇಜುಗಳಿವೆ. ಜೊತೆಗೆ ನಿತ್ಯ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ವಾಯು ವಿಹಾರಕ್ಕೆ ಬರುವ ಜನರು ಜೀವ ಭಯದಲ್ಲೆಯೇ ಓಡಾಡುವಂತಾಗಿದೆ.
ಹಲವು ವರ್ಷಗಳಿಂದ ಪಟ್ಟಣಕ್ಕೆ ನೀರುಣಿಸುತ್ತಿದ್ದ ಆ ಒಂದು ಓವರ್ ಹೆಡ್ ಟ್ಯಾಂಕ್ (water tank) ಶಿಥಿಲಾವಸ್ಥೆಗೆ ತಲುಪಿ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಟ್ಯಾಂಕಿನ ಪಿಲ್ಲರ್ ಗಳೆಲ್ಲವೂ ಸಂಪೂರ್ಣ ಬಿರುಕು ಬಿಟ್ಟು ಅದಕ್ಕೆ ಹಾಕಿದ್ದ ಸಿಮೆಂಟ್ ಕಾಂಕ್ರೀಟ್ ಕೆಳಗೆ ಉದುರಿ ಬೀಳುತ್ತಿದೆ. ಯಾವ ಸಮಯದಲ್ಲಿಯಾದ್ರು ಟ್ಯಾಂಕ್ ಬೀಳುವ ಆತಂಕದಲ್ಲಿ ಜನರಿದ್ದಾರೆ. ಬನ್ನಿ ಹಾಗಾದ್ರೆ ಆ ಡೇಂಜರಸ್ ಓವರ್ ಹೆಡ್ ಟ್ಯಾಂಕ್ ಇರೋದಾದ್ರು ಎಲ್ಲಿ ಅಂತೀರ ನೋಡಿ ಈ ಸ್ಟೋರಿಯಲ್ಲಿ… ಈ ದೃಶ್ಯದಲ್ಲಿ ಕಾಣುತ್ತಿರುವ ಈ ಓವರ್ ಹೆಡ್ ಟ್ಯಾಂಕ್ ಅನ್ನು ಸುಮಾರು 30 ವರ್ಷಗಳ ಹಿಂದೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ನಿರ್ಮಿಸಲಾಗಿತ್ತು. ಆದ್ರೆ ಇದೀಗ ಟ್ಯಾಂಕ್ ಗಳ ಪಿಲ್ಲರ್ ಗಳಿಗೆ ಹಾಕಿದ್ದ ಸಿಮೆಂಟ್ ಕಾಂಕ್ರೀಟ್ ಬಿರುಕು ಬಿಟ್ಟು ಕೆಳಗೆ ಉದುರುತ್ತಿದೆ. ಟ್ಯಾಂಕ್ ನ ಪಿಲ್ಲರ್ ಗಳಿಗೆ ಹಾಕಿದ್ದ ಕಂಬಿಗಳು ಕಾಣುತ್ತಿದ್ದು, ತುಕ್ಕು ಹಿಡಿದು ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಸ್ಥಿತಿಯಲ್ಲಿದೆ (danger).
ಆನೇಕಲ್ ಪಟ್ಟಣದ (Anekal) ಎಎಸ್ಬಿ ಕಾಲೇಜು ಮೈದಾನದಲ್ಲಿ ಟ್ಯಾಂಕ್ ಇದ್ದು, ಸುತ್ತಮುತ್ತಲೂ ಸುಮಾರು ಮೂರು ಸರ್ಕಾರಿ ಶಾಲೆ ಕಾಲೇಜುಗಳಿವೆ. ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಆಟವಾಡಲು ಇದೇ ಮೈದಾನಕ್ಕೆ ಬರುತ್ತಾರೆ. ಜೊತೆಗೆ ನಿತ್ಯ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ವಾಯು ವಿಹಾರಕ್ಕೆ ಬರುವ ಜನರು ಜೀವ ಭಯದಲ್ಲೆಯೇ ಓಡಾಡುವಂತಾಗಿದೆ. ಇಂತಹ ಸಮಯದಲ್ಲಿ ಶಿಥಿಲಗೊಂಡಿರುವ ಟ್ಯಾಂಕ್ ಅನ್ನು ಕೂಡಲೇ ತೆರವುಗೊಳಿಸದೆ ಹೋದ್ರೆ ಮುಂದೊಂದು ದಿನ ಭಾರಿ ಅನಾಹುತ ಸಂಭವಿಸುತ್ತಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶಿಥಿಲಗೊಂಡಿರುವ ಟ್ಯಾಂಕ್ ಅನ್ನು ತೆರವುಗೊಳಿಸಬೇಕಿದೆ.
ಇನ್ನು ಪ್ರತಿಯೊಂದು ಕಟ್ಟಡಕ್ಕೂ ಇಂತಿಷ್ಟು ಜೀವಿತಾವಧಿ ಅಂತ ಇರುತ್ತದೆ. ಈ ಓವರ್ ಹೆಡ್ ಟ್ಯಾಂಕಿನ ಸ್ಥಿತಿ ಸಂಪೂರ್ಣ ಹಾಳಾಗಿದ್ದು, ಯಾವ ಸಮಯದಲ್ಲಿಯಾದರೂ ಕುಸಿಯುವ ಭಯ ಕಾಡುತ್ತಿದೆ. ಈಗಾಗಲೇ ಸಿಮೆಂಟ್ ಪ್ಲಾಸ್ಟಿಂಗ್ ಕಿತ್ತು ಬಂದು ಕಬ್ಬಿಣದ ಕಂಬಿಗಳು ಕಾಣುತ್ತಿವೆ. ಟ್ಯಾಂಕ್ ನಲ್ಲಿ ನೀರಿನ ಸೋರಿಕೆಯಾಗುತ್ತಿದ್ದು, ಇದರಿಂದಾಗಿ ಅಲ್ಲಿ ಓಡಾಡುವಂತ ಜನರು ಹಾಗೂ ಮೈದಾನಕ್ಕೆ ಆಟವಾಡಲು ಬರುವ ವಿಧ್ಯಾರ್ಥಿಗಳು ಈ ಟ್ಯಾಂಕ್ ಹತ್ತಿರ ಹೋಗೋಕು ಸಹ ಭಯಪಡುತ್ತಿದ್ದಾರೆ. ಅಲ್ಲದೆ ಇದೇ ಮೈದಾನದಲ್ಲಿ ಎಲ್ಲಾ ಸರ್ಕಾರಿ ರಾಷ್ಟ್ರೀಯ ಹಬ್ಬಗಳು ಸಹ ನಡೆಯುತ್ತವೆ. ಆಗ ಆನೇಕಲ್ ಭಾಗದ ಎಲ್ಲಾ ಶಾಲಾ ಮಕ್ಕಳು ಸೇರುತ್ತಾರೆ. ಅಂತಹ ಸಂದರ್ಭದಲ್ಲಿ ಅನಾಹುತ ಸಂಭವಿಸಿದ್ರೆ ಪ್ರಾಣ ಹಾನಿಯಾಗುತ್ತದೆ. ಹಾಗಾಗಿ ಟ್ಯಾಂಕ್ ಅನ್ನು ತೆರವುಗೊಳಿಸಬೇಕೆಂದು ಮಾಜಿ ಅಧ್ಯಕ್ಷರು-ಹಾಲಿ ಪುರಸಭಾ (ಆನೇಕಲ್) ಸದಸ್ಯರಾದ ಪದ್ಮನಾಭ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಪಟ್ಟಣಕ್ಕೆ ಹಲವು ವರ್ಷಗಳಿಂದ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕ್ ಸಂಪೂರ್ಣ ಬಿರುಕು ಬಿಟ್ಟು ಕುಸಿಯುವ ಮಟ್ಟಕ್ಕೆ ತಲುಪಿದ್ದು, ಜನರು ಜೀವ ಭಯದಲ್ಲಿಯೇ ಓಡಾಡುವಂತಾಗಿದೆ. ಇನ್ನಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಓವರ್ ಹೆಡ್ ಟ್ಯಾಂಕ್ ಅನ್ನು ತೆರವು ಗೊಳಿಸಲು ಮುಂದಾಗುತ್ತಾರ ಕಾದುನೋಡಬೇಕಿದೆ.
ಆನೇಕಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ